ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಈ ಅಲ್ಪ ಸುಖವೂ ಕೂಡ ದೈವದ ಮನಸ್ಸಿಗೆ ಬರಲಿಲ್ಲ. ಅನ್ನ ಪೂರ್ಣಾಬಾಯಿಯು ಕೊನೆಯ ಮಗುವನ್ನು ಹೆತ್ತಾಗ ಮೃತ್ಯುವಿಗೆ ತುತ್ತಾ ದಳು. ಸಂತರ ಸಂಸಾರವೇ ಕುಸಿದುಬಿದ್ದಿತು. ಅದೇ ಸಮಯಕ್ಕೆ ೧೮೭೭ ರಲ್ಲಿ ಡವಗೀಬರವು ರಾಷ್ಟ್ರದಲ್ಲಿ ಹಾಹಾಕಾರವನ್ನು ಉಂಟುಮಾಡಿತು. ಸಂತರ ಕುಟುಂಬವೂ ಸಂಕಟಕ್ಕೆ ಗುರಿಯಾಯಿತು, ನಂತರ ಎರಡನೆಯ ಬಂಧುನಾದ ಗೋಪಾಲರಾಯನು ಗದುಗಿನಲ್ಲಿ ವಕೀಲಿಯನ್ನು ಮಾಡುತ್ತಿ ದ್ದನು, ಅಲ್ಲಿಗೆ ಇವರೆಲ್ಲ ಧಾವಿಸಿದರು, ಅಲ್ಲಿ ಅತ್ಯಂತ ಕಷ್ಟದಿಂದ ದಿನಗಳೆದು ಮರಳಿ ಧಾರವಾಡಕ್ಕೆ ಬಂದರು, ಆದರೆ ಇದಕ್ಕಿಂತಲೂ ಘೋರವಾದ ಇನ್ನೊಂದು ಸಂಕಟವು ಸಂತರಿಗಾಗಿ ಕಾದುಕುಳಿತಿತ್ತು. ಸಂತರ ಚಿಕ್ಕ ತಮ್ಮನಾದ ಕೃಷ್ಣಾಜಿಸಂತನು ಪ್ರವಾಸದಲ್ಲಿ ಮಾಯ ವಾದ ಸುದ್ದಿ ಯು ಬಂದಿತು. ಕೃಷ್ಣಾಜಿಪಂತನ ನೆರವಿನಿಂದಲೇ ಸಂಸಾರ ನೌಕೆಯನ್ನು ಹಾಗೂ ಹೀಗೂ ಸಾಗಿಸುತ್ತಿದ್ದ ಕಾಶೀನಾಥಪಂತರಿಗೆ ಇದರಿಂದ ಸಿಡಿಲುಬಡಿದಂತಾಯಿತು, ಅವರ ಆಧಾರ ಸ್ಥಂಭವೇ ಬಿದ್ದಂತಾಯಿತು. ಎಲ್ಲ ಕಡೆಗೂ ಹುಡುಕಲು ಪ್ರಾರಂಭಿಸಿದರು, ಆದರೆ ಎಲ್ಲಿಯೂ ಸುಳುವು ಹತ್ತ ಲಿಲ್ಲ, ಇದರಿಂದ ಮನೆಯ ಜನರೆಲ್ಲ ದಿಗ್ಭ್ರಾಂತರಾದರು, ವೃದ್ದ ಮಾತೆಯು ಈ ಪುತ್ರನಿಯೋಗವನ್ನು ತಾಳಲಾರದೆ ಮೃತ್ಯು ಮುಖಿಯಾದಳು. ಕಾಶೀನಾಥಸಂತರು ತಮ್ಮನ ಶೋಧಕ್ಕಾಗಿ ಕಾಶಿಯ ವರೆಗೆ ಸುತ್ತಾಡಿ ಬಂದರು. ಅನೇಕ ಪತ್ರಗಳನ್ನು ಬರೆದರು, ಆದರೆ ಎಲ್ಲವೂ ವಿಫಲವಾಯಿತು. ಕಾಶೀನಾಥಪಂತರು ಕೃಷ್ಣಾಜೀಸಂತರಿಗೆ ಬರೆದ ಒಂದು ಪತ್ರವು ಅವರ ಹಳೆಯ ಕಾಗದ ಪತ್ರಗಳಲ್ಲಿದೆ. ಅದು ಅತ್ಯಂತ ಹೃದಯ ದ್ರಾವಕವಿದ್ದು, ಅದರ ಒಂದು ಭಾಗವನ್ನು ಕೆಳಗೆ ಕೊಡಲಾಗಿದೆ: “ನಾವು ಮೂವರೂ ಅಣ್ಣ ತಮ್ಮಂದಿರು, ಯಾರೂ ಯಾರ ಮಾತನ್ನೂ ಮೀರುತ್ತಿರಲಿಲ್ಲ. ಇದರಿಂದ ನಾವು ಸಾಲಗಾರರಾಗದೆ ಸಂಸಾರವನ್ನು ಸರಾಗ ವಾಗಿ ನಡೆಸುತ್ತಿರುವದನ್ನು ಕಂಡು, ನೀವು ಕಲಿಯುಗದ ಅಣ್ಣ ತಮ್ಮಂದಿರಲ್ಲ ಕೃತಯುಗದವರು ಎಂದು ಜನರು ಮಾತನ್ನಾಡಿದಾಗ ನನಗೆ ಹೆಮ್ಮೆ ಎನಿಸುತ್ತಿ ಇಲ್ಲವೆ ? ಆದರೆ ಇಂದು ನೀನು ಮಾತ್ರ ನಮ್ಮನ್ನು ವಿಚಾರಿಸದೇ ಹೊರಟು ಹೋದುದರಿಂದ ಜನರು ಅನೇಕ ತರ್ಕ ವಿತರ್ಕಗಳನ್ನು ಮಾಡಹತ್ತಿದ್ದಾರೆ. ಜನರ ಈ ಎಲ್ಲ ಸಂಶಯಗಳನ್ನು ದೂರ ಮಾಡುವದಕ್ಕಾಗಿಯಾದರೂ ನೀನು