!! ನಿರೀಚಿನಬಳ್ಳಿ ಆದರೆ ಇಂತಹ ಮೇಲಧಿಕಾರದ ಸ್ಥಾನವನ್ನು ಒಬ ಭಾರತೀಯನಿಗೆ ಹೇಗೆ ಕೊಡಬೇಕು ? ಎಂಬ ಕರಿ -ಬಿಳಿಯ ಭೇದವು ಅಡ್ಡ ಒಂದಿತು. ಕೊನೆಗೆ. ಯಥಾತಥಾ ಜ್ಞಾನವಿದ್ದ ಒಬ್ಬ ಆಂಗ್ಲೋ-ಇಂಡಿಯನ್ನನನ್ನು ಹುಡುಕಿ ಆ ಸ್ಪಳಕ್ಕೆ ನೇಮಿಸಿದನು, ಈ ನಿರ್ಣಯವನ್ನು ಕೇಳಿ ಲಕ್ಷಣರಾವ ಹಾಗೂ ಮಾಡುಲ ಕರರಿಗೆ ಕೆಡುಕೆನಿಸಿತು. ಪಕ್ಷಪಾತದ ಪ್ರತ್ಯಕ್ಷ ನಿದರ್ಶನವಿದ್ದಿತು. ಈ ಅಪಮಾನವನ್ನು ಸ್ವಾಭಿಮಾನಿಗಳಾದ ಲಕ್ಷ್ಮಣರಾಯರು ಸಹಿಸುವದೆಂತು ? ಇದರ ಬಗ್ಗೆ ನ್ಯಾಯ ದೊರಕಿಸುವ ಸಂಕಲ್ಪವನ್ನು ಇಬ್ಬರೂ ಮಾಡಿದರು. ಇಬ್ಬರೂ ಪ್ರಿನ್ಸಿಪಾಲರಿಗೆ ಭಟ್ಟಿಯಾಗಿ ತಮಗಾದ ಅನ್ಯಾಯವನ್ನೆಲ್ಲ ವಿವರಿಸಿ ದರು, ಆದರೆ ಎಲ್ಲವೂ ಬೋರ ಇಮೇಲೆ ಮಳೆಗರೆದಂತಾಯಿತು. ಈ ಅನ್ಯಾಯಕ್ಕೆ ರಾಜೀನಾಮೆಯನ್ನು ಕೊಟ್ಟು ಹೊರ ಬರುವದೊಂದೇ ಉಪಾಯವೆಂದು ನಿರ್ಣಯಿಸಿ ತ್ಯಾಗಪತ್ರಗಳನ್ನು ಪ್ರಿನ್ಸಿಪಾಲರ ಕಡೆಗೆ ಕಳಿಸಿದರು. ಈ ಇಬ್ಬರೂ ಶಿಕ್ಷಕರು ರಾಜೀನಾಮೆಯನ್ನು ಕೊಟ್ಟಿರುವರೆಂಬ ಸುದ್ದಿಯು ಸಂಸ್ಥೆಯಲ್ಲಿ ಕಳವಳವನ್ನುಂಟು ಮಾಡಿತು, ಎಷ್ಟೋ ಜನರು ಅವರ ಧೈರವನ್ನು ಕೊಂಡಾಡಹತ್ತಿದರು, ಆದರೆ ಮತ್ತೆ ಕೆಲವರು ಇದು ಮೂರ್ಖತನವೆಂದು ನಿಶ್ಚಯಿಸಿ ರಾಜೀನಾಮೆಯನ್ನು ತಿರುಗಿ ತೆಗೆದುಕೊಳ್ಳಲು ಸಲಹೆಗಳನ್ನಿಯಹತ್ತಿದರು, “ಬಂಗಾರದಂಧ ಸರಕಾರೀ ಕೆಲಸವನ್ನು ಹತ್ತು ವರ್ಷ ಮಾಡಿ ಕ್ಷುಲ್ಲಕ ಕಾರಣಕ್ಕಾಗಿ ಅದರ ಮೇಲೆ ನೀರೆರೆಯುವದು ಎಂತಹ ಬುದ್ದಿವಂತಿಕೆ ? ಈ ತಲೆತಿರುಕತನದ ಬಗ್ಗೆ ಇಬ್ಬರಿಗೂ ಪಶ್ಚಾತ್ತಾಪವಾಗದೆ ಇರಲಾರದು” ಎಂದು ಕೆಲ ಭೀರುಗಳು ಪಿಸುಗುಡಹತ್ತಿದರು ಈ ಬಿರುಗಾಳಿಗೆ ಮಾಡು೦ಕರರ ಧೈರವು ನಡುಗಿತು. ಅವರು ಧೈರಗುಂದಿ ತಮ್ಮ ರಾಜೀನಾಮೆಯನ್ನು ತಿರುಗಿ ತೆಗೆದುಕೊಂಡಿರುವದಾಗಿ ಪ್ರಿನ್ಸಿಪಾಲರಿಗೆ ತಿಳಿಸಿದರು, ಆದರೆ ಲಕ್ಷ್ಮಣರಾಯರ ನಿಶ್ಚಯದಲ್ಲಿ ಏನೂ ಬದಲಾಗಲಿಲ್ಲ. ಸ್ವಾಭಿಮಾನದಿಂದ ಸಂನ್ಸೆಯಿಂದ ಹೊರಬಿದ್ದ ಲಕ್ಷಣರಾಯರು “ಪುನಶ್ಚ ಹರಿಃ ಓಂ” ಎಂದು ನವ ಉದ್ಯೋಗದ ಶೋಧದಲ್ಲಿ ತೋಡಗಿದರು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೪೫
ಗೋಚರ