ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨y ಮಿಂಚಿನಬಳ್ಳಿ ದಂತೆ ಮಾಡುವದು ಅಷ್ಟು ಸುಲಭವಲ್ಲ. ಯಾವುದೊಂದು ವಸ್ತುವನ್ನು ನಿರ್ಮಿಸಲು ಯಂತ್ರಗಳ ಅನುಭವ, ಜ್ಞಾನ, ಆ ಉದ್ಯಮಕ್ಕೆ ಬೇಕಾಗುವ ಬಂಡವಲು ಇಲ್ಲದೆ ಎಂತಹ ಚಿಕ್ಕ ವಸ್ತುವನ್ನಾದರೂ ಹೇಗೆ ನಿರ್ಮಿಸಬಲ್ಲೆವು ? ದೇಶಾಭಿಮಾನಿಗಳಾದ ಈ ಜನರ ದೃಷ್ಟಿಯ ಲಕ್ಷಣರಾಯರ ಮೇಲೆ ಬಿದ್ದಿತು. “ಲಕ್ಷ್ಮಣರಾಯರೇ ! ತಾವು ಈಗ ಯಾವುದಾದರೊಂದು ವಸ್ತು ವಿನ ನಿರ್ಮಿತಿಗೆ ಕೈ ಹಾಕಬೇಕು. ನಿಮಗೆ ಯಾಂತ್ರಿಕ ಜ್ಞಾನವು ಚನ್ನಾಗಿದೆ. ಮತ್ತು ನೀವು ಮೊನ್ನಿನ ಗಣಪತಿಯ ಉತ್ಸವದಲ್ಲಿ ವಿದ್ಯುತ್‌ ಯಂತ್ರವನ್ನು ನಿರ್ಮಿಸಿ ಎಲ್ಲರನ್ನೂ ಚಕಿತಗೊಳಿಸಿರುವಿರಿ, ನಮಗೆ ಅಶಕ್ಕವಿದ್ದುದು ನಿಮಗೆ ಶಕ್ತವಿದೆ.” ಎಂದು ಪ್ರೋತ್ಸಾಹಿಸಿದರು. ಗಣೇಶೋತ್ಸವವನ್ನು ಈ ಗುಂಪು ಒಳ್ಳೆ ಸಡಗರದಿಂದ ನೆರವೇರಿಸು ತಿತ್ತು, ಅದರಲ್ಲಿ ಲಕ್ಷ್ಮಣರಾಯರು ಶ್ರೀಲಕ್ಷ್ಮಿಯ ಮೂರ್ತಿಯನ್ನು ಸಿದ್ದ ಪಡಿಸುವ ಕಾರವನ್ನು ಕೈಕೊಂಡಿದ್ದರು. ಚಿತ್ರಕಾರರಾದ ಸಾತವಳೇಕರರು ಮಂಟಪವನ್ನು ಶೃಂಗರಿಸಲು ಅಣಿಯಾಗಿದ್ದರು. ಈ ಉತ್ಸವದಲ್ಲಿ ಲಕ್ಷಣರಾಯರ ಕೃತಿಯು ಎಲ್ಲರ ಮನಸ್ಸನ್ನು ಆಕರ್ಷಿಸಿತು, ಗಣಪತಿಯ ಎದುರಿಗೆ ನೀರು ತುಂಬಿದ ಗಂಗಾಳವನ್ನಿಟ್ಟು ಅದರ ತಳದಲ್ಲಿ ಒಂದು ರೂಪಾಯಿಯನ್ನಿಟ್ಟ ದ್ದರು. “ಅದರಲ್ಲಿಯ ರೂಪಾಯಿಯನ್ನು ಯಾರು ತೆಗೆಯುವರೋ ಅವರಿಗೇ ಅದು” ಎಂದು ಲಕ್ಷ್ಮಣರಾಯರು ಹೇಳುತ್ತಿದ್ದರು, ಮತ್ತು ತಾವು ಅದನ್ನು ತೆಗೆದು ತೋರಿಸುತ್ತಿದ್ದರು. ಆದರೆ ಇತರರಾರಾದರೂ ನೀರನ್ನು ಮುಟ್ಟಿ ದೊಡನೆಯೇ ಅವರಿಗೆ ವಿದ್ಯುತ್ತಿನ ಧಕ್ಕೆ ತಗಲುತ್ತಿದಿ ತು, “ಇದೇನು ಗೌಡ ಬಂಗಾಲಿ' ಎಂದು ಜನರು ಆಶ್ಚರಚಕಿತರಾಗುತ್ತಿದ್ದರು. ಆದರೆ ಅದರಲ್ಲಿ ಯಾವ ಜಾದುವೂ ಇರಲಿಲ್ಲ, ಲಕ್ಷ್ಮಣರಾಯರು ತಮ್ಮ ಅಣ್ಣನ ಸಹಾಯ ದಿಂದ ಒಂದು ಬ್ಯಾಟರಿಯನ್ನು ಸಿದ್ಧಪಡಿಸಿ ಆ ಗಂಗಾಳಕ್ಕೆ ಜೋಡಿಸಿದ್ದರು. ೧೮೯೦ ರಲ್ಲಿ ವಿದ್ಯುತ್ತನ್ನೇ ಅರಿಯದ ಜನ ಇದನ್ನು ಹೇಗೆ ಅರ್ಥ ಮಾಡಿಕೊಳ್ಳ ಬೇಕು ? ಇದರಿಂದ ಲಕ್ಷಣರಾಯರು ಒಬ್ಬ ದೊಡ್ಡ ಸಂಶೋಧಕರೆಂದು ಜನರ ರೈಲ್ಲ ಸುದ್ದಿ ಹಬ್ಬಿತು.

  • ತನಗೆ ಸಣ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಿದ್ದ ವಸ್ತುವು ಯಾವುದು ? ಸಾಧ್ಯವಿದ್ದ ಸಾಮಗ್ರಿಗಳಿಂದ ಸಿದ್ದವಾಗುವ, ಸುಲಭವಾಗಿ ಪೇಟೆ ಯಲ್ಲಿ ಮಾರಾಟವಾಗುವ, ವಸ್ತುವು ಯಾವುದು ? ಎಂಬ ವಿಚಾರಗಳಲ್ಲಿಯೇ