ಹರಿಃ ಓಂ ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ತಂದೆ, ಮಕ್ಕಳ ಸಂವಾದ ಸುಪ್ರಭಾತ ಸಮಯ, ಕಾಶೀನಾಥಪಂತರು ಸತ್ಯನಾರಾಯಣನಿಗೆ ಅರ್ಥ್ಯವನ್ನಿತ್ತು, ಜಪವನ್ನು ಮುಗಿಸಿ, ಗೀತೆಯ ಪಾರಾಯಣದಲ್ಲಿ ಮಗ್ನರಾಗಿ ದ್ದಾಗ “ಅಣ್ಣಾ, ನಾನು ನಾಳಿನಿಂದ ಶಾಲೆಗೆ ಹೋಗುವದಿಲ್ಲ' ಎಂಬ ಧ್ವನಿಯ ಕೇಳಬಂದಿತು. ಕತ್ತೆತ್ತಿ ನೋಡುತ್ತಾರೆ- ಹದಿನೈದು ವರುಷದ ಚಪಲನಾದ ಲಖು (ಲಕ್ಷಣ) ! “ಶಾಲೆಯನ್ನು ಬಿಟ್ಟು ಏನು ಮಾಡುವವನಿರುವೆ ?” ಎಂದು ಕಾಶೀನಾಥಪಂತರು ಗಂಭೀರವಾಗಿ ವಿಚಾರಿಸಿದರು. ಲಕ್ಷ್ಮಣನ ಉತ್ತರವು ಸಿದ್ದವಿದ್ದಿತು. “ಮುಂಬಯಿಗೆ ಹೋಗಿ ಚಿತ್ರಕಲೆಯ ಅಥವಾ ಯಂತ್ರ ಕಲೆಯ ಶಿಕ್ಷಣ ಪಡೆವ ಇಚ್ಚೆ ನನಗಿದೆ, ಈ ವಿಷಯಗಳು ನನಗೆ ಬಹಳ ಸೇರುತ್ತವೆ, ಈ ಮಾತನ್ನು ರಾಮೂ ಅಣ್ಣನಿಗೂ ತಿಳಿಸಿದ್ದೇನೆ. ಅವನಿಗೆ ಇದು ಪೂರ್ಣವಾಗಿ ಮನಸ್ಸಿಗೆ ಬಂದಿದೆ.” - “ಒಳ್ಳೆಯದು, ನಿನ್ನ ಇಚ್ಛೆಯಂತೆಯೇ ಆಗಲಿ, ಆದರೆ ನಾವು ಎಷ್ಟು ಬಡವರಿರುವೆನೆಂಬ ಕಲ್ಪನೆಯು ನಿನಗೆ ಇದೆಯೇ ? ನನಗೆ ಬರುವ ಹನ್ನೆರಡು ರೂಪಾಯಿ ಮಾಸಿಕ ವೇತನದಲ್ಲಿ, ನಿನಗಾಗಿ ಬಹಳವಾದರೆ ಎರಡು ರೂಪಾಯಿ ಗಳನ್ನು ಮಾತ್ರ ಕೊಡಬಲ್ಲೆ.” “ಅಣ್ಣಾ, ಅದರ ಯೋಚನೆಯೇ ನಿನಗೆ ಬೇಡ, ನಾನು ಅದನ್ನು ನೋಡಿಕೊಳ್ಳುವೆ.”
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೧೬
ಗೋಚರ