ಯಂತ್ರಯೋಗಿ ಕಿರ್ಲೋಸ್ಕರ ಲಕ್ಷ್ಮಣರಾಯರು ಸಂಪತ್ತನ್ನು ಗಳಿಸಿ, ಗುರುಗಳ ಕೃಪೆಗೆ ಪಾತ್ರರಾದರು. ಸದ್ಧರ್ಮ, ಸದಾಚಾರ ಗಳಲ್ಲಿ ಕಾಲವನ್ನು ಕಳೆಯುತ್ತ, ದಾನ-ಧರ್ಮಗಳನ್ನು ಮಾಡುತ್ತ ತಮ್ಮ ಕೊನೆಯ ದಿನಗಳನ್ನು ತಪೋನಿಷ್ಟರಾಗಿ ಕಾಶಿಯಲ್ಲಿ ಕಳೆಯಬೇಕೆಂದು ಬಯಸಿ, ಪ್ರಪಂಚದ ಮೋಹವನ್ನು ತೊರೆದು, ಕಾಶಿಗೆ ತೆರಳಿದರು. ಅಲ್ಲಿ ಕೆಲಕಾಲ ವಾಸಿಸಿದ ನಂತರ ಅವರು ಗಂಗೆಯಲ್ಲಿ ಜಲಸಮಾಧಿಯನ್ನು ಹೊಂದಿದರಂತೆ, ಹೀಗೆ ಈ ಮನೆತನದಲ್ಲಿ ಸರ್ವಸಂಗ ಪರಿತ್ಯಾಗ ಮಾಡುವ ಗುಣವೂ ಇದ್ದಂತಿದೆ. ಮಹಾರಾಷ್ಟ್ರದ ಆದ್ಯ ನಾಟಕಕಾರರೆಂದು ಪ್ರಸಿದ್ಧರಾದ ಶ್ರೀ ಬಳವಂತ ಪಾಂಡುರಂಗ ಉರ್ಫ ಅಣ್ಣಾಸಾಹೇಬರು ಗುರ್ಲಹೊಸೂರಿನ ಈ ಕಿರ್ಲೊಸ್ತರ ಮನೆತನದವರೇ, “ ಕನ್ನಡ ನಾಡಿನ ದೊಡ್ಡಾಟಗಳು, ನಾಟಕಗಳನ್ನು ಬರೆಯಲು ಸ್ಫೂರ್ತಿಯನ್ನಿತ್ತವು” ಎಂದು ಅವರೇ ಒಂದೆಡೆಯಲ್ಲಿ ಹೇಳಿದ್ದುಂಟು. - ಕಾಶೀನಾಥಪಂತರ ತಂದೆಯವರ ಆರ್ಥಿಕ ಸ್ಥಿತಿಯು ಅಷ್ಟಕಷ್ಟೆ. ಮನೆತನವು ದೊಡ್ಡದು. ಪೋಷಣೆಯ ಭಾರವೆಲ್ಲ ಕಾಶೀನಾಥಸಂತರ ಮೇಲೆ. ಆದುದರಿಂದ ಉದರ ಪೋಷಣೆಗಾಗಿ ಅವರು ಸರ್ವೆ ಖಾತೆಯ ನೌಕರಿಯಲ್ಲಿ ಸೇರಿದರು, ಆಗ ಈಗಿನಂತೆ ರೈಲುಗಳಿರಲಿಲ್ಲ. ಅವರು ಗುಜರಾಥದಿಂದ ಮೈಸೂರಿನ ವರೆಗೂ ಪ್ರಯಾಣ ಮಾಡಬೇಕಾಗುತ್ತಿದ್ದಿತು. ಈ ಪ್ರವಾಸವೆಲ್ಲ ಕುದುರೆಯ ಮೇಲೆಯೇ. ಕಾಶೀನಾಥಪಂತರು ತಮ್ಮ ಕಾರ್ಯವನ್ನು ಅತ್ಯಂತ ಕುಶಲತೆಯಿಂದ ಅಧಿಕಾರಿಗಳ ಮನಮೆಚ್ಚುವಂತೆ ಮಾಡುತ್ತಿದ್ದರು: ಕೃತಿ, ಫನಿಂಗ ಎಂಬ ಅವರ ಮೇಲಧಿಕಾರಿಯು ಸಂತರ ಕಾರ್ಯಕುಶಲತೆಯನ್ನು ತುಂಬಾ ಹೊಗಳಿ ಆ ಬಗ್ಗೆ ೧೮೫೬ ರಲ್ಲಿ ಪ್ರಶಸ್ತಿ ಪತ್ರಿಕೆಯನ್ನು ಕೊಟ್ಟಿದ್ದಾನೆ. ನಡಿಯಾದದಲ್ಲಿರುವಾಗ ಗುಜರಾಥಿ ಇಸಾಹನೀತಿಯು ಅವರ ಕಣ್ಣಿಗೆ ಬಿದ್ದಿತು, ಗುಜರಾಥದಲ್ಲಿಯೇ ೧೪ ವರ್ಷ ಕಳೆಯುವ ಪ್ರಸಂಗ ಬಂದುದರಿಂದ ಗುಜರಾಥ ಭಾಷೆಯು ಅವರಿಗೆ ಅವಗತವಾಗಿದ್ದಿತು. ಮರಾಠಿಯಂತೂ ಮಾತೃ ಭಾಷೆ ಕನ್ನಡವು ಬಾಲ್ಯಭಾಷೆ, ಹೀಗೆ ಅವರು ತ್ರಿಭಾಷಿಗಳಾಗಿದ್ದರು ಗುಜರಾಥಿ ಇಸಾಸನೀತಿಯು ಮರಾಠಿ ಬಂಧುಗಳಿಗೆ ಉಪಯೋಗವಾಗಲೆಂದು ಬಯಸಿ, ಸರಸ ಮರಾಠಿ ಭಾಷೆಯಲ್ಲಿ ಅದನ್ನು ಭಾಷಾಂತರಿಸಿದರು. ಕಾಶೀನಾಥಸಂತರ ಪ್ರೀತಿಯ ವಿಷಯವೆಂದರೆ ವೇದಾಂತ, ಗುರ್ಲ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೮
ಗೋಚರ