ಕಾಶೀಖಂಡ ೪೩೩ ಗೆ ನಿರೂಪಿಸಿದ ಪರಮೇಶ್ವರನ ಮುಖವೆಂಬ ಹೀರಸಮುದ್ರದಿಂದುಟ್ಟದ ಅವತೋಪಮವಾದ ವಾಕ್ಯವಂಕೇಳಿ, ಬ್ರಾಹ್ಮಣರು ಇಂತೆಂದು ಬಿ ವೈಸಿದರು. ಎರೈ ಉಮಾವತಿಯ ? ಮಹೇಶರ! ಸರ್ವಭೂಷಣ! ಸರ್ ಜ್ಞ! Fಚಿದಾನಂದಮೂರ್ತಿಯೆ! ಭವತಾಪವಂ ಪರಿಹರಿಪ ಈ ಕಾಶಿ ಕ್ಷೇತ್ರದ ಎಂದಿಗೂ ಬಿಡದೆ ವಾಸವಾಗಿರಿ ಎಂದು ವರವೆನೀವುದು ನಮಗೆ ದಿಟ್ಟವರವು, ಆವನಾನೊಬ್ಬನು ನಮಗೆ ಅಕೃತ್ಯವಮಾಡಿದರೂ ಅವರಿಗೆ ಶಾಪಯದ ಮನವ ಕೊಡು, ದೇವರ ಶಾಪವನಿತ್ಯವರ್ಗೆ ಅವರು ಣ್ಯ ಕಳುವಾಗಿ ಪ್ರೇವು ದಾಗಿ, ಇಲ್ಲಿ ವಾಸವಾಗಿರುವ ಬ್ರಾಹ್ಮಣರಿಗೆ ಶಾವವ ಇವ ಸಾಮರ್ಥ್ಯವಿಲ್ಲದೆ ಪೋಗಲಿ, ನಿರಂತರವೂ ನಿಮ್ಮ ಪಾದಪದ್ಯಂಗಳಲ್ಲಿ ಎಡೆಬಿಡದೆ ಭಕ್ತಿಯುಂಟಾಗ, ಈ ಶರೀರ ತಪನವರಿಯಂತವೂ ನಮಗೆ ಕಾಶಿಯಲ್ಲಿ ವಾಸವಾಗಲಿ, ಇವಲ್ಲದೆ ಮಿಕ್ಕಾದವುಗಳಿಂದ ನಮಗೇನೂಪ) ಯೋಜನವಾದೀತು, ಆದರೆ ಇನ್ನೊಂದುವರವ ಬೇಡುತ್ತಾಯಿದೇನೆ ಅದಾ ವುದೇನೆ, ಈ ಸ್ಥಳದಲ್ಲಿ ನಿಮ್ಮ ಪ್ರತಿರೂಪವಾಗಿ ನಾವು ಒಂದೊಂದುಲಿಂ ಗಗಳ ಪ್ರತಿಮೆ ಮಾಡಿದೆವಾಗಿ ಆ ಲಿಂಗಗಳಲ್ಲಿ ನೀವು ನಿತ್ಯವೂ ಸನ್ನಿಹಿತ ರಾಗಿರಬೇಕೆಂದು ಹೀಗೆ ಬಿನ್ನಹವಂ ಮಾಡಿದ ಬ್ರಾಹ್ಮಣರ ಬಿನ್ನಹವಕೆ ೪, ಹಾಗಾಗಲಿ ಎಂದು ಅವರು ಬೇಡಿದ ವರಗಳನಿತ್ತು ನಿಮಗೆ ಶುದ್ಧವಾದ ಜ್ಞಾನವಾಗಲಿ ಎಂದು ಪರಮೇಶ್ವರನಿಂತೆಂದನು, ಕೇಳಿರೈ ಬಾಹ್ಮಣ ರಿರಾ? ಭೂಮಿಯಲ್ಲಿ ಮುಕ್ತಿಯನಪೇಕ್ಷಿಸುವರು ಗಂಗಸ್ಮಾನ, ವಿಶ್ವಪತಿ ಯಾದ ತನ್ನ ಪ್ರಜೆ, ಇಂದ್ರಿಯ ನಿಗ್ರಹ, ದಾನ, ದಯ, ದ್ರಾಕ್ಷಿಣ್ಯ, ಪರೋ ಸಕಾರಂಗಳಿರಬೇಕು. ವೆಗಪಟ್ಟು ಮಾತನಾಡಲಾಗದ್ದು ಸ್ಥಳಾಂತರದಲ್ಲಿ ಮಾಡಿದ ಪಾಪವು ಈ ಕಾಶಿಯಲ್ಲಿ ಪರಿಹರ, ಈ ಕಾಶಿಯಲ್ಲಿ ಮಾಡಿದ ಪಾಪ ಅಂತರ್ಗಹಯಾತ್ರೆಯಲ್ಲಿ ಪರಿಹರ, ಅಂತರ್ಗೃಹದಲ್ಲಿ ಮಾಡಿ, ಸ್ಥಳಾಂತರಕ್ಕೆ ಪೋಗಲು ಕೋಟ ಬ್ರಹ್ಮಕಲ್ಪ ಪರಿಯಂತವೂ ಆ ಪಾಪ ವನನುಭವಿಸಬೇಕು, ಹೋಗದೆ ಕಾಶೀಸ್ಥಳದಲ್ಲಿ ಇರಲು ರುದ್ರಪಿಶಾಚ ರಾಗಿ ಮೂವತ್ತು ಸಾವಿರ ವರುಷವಿದ್ದು ಆ ಮೇಲೆ ಈಶ್ವರಾನುಗ್ರಹದಿಂ ಜ್ಞಾನವಪಡದು ಅದರಿಂದ ಮುಕ್ತರಹರು, ಕೇಳಿರೈ ಬ್ರಾಹ್ಮಣರಿರಾ? ೫೫
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೭
ಗೋಚರ