ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿಂಚಿನಬಳ್ಳಿ “ಸರಿ, ಹಾಗಾದರೆ ಮುಂದಿನ ಸಿದ್ದತೆ ಮಾಡಿಕೋ, ನಿನ್ನ ಆರೋಗ್ಯದ ಕಡೆಗೆ ಲಕ್ಷ್ಯಕೊಡು. ಮೇಲಿಂದ ಮೇಲೆ ಓಲೆ ಬರೆಯುವದನ್ನು ಮಾತ್ರ ಮರೆಯಬೇಡ.” ತಂದೆ-ಮಕ್ಕಳ ಈ ಸಂವಾದವು ೧೮೮೪ ರಲ್ಲಿ ಧಾರವಾಡದ ನಾಲ್ಕು ಅಂಕಣದ ಒಂದು ಕೋಣೆಯಲ್ಲಿ ನಡೆಯಿತು. ಅದೇ ಲಖುವು (ಲಕ್ಷಣ ರಾಯರು ಇಂದು ಮಹಾರಾಷ್ಟ್ರದ ಆದ್ಯ ಯಂತ್ರಯೋಗಿಗಳೆಂದು ಭಾರತದಲ್ಲಿ ಪ್ರಸಿದ್ಧರಾಗಿದ್ದಾರೆ. ಲಕ್ಷ್ಮಣರಾವ ಕಿರ್ಲೋಸ್ಕರರ ಹೆಸರಿನಿಂದ ಅವರ ಮನೆತನವು ಜಗತ್ತಿನಲ್ಲಿ ಕೀರ್ತಿಶಾಲಿಯಾಗಿದೆ. ಉದ್ಯಮಶೀಲ, ಯಂತ್ರಯೋಗಿ ಲಕ್ಷ್ಮಣರಾಯರು ಕಿರ್ಲೋಸ್ಕರ ಮನೆತನಕ್ಕೆ ಒಂದು ಬಗೆಯ ಐತಿಹಾಸಿಕ ಮಹತ್ವವನ್ನು ತಂದುಕೊಟ್ಟಿದ್ದಾರೆ. ಈ ಮಹಾಪುರುಷರ ಯೋಗದಿಂದ ಅವರ ಮನೆತನದ ಇತಿಹಾಸವನ್ನು ತಿಳಿದುಕೊಳ್ಳಬೇಕೆಂಬ ಕುತೂಹಲವು ಜನರಲ್ಲಿ ಕೆರಳಿದರೆ ಆಶ್ಚರ್ಯವೇನಲ್ಲ ! ಕಿರ್ಲೋಸ್ಕರ ಮನೆತನದ ಪರಿಚಯ ಕಾಶೀನಾಥ ನಾಸುದೇವ ಕಿರ್ಲೋಸ್ಕರ ಎಂಬುದು ಅವರ ಪೂರ್ಣ ಹೆಸರು, ಧಾರವಾಡದಿಂದ ೩೫ ಮೈಲು ದೂರದಲ್ಲಿರುವ ಗುರ್ಲಹೊಸೂರು (ಗುರುಗಳ ಹೊಸೂರು) ಇವರು ಹುಟ್ಟಿದ ಊರು. ಮೂಲತಃ ಇವರ ಮನೆತನವು ಕೊಂಕಣದ ಮಾಲವಣ ತಾಲೂಕಿನ ಕಿರ್ಲೋಸಿ ಎಂಬ ಹಳ್ಳಿಯದು. ಮೂರು ನಾಲ್ಕು ತಲೆಮಾರುಗಳ ಹಿಂದೆ, ತನ್ನ ದೈವವನ್ನು ತೆರೆದು ಕೊಳ್ಳುವದಕ್ಕಾಗಿ ಈ ಮನೆತನದವರು ಕರ್ನಾಟಕಕ್ಕೆ ಬಂದರು. ಇದರಿಂದ ಇವರ ಮೂಲ ಅಡ್ಡ ಹೆಸರಾದ ಕೋಣಕರ ಎಂಬುದು ಬದಲಾಗಿ ಕಿರ್ಲೊ ಸ್ಕರ ಎಂದಾಯಿತು. ಇವರು ಸತತೋದ್ಯೋಗದಿಂದ, ಕಷ್ಟ ಸಹಿಷ್ಣು ತೆಯಿಂದ ತಮ್ಮ ಉತ್ಕರ್ಷವನ್ನು ಮಾಡಿಕೊಂಡರು. ಧನ ಕನಕಗಳಿಂದ ಸುಸಂಪನ್ನ ರಾದರು, ಊರಲ್ಲಿ ಒಳ್ಳೆಯ ಲೌಕಿಕವನ್ನು ಸಂಪಾದಿಸಿ, ಊರ ಪ್ರತಿಷ್ಠಿತ. ರೆನಿಸಿಕೊಂಡರು. ಊರಲ್ಲಿ ದೊಡ್ಡದೊಂದು ವಾಡೆಯನ್ನೇ ಕಟ್ಟಿಸಿದರು. ಉದ್ಯೋಗಶೀಲತೆ, ಕಷ್ಟ ಸಹಿಷ್ಣುತೆ, ಧೈಲ್ಯಗಳು ಇವರ ಮನೆತನದಲ್ಲಿ ರಕ್ತಗತ ವಾಗಿ ಬೆಳೆದು ಬಂದಂತೆ ಕಾಣುತ್ತಿದೆ. ಕೊಂಕಣದಿಂದ ಬಂದ ಈ ಮನೆತನದಲ್ಲಿ ರಂಗೋಪಂತರು ಅಪಾರವಾದ