ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖಂಡ ಹೇಗೆ ಉಯವನು, ಅದರಿಂ ಲೋಪಕಾರಿಯಾದಸೂರನ ಮ ಡಂದಿಕ್ಕು, ಅಗ್ನಿ ದಿಕ್ಕುಗಳೆಂಬ ಸ್ತ್ರೀಯರು ಸಂತೃಸಿ, ಮನೋಹರ ಮಾದ, ಸಕಲವಸ್ತುಗಳಿಂದಲಂಕೃತವಾದ ತುಕಣದಿಕ್ಕನೀಕ್ಷಿಸುತ ನಡೆ ದನು, ತದನಂತರದೊಳು ಸೂರನ ರಥದ ಕುದುರೆಗಳನುಮಾನಿಸಿ ದಾ ರಿಯಿಲ್ಲದೆ ನಿಂತವು : ಆ ಸಮಯದೊಳರುಣನು ತರಣಿಗೆ ಬಿನ್ನವಿಸಿ ದನದೆಂತನೆ-ಎಲೈ ಸ್ವಾಮಿಯ ವಿಂಧ್ಯನು ತನ್ನ ಮಿತವಂಮಾರಿ, ಗಗನಮಾರ್ಗವಂ ತಡೆದಿರುವನು, ಅದೆಂಶನಲು ಮೇರುವಿಗೆ ನೀವುಮಾ ಡುವ ಪ್ರದಕ್ಷಿಣವಂ ತಾನು ಬಯಸಿ, ಮೇರುವಿನೊಡನೆ ಪ್ರತಿಭಟಸಿರು ವನೆಂಬರುಣನ ಬಿನ್ನಹನನಾಲಿಸಿ, ಸೂರನು ಗಗನಮಾರ್ಗವು ಕಟ್ಟು ನಡೆದುದು ಇದೇನಾಕೃಈವೆಂದು ಮನದೊಳು ಚಿಂತಿಸುತ್ತಿರ್ದನೆಂದು ವೇದವ್ಯಾಸಮುನಿಯಿಂತೆಂದನು-ಕೇಳ್ಳೆ ಸೂತನೇ ಸೂರನು ತಾನು ಸಮರ್ಥನಾದರೂ, ಮುಂದೆ ನಡೆಯಲಾರದೇ ವಿಂಧ್ಯನ ಸವಿಾಪದೊಳೇ ಯಿರ್ದನು, ಇರದೆ ಮಾಡುವದೇನು ? ವೇಗವುಳ್ಳವನಾದರೂ ಅಡ್ಯ ಗಟ್ಟದ ಮಾರ್ಗವನತಿಕ ವಿಸಲು, ಸಮರ್ಥನಲ್ಲವಲ್ಲಾ? ಅದಕಾರಣ ಅಯಿದನು ಆಸೂರನು ರಾಹು ತನ್ನ ಮಿಡಿದಿದ್ದಾಗಲೂಕ್ಷಣಮಾತ್ರ ನಿಲ್ಲುವನಲ್ಲ, ಹಾಗಾದರು ನಿಂತನು. ಆತನಾಡುವದೇನು ? ಎಲೆ ಹಳ ಚುವದರೊಳಗರ್ಧ ಪ್ರಮಾಣದಿಂದೆರಡುಸಾವಿರದ ಇನ್ನೂರ ಎರಡು ಯೋಜನವು ನಡೆಯುವನಾದಾಗ್ಯೂ ಅಲ್ಲಿಯೇ ಬಹುಕಾಲ ನಿಂತನು. - ಹೀಗೆ ಕೆಲವು ಕಾಲ ಕಳೆಯುತಿರಲು, ಮೂಡ, ಬಡಗ, ಕಡೆಯವರು ಸೂ‌ನ ಪ್ರಚಂಡ ಕಿರಣಗಳಿಂದ ಪೀಡಿತರಾಗಿದ್ದರು, ನಡುವೆ, ತಂಕಣ; ದೇಶದವರು ನಿದ್ರೆಗಣ್ಣಿನಲ್ಲಿದ್ದವರಾಗಿ ಮಲಗಿದ್ದಲ್ಲಿಯೇ ನಕ್ಷತ್ರಗ್ರಹ ಮಂಡಲಗಳ ನೋಡುತ್ತಾ, ಹಗಲೆನ್ನುವದಕ್ಕೆ ಸರನಿಲ್ಲ, ರಾತ್ರಿ) ಯೆನ್ನುವದಕ್ಕೆ ಚಂದ್ರನಿಲ್ಲ, ಗಗನದೊಳು ಗಹ ನಕ್ಷತ್ರಗಳು ಕಾಣಲ್ಪಡುತ್ತಿರುವವು, ಇನ್ನೆಂಥಾಕಾಲಬರುವದೋ? ಬ್ರಹ್ಮಾಂಡವು ಆ ಕಾಶದೊಳು ಲಯವನೈದುವದೋ? ಅಕಾಲದೊಳು ಹೇಗೆ ಲಯವದು ದು ? ಆಗಲರಿಯದು, ಅದುಂಟಾದರೆ ಸಮುದ ಮೇರೆದಪ್ಪುವುದು