ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ ಹೊಸೂರಿಗೆ ಬಂದರೆಂದರೆ, ವೇದಾಂತಿಗಳೆಂದು ಪ್ರಖ್ಯಾತರಾದ ಶ್ರೀ ದಾದಾ ಗರ್ದೆಯವರಲ್ಲಿ ಪಂಚದಶಿಯನ್ನು ಅಭ್ಯಸಿಸುತ್ತಿದ್ದರು. ಮೆಲ್ಲಮೆಲ್ಲನೆ ಅದರಲ್ಲಿ ಪಾರಂಗತರಾದರು, ಅದರ ಬಗ್ಗೆ ಪ್ರವಚನವನ್ನು ಕೊಡಲೂ ಪ್ರಾರಂಭಿಸಿ ದರು. ಕಾಶೀನಾಥಪಂತರ ಪ್ರವಚನವೆಂದರೆ ತೀರಿತು, ಮುಮುಕುಗಳೆಲ್ಲ ಸಕ್ಕರೆಗೆ ಮುಕುರುವ ಇರುವೆಗಳಂತೆ ಬಂದು ಸೇರುತ್ತಿದ್ದರು. ನಿಜವಾದ ವೇದಾಂತಿಗೆ ತನ್ನ ಮನೋವೃತ್ತಿಯನ್ನು ಸ್ಥಿರವಾಗಿ ಇಟ್ಟು ಕೊಳ್ಳಲು ಹೆಚ್ಚು ಸುಗಮವಾಗುತ್ತದೆ, ಅವನು ಸುಖದಿಂದ ಹಿಗ್ಗು ವದಿಲ್ಲ. ದುಃಖದಿಂದ ತಗ್ಗು ವದಿಲ್ಲ. ಅವನು ಎಂತಹ ಕಠಿಣ ಪ್ರಸಂಗದಲ್ಲಿಯೂ ತನ್ನ ಶಾಂತಿಯನ್ನು ಹೊಯ್ದಾಡಗೊಡುವದಿಲ್ಲ, ಕಾಶೀನಾಥಪಂತರು ಜೀವನದಲ್ಲಿ ಒಂದರಮೇಲೊಂದು ಬಂದೊದಗಿದ ವಿಪತ್ತುಗಳನೆಲ್ಲ ಎದುರಿಸಿ, ಶಾಂತತೆ ಯನ್ನು ಕಾಯ್ದು ಕೊಂಡುದು ಈ ವೇದಾಂತದ ಬಲದಿಂದಲೇ. ಅವರು ಗುಜರಾಥದಲ್ಲಿರುವಾಗ ತಂದೆ ಬೇನೆಬಿದ್ದ ಸುದ್ದಿ ಬಂದೊಡ. ನೆಯೇ ಊರಿಗೆ ಮರಳಿದರು. ಆ ಬೇನೆಯಲ್ಲಿಯೇ ತಂದೆ ಕಾಲವಾದ ಮೂಲಕ ಮನೆಯ ಭಾರವೆಲ್ಲ ಕಾಶೀನಾಥಪಂತರ ಮೇಲೆಯೇ ಬಿದ್ದಿತು, ಇದರಿಂದ ಗುಜರಾಥದಂತಹ ದೂರದ ಪ್ರದೇಶದಲ್ಲಿ ನೌಕರಿ ಮಾಡುವದು ಅಸಾಧ್ಯವಾಗಿ ಮೈ ಸೂರ ಪ್ರಾಂತದಲ್ಲಿ ಸರ್ವೆ ನೌಕರಿಯನ್ನು ಹಿಡಿದರು, ಆದರೆ ಪ್ರವಾಸದ ಶ್ರಮವನ್ನು ತಾಳಿಕೊಳ್ಳುವದು ಆಗದ್ದರಿಂದ ಆ ಕೆಲಸಕ್ಕೂ ಶರಣು ಹೊಡೆದು ಧಾರವಾಡಕ್ಕೆ ಬಂದು “ಧಾರವಾಡ ವ್ಯಾಪಾರೋತ್ತೇಜಕ ಕಂಪನಿ” ಯಲ್ಲಿ ೧೨ ರೂಪಾಯಿ ಸಂಬಳದ ಮೇಲೆ ಕೆಲಸಕ್ಕೆ ನಿಂತರು. ನರಗುಂದದ ಅಠಲೆ ಮನೆತನದ ಕನೈಯೊಡನೆ ಕಾಶೀನಾಥಪಂತರ ಮದುವೆಯಾಗಿದ್ದಿತು, ಇವರ ಹೆಂಡತಿಯ ಹೆಸರು ಅನ್ನಪೂರ್ಣಾಬಾಯಿ. ಈ ದಂಪತಿಗಳಿಗೆ ೫ ಜನ ಮಕ್ಕಳು, ಬಟುಅಕ್ಕಾ, ರಾಮಚಂದ್ರ, ವಾಸುದೇವ. ಲಕ್ಷಣ ಮತ್ತು ದುರ್ಗಾ, ಮುಪ್ಪಿನತಾಯಿ ಬೇರೆ, ಅಲ್ಲದೆ ತಮ್ಮನಾದ ಕೃಷ್ಣಾಜಿಪಂತನ ಗಂಗಾಧರ ಮತ್ತು ಚಂದ್ರಿ ಎಂಬ ಇಬ್ಬರು ಮಕ್ಕಳು. ಇಷ್ಟು ದೊಡ್ಡ ಸಂಸಾರಕ್ಕೆ ದುಡಿಯುವ ಕೈಯು ಒಂದೇ ಇದ್ದರೂ ಉಣ್ಣವ ಬಾಯಿಗಳಿಗೇನೂ ಕೊರತೆ ಇರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಾಶೀನಾಥ ಪಂತರಿಗೆ ಮನೆಸಾಗಿಸುವದು ಎಷ್ಟು ಕಷ್ಟವಾಗುತ್ತಿರಬೇಕೆಂಬುದನ್ನು