ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೌಶಿಖಂಡ. ೩೩೩ ಭ್ರಗುಕೇಶವನಂ ಪೂಜಿಸಲು, ಮಹಾ ಜ್ಞಾನಿಯವನು, ಆ ಸಮಿಾಪದ ವಾಮನ ತೀರ್ಥದಲ್ಲಿ ಸ್ನಾನವಂ ವ ರಾಡಿ ನಾಮನಕೇಶವನಂ ಪೂಜೆಸಲು, ವಿಷ್ಣು ಸಾರೂಪ್ಯವಹುದು, ಆ ಸವಿಾಪದ ಯಜ್ಞವರಾಹ ತೀರ್ಥದಲ್ಲಿ ಸ್ನಾನವಂ ಮಾಡಿ ಯಜ್ಞವರಾಹ ಕೇಶವನ ಪೂಜಿಸು, ರಾಜಸೂಯಯಾಗವ ಮಾಡಿದ ಫಲ, ಆ ಸವಿಾಪದ ವಿದಾರಣ ನರಸಿಂಹ ತೀರ್ಥದಲ್ಲಿ ಸ್ನಾನವ ಮಾಡಿ, ವಿದಾರಣ ನರಸಿನಂ ಪೂಜೆಸಲು, ಮೂರು ಜನ್ಮದ ಪಾಪಹರ, ಆ ಸವಿಾ ಪದ ಗೋಪಿ ಗೋವಿಂದ ತೀರ್ಥದಲ್ಲಿ ಸ್ನಾನವ ಮಾಡಿ ಗೋಪಿ ಗೋವಿಂ ದನಂ ಪೂಜಿಸಲು ವಿಷ್ಣು ಏತನಹನು. ಆ ಸವಿಾಪದ ಲಕ್ಷ್ಮೀನರಸಿಹ್ನೆ ತೀರ್ಥದಲ್ಲಿ ಸ್ನಾನವ ಮಾಡಿ ಲಕ್ಷ್ಮಿನರಸಿನಂ ಪೂಜಿಸಲು, ಲಕ್ಷ್ಮಿ ಕೃಪೆಯಿಂದ ಭಾಗ್ಯವಂತನವನು. ಆ ಸವಿಾದ ಶೇಷತೀರ್ಥದಲ್ಲಿ ಸ್ನಾನ ವಂ ಮಾಡಿ ಶೇಷಶಯನ ಕೇಶವನಂ ಪೂಜಿಸಲು, ಸಕಲ ಶತು ಹರ. ಆ ಸವಿಾಪದ ಹಣಗಿ ವ ತೀರ್ಥದಲ್ಲಿ ಸ್ನಾನವಂ ಮಾಡಿ ಹಯಗ್ರೀವ ಮ ರ್ತಿಯಂ ಪೂಜಿಸಲು, ಮಹಾ ಪುಣ್ಯ, ಅ ಪಿತೃಗಳಿಗೆ ಶ್ರಾದ್ಧಾದಿಗಳಂ ಮಾಡಲು ಸಕಲ ಪಿತೃಗಳಿಗೂ ಮುಕ್ತಿಯಹುದು, ಕೇಳ್ಮೆ ಅಗಸ್ಯ ಪ್ರಸಂ ಗದಿಂದ ಕೆಲವು ತೀರ್ಥನಂ ಪೇಳದೆನ್ನು, ಕೆಲವು ದೇವತೆಗಳಂ ಪೇಳಿದೆನು, ಇನ್ನು ಆ ಕಾಶೀಕ್ಷೇತ್ರದಲ್ಲಿ ಎಳ್ಳುಹಾಕುವರೇ ತೆರಪಿಲ್ಲದ ಹಾಗೆ ಅನೇಕ ತೀರ್ಥಂಗಳ, ಅನೇಕ ಲಿಂಗಗಳ, ಅನೇಕವಿಷ್ಣುಮೂರ್ತಿಗಳ,ಅನೇಕ ನಾನಾ ದೇವತಾ ಮೂರ್ತಿಗಳು ಇದ್ಯಾವು. ಕೇಳ್ಮೆ ಅಗಸ್ಯ ! ಅನಂತರ ದಲ್ಲಿ ಶಂಖಚಕ್ರಗದಾ ಪದ್ಮಪಾಣಿಯಾಗಿ ವೈಕುಂಠಪತಿಯಾದ ಶ್ರೀ ಮಹಾ ವಿಷ್ಣುವು ಪರಮೇಶ್ವರನ ಕಾರ್ಯಾರ್ಥವಾಗಿ ತನ್ನ ನಿಜಮೂತಿಯಂ ಆದಿ ಕೇಶವನಲ್ಲಿರಿಸಿ ಒಂದು ಅಂಶದಿಂ ಪೊರಮಟ್ಟು ಕಾಶೀಕ್ಷೇತ್ರದಲ್ಲಿ ಸಂಚರಿ ಸುತಿರ್ದನು, ಎನಲು ಅಗಸನಿಂತೆಂದನು ಎಲೈ ಕುಮಾರಸವಿಾ ! ಸರ್ವ ವ್ಯಾಪಕನಾದ ನಾರಾಯಣನು ತನ್ನ ನಿಜರೂಪದಿಂ ಸಂಚರಿಸದೆ ಮತ್ತೊಂದು ರೂಪವಂ ಧರಿಸುವ ಕಾರಣವಂ ಬುದ್ಧಿಗಲಿನಿ ಎನಲು, ಕುಮಾರಸ್ವಾಮಿ ಇಂತೆಂದನು ಎಲೈ ಅಗಸ್ತ ನೇ ! ಕೇಳು, ಆ ಮಹಾ ವಿಷ್ಣುವು ಮತ್ತೊಂ ದು ರೂಪವಂ ಧರಿಸುವದಕ್ಕೆ ಕಾರಣವುಂಟು. ಆ ವೃತ್ತಾಂತವನ್ನು ಪೇಳೆ