ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ವಾತಂತ್ರ್ಯದತ್ತ - ಚಿಕ್ಕಮಕ್ಕಳು ತಮ್ಮ ಕಾಲಮೇಲೆ ನಿಂತು ತಪ್ಪು ಹೆಜ್ಜೆ ಹಾಕುತ್ತ ಬೀಳುತ್ತ ಏಳುತ್ತ ಕೊನೆಗೆ ನಡೆಯಲು ಪ್ರಾರಂಭಿಸುವಂತೆ ಯಾವುದೇ ಕ್ಷೇತ್ರ ದಲ್ಲಿ ಯಶಸ್ವಿಯಾಗಬೇಕಾದರೆ ಹೀಗೆಯೇ ಪ್ರಯತ್ನ ಮಾಡಬೇಕಾಗುತ್ತದೆ. ಇನ್ಸ್ಟಿಟ್ಯೂಟ್‌ದಿಂದ ಹೊರಬಿದ್ದ ಲಕ್ಷ್ಮಣರಾಯರ ಪ್ರಯತ್ನವು ಇದೇ ಬಗೆಯಾಗಿದ್ದಿತು, ತನ್ನ ಕಾಲಮೇಲೆ ಕಲ್ಲು ಹಾಕಿಕೊಂಡ?” ಎಂದು ಗುಣು ಗುಟ್ಟುವ ಜನರಿಗೇನೂ ಕಡಿಮೆಯಿರಲಿಲ್ಲ, ಆದರೆ ಲಕ್ಷ್ಮಣರಾಯರ ತಲೆಯಲ್ಲಿ “ತಾವು ಮಾಡಿದುದು ತಪ್ಪು' ಎಂಬ ಕಲ್ಪನೆಯು ಎಂದೂ ಬರಲಿಲ್ಲ. ಸಂಸ್ಥೆ ಯಲ್ಲಿರುವಾಗಲೇ ತಾವು ಸ್ವತಂತ್ರವಾಗಿ ಯಾವದಾದರೊಂದು ವಸ್ತುವನ್ನು ನಿರ್ಮಿಸುವ ಉದ್ಯೋಗವನ್ನು ಪ್ರಾರಂಭಿಸಬೇಕೆಂದು ಮನಸ್ಸಿನಲ್ಲಿ ಮೆಲಕು ಹಾಕುತ್ತಿದ್ದರು. ಈ ಸಮಯಕ್ಕೆ ಉದ್ಯೋಗ ವ್ಯವಸಾಯಗಳ ಕಡೆಗೆ ವಿಚಾರವಂತ ಭಾರತೀಯರ ಲಕ್ಷವು ಹೊರಳಿತ್ತು, ಮೊದಮೊದಲು ಬ್ರಿಟಿಶರೆಂದರೆ ನಮ್ಮ ಹಿತಕ್ಕಾಗಿ ಸ್ವರ್ಗದಿಂದ ಬಂದ ದೇವತೆಗಳು.” ಎಂದು ಹೊಗಳುತ್ತಿದ್ದ ಜನ ದೇಶದಲ್ಲಿಯ ಉದ್ಯೋಗಗಳು ಒಂದರ ಹಿಂದೊಂದು ಪಟಪಟ ಬಿದ್ದು ಮುಳು ಗುವದನ್ನು ಕಾಣಹತ್ತಿದರು, ರಾಷ್ಟ್ರದ ಆರ್ಥಿಕ ಶೋಷಣೆಯಾಗಿ ಬಡತನವು ತಲೆಯೆತ್ತಿ.ಜನರ ಕಣ್ಣುಗಳು ತೆರೆದವು. ಈ ಸಂಕಟವನ್ನು ಹೇಗೆ ಎದುರಿಸ ಬೇಕೆಂದು ಸುಶಿಕ್ಷಿತರೆಲ್ಲರೂ ಚಿಂತಿಸಹತ್ತಿದರು. ಪರದೇಶಕ್ಕೆ ಹರಿಯುವ ಸಂಸತ್ತಿನ ಹೊಳೆಯನ್ನು ನಿಲ್ಲಿಸಲು ಸ್ವರಾಜ್ಯವೊಂದೇ ತರುಣೋಪಾಯವೆಂದೂ ಭಾರತೀಯ ಉದ್ಯಮೆಗಳನ್ನು ಪುನರುಜೀವನಗೊಳಿಸುವದೇ ಉತ್ತಮ ಸಾಧನ ನೆಂದೂ ಮನಗಂಡರು, ಜಾಂಬೇಕರರ ಮನೆಯಲ್ಲಿ ನಡೆಯುತ್ತಲಿದ್ದ ಚರ್ಚೆಯ ಫಲಿತಾಂಶವೂ ಇದೇ ಇದ್ದಿತು, ನಮ್ಮ ಜೀವನಕ್ಕೆ ಅವಶ್ಯವಿರುವ ವಸ್ತುಗಳನ್ನೆಲ್ಲ ನಾವೇ ನಿರ್ಮಿಸಿಕೊಳ್ಳಬೇಕು, ಪರದೇಶಗಳಿಂದ ತರಿಸಕೂಡ ದೆಂದು ಎಲ್ಲರೂ ಆವೇಶದಿಂದ ಪ್ರತಿಪಾದಿಸುತ್ತಿದ್ದರು. ಆದರೆ ಮಾತನಾಡಿ