ಕಾತೀಖಂಡ ೩೭೫ or++ * ಪ್ರಾಣಿಗಳಲ್ಲದೆ ಕರ್ತರಲ್ಲ, ನಮ್ಮಂಥಾವರ ದೇಹಗಳು ಹ್ಯಾಗೆ ತೋರಿ ಅಡಗುತ್ತಿಹುದೋ ಹಾಗೆ ಬ್ರಹ್ಮ ಮೊದಲಾಗಿ ಗುಂಗುರು ಕಡೆಯಾದ ಪ್ರಾಣಿ ಗಳು ತಮ್ಮ ತಮ್ಮ ಕಾಲಂಗಳಲ್ಲಿ ಪುಟ್ಟ ಲಯವಾಗುತ್ತಿಹರು, ಚನ್ನಾಗಿ ವಿಚಾರಿಸಿ ನೋಡಲು ಈ ಶರೀರದಲ್ಲಿ ವಿಶೇಷವೇನು ಇಪ್ಪತು, ಸಮಸ್ತ ಜೀವರಿಗೆ ಆಹಾರ ಸಂಗ ನಿದ್ರೆ, ಸರ್ವ ಸಮಾನ ಸಕಲ ಪ್ರಾಣಿಗಳೂ ಕೂಡ ಆಹಾರಗಳಿಂದ ತಮ್ಮ ತಮ್ಮ ಜಾತಿಗಳಿಗೆ ತಕ್ಕಹಾಗೆ ತೃಪ್ತಿಪಡುವರಲ್ಲದೆ ಅಧಿಕವಿಲ್ಲ. ನಾವು ಬಾಯಾರಿದರೆ ಹ್ಯಾಗೆ ಉದಕವಂ ತೆಕೊಂಬೆವೋ ಇತರ ಪ್ರಾಣಿಗಳಿಗೂ ಹಾಗೆ ಇವನನು ಇವನಧಿಕನು ಎಂಬ ಬೇಧವಿಲ್ಲ. ರೂಪುಲಾವಣ್ಯಗಳುಳ್ಳ ಸಾವಿರಾರು ಮಂದಿ ೩ )ಯ ರಿದ್ದರೂ ಭೋಗಕಾಲಕ್ಕೆ ಒಬ್ಬ ಸಿ ಯಲ್ಲದೆ ಒಂದೇ ಕಾಲದ ಬಹು ಮಂದಿ ಸ್ತ್ರೀಯರ ಅನುಭವಿಸಲು ಶಕ್ಯವಲ್ಲ, ಒಟ್ಟು ೩ ಇದ್ದವನಿಗೆ ಭೋಗಕಾಲಕ್ಕೆ ಒಬ್ಬಳೇ ಸರಿ, ಅನೇಕ ಕುದುರೆಗಳಿದ್ದರೂ ಬಂದೇ ಇದ್ದ ರೂ ಏರುವ ಕಾಲಕ್ಕೆ ಒಂದೇ ಅಲ್ಲದೆ ಮತ್ತೆ ಶಕ್ಯವಲ್ಪ, ಪಟ್ಟೆಮಂಚ ಸುಪ್ಪತ್ತಿಗೆಯಲ್ಲಿ ಮಲಗುವನಿಗೂ ಭೂಮಿಯಲ್ಲಿ ಮಲಗುವನಿಗೂ ಸಿದ್ರಾ) ಸುಖಖಸಮಾನ, ದೇಹಧಾರಿಗಳಾದ ನಮ್ಮಂಥಾವರಿಗೆ ಹ್ಯಾಗೆ ಮರಣಭಯ ವುಂಟೋ ಹಾಗೆ ಬ್ರಹ್ಮವೊದಲಾದ ಕ್ರಿಮಿಕಡೆಯಾದವರಿಗೂ ಮರಣಭಯ ಸಮಾನ, ವಿಚಾರಿಸಿ ನೋಡಲು ಸಕಲ ಪ ಣಿಗಳಿಗೂ ಸಮಾನವಾಗಿ ಇರುವದು, ಇದನರಿದು ಬಲ್ಲವರು ಪ್ರಾಣಿಹಿಂಸೆಯಂ ಮಾಡಲಾಗದು ಪ9ಣಿ ಗಳ ಮೇಲಣ ದಯಕ್ಕೆ ಸಮಾನವಾದ ಧರ್ಮವಿಲ್ಲ, ಪ್ರಾಣಿಗಳ ಮೇಲ ೧ ದಯವುಂಟಾಗಿ ಒಬ್ಬ ನನ್ನಾದರೂ ರಕ್ಷಿಸಿದರೆ ಮೂರುಲೋಕನಂ ರಕ್ಷಿ ಸಿದ ಫಲವುಂಟು. ಒಬ್ಬನ ಕೊಂದರೆ ಮರು ಲೋಕನಂ ಕೊಂದ ಮಾಸ ವಹುದು, ಅದು ಕಾರಣದಿಂ ಜೀವಹಿಂಸೆಯಂ ಮಾಡಲಾಗದು. ಅಹಿಂಸಾಪರ ಮೋಧರ್ಮವೆಂದು ಸಕಲ ಶ್ರುತಿತಿಗಳು ಹೇಳುತ್ತಾ ಇದ್ದಾವು, ಆದ ರಿಂದ ಹಿಂಸಕನು ನರಕವನ್ನೈದುವನು. ಅಹಿಂಸಕನು ಸ್ವರ್ಗವನ್ನೈದುವನು ಅಲ್ಪ ಫಲಂಗಳಂ ಕೊಡುವ ಅನೇಕವಾದ ದಾನಂಗಳುಂಟು. ಅದರೊಳು ನಾಲ್ಕುದಾನಂಗಳು ಅಧಿಕವಾದವು. ಅದುವಾವೆಂದರೆ:- ಅಭಯದಾನ ವ್ಯಾಧಿ ಹಿ೦)
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೯
ಗೋಚರ