- ೧೧. ಅವರೆ, ಗಂಢರೆಂದು ನೇಮಿಸಲಾಗಿ, ಆ ಕಾಳೀದೇವಿಯು ಸಮಸ್ತ ರಾಯರನ್ನು ನಿರಾಕರಿಸಿ ಕಣ್ಣು ಮುಚ್ಚಿಕೊಂಡು ಹೋಗಿ ತನ್ನ ನಿಜಪತಿಯಾದಂಥಾ ಭೀಮಸೇನನ ಕೊರಳಿಗೆ ಮಾಲಿ ಹಾಕಿ ದಳು” ಎಂದು ವಿಸ್ತಾರದಿಂದ ಹೇಳಿರುವರು. ಸ್ವಾದಿರಾಜರು, ಸಾಕ್ಷಾ ತ್ ಋಜುಗಣಸ್ಥರು ಸರ್ವಜ್ಞರ ಪೂರ್ಣ ಅಭಿಪ್ರಾಯವನ್ನರಿತ ವರು, ಸಕಲ ಗ್ರಂಥಾರ್ಥವನ್ನು ನಿರ್ಣೈಸಿ ಹೇಳಿರುವರು, ಜ್ಞಾನಿ ಗಳಾದ ಭಾರತಿದೇವಿಯರಿಗೆ, ಕಣ್ಣು ಕಟ್ಟಿದರೇನು, ಕಣ್ಣು ತೆರಧಿ ದ್ದರೇನು, ಇದರಿಂದ ಯಾವ ಬಾಧಕವೂ ಇಲ್ಲ. ನಮ್ಮಂಥ ಅಜ್ಞ ರುಗಳಾದವರು ನಿಜಸ್ಥಿಯನ್ನು ಅರಿಯದಲೇಯೆ ಸಂದೇಹ ಗ್ರಸ್ತರಾಗುವೆವು ಹೊರತಾಗಿ ಜ್ಞಾನಿಗಳಾದವರು, ಎಂದೂ ಸಂದೇಹಕ್ಕೊಳಗಾಗುವದಿಲ್ಲವೆಂಬುದನ್ನು ಇದೇ ಭಾರತಿದೇವಿ ವಾಯುದೇವರ ವಿಷಯವಾಗಿ, ಗರುಡಪುರಾಣ ಬ್ರಹ್ಮಕಾಂಡ ದಲ್ಲಿ, ಸ್ಪಷ್ಟವಾಗಿ ಹೇಳಿರುವರು. सुराणां सुरभोग्यानां भोगां जानंति देवताः ।। न जानंत्येवमयस्तु दोषदहयुतोः यतः । क्षीरनीर विवेकं च हंसो वेत्ति न चात्परः ।। अतः स्वभर्तृ संयोगं कृष्णा देहे विचिंतयेत् ।। कृष्णादेहन्यगामित्वं नैवचिंत्यं खगेश्वर । ಮತ್ತು ಶ್ರೀಮಜ್ಜಗನ್ನಾಥರಾಯರು, ಶ್ರೀಹರಿಕಥಾಮೃತಸಾರ ದಲ್ಲಿಯೂ, ಅಜ್ಞ ರವಿಷಯವಾಗಿ ಹೇಳಿರುವದೇನಂದರೆ?
ಪುಟ:ಕಾಳೀಸ್ವಯಂವರ.djvu/೧೮
ಗೋಚರ