ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಖಂಡ Bರ್y ಚಂದ್ರಮನಂತೆ ದಿವ್ಯವಾಣಿಖಚಿತವಾದ ಭೂವಣಂಗಳ ಕಾಂತಿಯಿಂ ರಂಜಿಸುವಂಥಾ ತನ್ನ ಸೌಂದರವೆಂಬ ವಶೀಕರಣವಾದ ಔಷಧಿಯಿಂದ ಲೋಕ ಪರವಶವಂ ಮಾಡುವಂಥಾ ಮಹಾದೇವಿಯಂ ಕಂಡು ದುರ್ಗಾ ಸುರನು ಮದನಾಸ್ತ್ರ ದಿಂ ನೋಂದು ತನ್ನ ಸವಿಾಪದಲ್ಲಿರ್ದ ಉಲೂಕನೇ ಪ್ರ, ಕಂಕಾರ್, ಕಾಕತುಂಡ, ಕರಾಳವದನ, ಅತ್ಯುಗ್ರ, ಕರಾಸ್ಥೆ, ಕೊಧನ, ಆಕ್ರಂದನ, ಸಂಕ್ರಂದನ, ಮಹಾಭಯ, ವಿಜಿತಾಂಗ, ಮ ಹೋದರ, ಮಹೋದ್ದಾಮ, ಮಹೀಧರ, ಡುಂಡುಭ, ಡಂಡುಭೀಪಕ್ಕೆ ಮಹಾಡುಂಡುಭಾನನ, ಉಗ್ರಾಸ್, ಕುದ ಮಾನಸ, ದೀರ್ಘದರ್ಶನ ಮೇಘಕಶ, ವೃಕಾಸನ, ದೀರ್ಘಗಿವ, ಮಹಾದ೦ಫು ಕ್ರಮೇಳಕ್ಕೆ ನಿರೋಧರ, ರಬಿಂದು, ಬದನೇತ್ರ, ವಿದ್ಯುಜ್ಜಿ, ಅಗ್ನಿ ತಾಪನ, ಮಹಾಭೀಷಣ ಇವರು ಮೊದಲಾದ ಮಂಡಲೀಕರಂ ನೋಡಿ, ಇಂತೆಂ ದಿನು- ನೀವೆಲ್ಲರೂ ಎನ್ನ ಆಜ್ಞೆಯಿಂದ ಹೋಗಿ, ವಿಂಧ್ಯವಾಸಿನಿಯಾದ ಶಿವನ ಸಿ ಯನ್ನು ನಿಮ್ಮ ಬುದ್ಧಿಯಿಂದಾಗಲಿ, ಬಲದಿಂದ ಲಾಗಲಿ, ಛ ಲದಿಂದಲಾಗಲಿ, ಆವಕಾರದಿಂದಲಾದರೂ ಕರತಂದವಗೆ ಇಂದ್ರ ಪದವ ನೀವೆನು ಸಂದೇಹವಿಲ್ಲ, ಅತ್ಯಂತಸೌಂದರವುಳ್ಳ ಇವಳ ನೋಡಿ, ಎನ್ನ ಮನಸ್ಸು ವ್ಯಾಕುಲಬಡುತ್ತಿದ್ದೀತು, ಇವಳನ್ನು ಶೀಘ್ರದಿಂದ ಕರತರದೆ ಇದ್ದರೆ ತಾನು ಮದನಾಸ್ತ್ರ ಗಳಂ ತಾಳಲಾರೆನು ಎಂದು ನುಡಿದ ದುರ್ಗಾ ಸುರನ ವಾಕ್ಯವುಂ ಕೇಳಿ, ದೈತ್ಯರೆಲ್ಲರೂ ಕರಗಳಂ ಮುಗಿದು ಅಂತೆ ವರು- ಎಲೈ ದೈತೇಂದ್ರನೆ ! ಅನಾಥೆಯಾದ, ಅಬಲೆಯಾದ, ಇವಳ ಕರತಹುದಕ್ಕೆ ಇಷ್ಟು ಪ್ರಯತ್ನವೆ.ಕೆ, ಸಕಲ ಲೋಕಾಧಿಪತ್ಯವನ್ನು ನಿನ್ನಿಂದ ಪಡೆದು ಪ್ರಚಂಡರಾಗಿ ಪ್ರಳಯಕಾಲಾಗ್ನಿಗೆ ಸಮಾನವಾದಂಥಾ ನಮಿಗೆ ಇದಿರಾರು, ಅಸಾಧ್ಯವಾವುದು, ವೈಕುಂಠಪತಿಯಾದ ವಿದ್ಯುವು ನಿಮ್ಮ ಆಜ್ಞೆಯೊಳು ನಡೆಯುತ್ತಿದ್ದಾನು ಕೈಲಾಸಪತಿಯಾದವನನ್ನೂ ನಾವೇ ಜೈಸಿದೆವು, ಅಲ್ಲವಾದರೂ ಆತನು ಉನ್ಮಾದಿ, ವಿವಭಕ್ಷಕನು, ಬೂದಿಬಡಕನು, ಗಜಚರ್ಮಧಾರಿಯು, ವಿಷಸರ್ಪಭೂಷಣನು ನಮ್ಮ ಭಯದಿಂದ ತನ್ನ ಸ್ಪಿಯ ಅರ್ಧಶರೀರದಲ್ಲಿ ಬಚ್ಚಿಟ್ಟುಕೊಂಡು ಇದ್ದಾ ೬೦