ಬಂಚಿನಬಳ್ಳಿ ಒಟ್ಟಿನಲ್ಲಿ ಈ ಪ್ಲೇಗದ ಹಾವಳಿಯು ಲಕ್ಷಣರಾಯರ ಕಾರಖಾನೆಯನ್ನು ಹಾಳುಗೆಡವಿದ್ದಲ್ಲದೆ ಲಕ್ಷ್ಮಣರಾಯರ ಮುಂಬಯಿ ವಾಸವನ್ನೂ ಕೊನೆ ಗೊಳಿಸಿತು. - ಲಕ್ಷಣರಾಯರು ಪರಿಸ್ಥಿತಿಯನ್ನೆಲ್ಲ ರಾಮೂಅಣ್ಣಾ ಅವರಿಗೆ ಬರೆದು ತಿಳಿಸಿದರು, ಆಗ ಅವರು “ ನೀನು ಕೂಡಲೆ ಬೆಳಗಾವಿಗೆ ಹೊರಟು ಬಾ. ಇಲ್ಲಿ ಸಾಯಕಲ್ಲಿನ ಉದ್ಯೋಗವು ಭರದಿಂದ ನಡೆದಿದೆ. ನೀನು ಬಂದರೆ ಅದನ್ನು ಇನ್ನೂ ಬೆಳೆಸಬಹುದು, ಇಲ್ಲಿಯೂ ನಿನಗೆ ಸಾಕಷ್ಟು ಕಾರ್ಯಕ್ಷೇತ್ರವು ಇದೆ ಎಂಬುದು ಕಂಡುಬಂದೀತು” ಎಂದು ಬರೆದರು. ರಾಮರಾಯರೆಂದರೆ ಲಕ್ಷ್ಮಣರಾಯರಿಗೆ ಪ್ರಾಣ, ಅಕ್ಷಣರಾಯರನು ಮನೆಯಲ್ಲಿ ಇಟ್ಟುಕೊಂಡು ಸಾಕಿ ಸಲಹಿದವರು, ಅವರ ವಿದ್ಯಾಭ್ಯಾಸವನ್ನು ಅವರೇ ಮಾಡಿಸಿದವರು, ಅವರು ತಮ್ಮನನ್ನು ಬಹಳ ಪ್ರೀತಿಸುತ್ತಿದ್ದರು. ಲಕ್ಷ್ಮಣರಾಯನ ಒಲವು ಓದಿನ ಕಡೆಗೆ ಇಲ್ಲವೆಂದು ಅವರು ಸಿಟ್ಟಾಗಲಿಲ್ಲ. ಯಾರ ಮನನ ಯಾವ ವಿಷಯದಲ್ಲಿ ಓಡುವದೋ ಅದನ್ನೇ ಅಭ್ಯಸಿಸಲು ಅವರಿಗೆ ಅವಕಾಶವನ್ನು ಒದಗಿಸುವದು ಶ್ರೇಯಸ್ಕರವ, ಇದನ್ನಂತ ರಾವ.. ರಾಯರು ಅವರಿಗೆ ಉತ್ತೇಜನ ಕೊಟ್ಟರು. ಇದರಿಂದ ಲಕ್ಷ್ಮಣರಾಯರಿಗೆ ತಮ್ಮ ಅಣ್ಣನು ತನಗೆ ನಿಜವಾದ ಕೈ ವಾರಿ ಎಂದೆನಿಸುವದು ಸಹಜವಾಗಿದ್ದಿತು. ಆದುದರಿಂದಲೇ ಮುಂಬಯಿಗೆ ಹೋಗುವ ಮುನ್ನ ಅಣ್ಣನ ಬೆಂಬಲವನ್ನು ಪಡೆದಿದ್ದರು. ಅಣ್ಣನ ಪತ್ರ ಬಂದೊಡನೆಯೇ ಬೆಳಗಾವಿಗೆ ಹೊರಡುವ ನಿಶ್ಚಯವನ್ನು ಅಕ್ಷಣರಾಯರು ಮಾಡಿದರು, ತಮ್ಮ ಗಂಟುಗಪಡಿಗಳನ್ನೆಲ್ಲ ಕಟ್ಟಿದರು. ತಮಗೆ ಉಪಯುಕ್ತವೆನಿಸುವ ಮುತ್ತಸಾಮಗ್ರಿಗಳನ್ನೆಲ್ಲ ಬೆಳಗಾವಿಗೆ ಕಳಿಸಿ ಕೊಟ್ಟರು. ೧೮೯೬ ರಲ್ಲಿ ಒಂದು ದಿನ ಮುಂಬಯಿಗೆ ಶರಣು ಹೊಡೆದು ಹೆಂಡತಿಯೊಡನೆ ಬೆಳಗಾವಿಗೆ ಹೊರಟು, ಇಲ್ಲಿಗೆ ರಾಯರ ಉದ್ದನುದಲ್ಲಿಯ ಮೊದಲನೆಯ ಹಿ೦ತು ಮುಗಿಯಿತು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೧
ಗೋಚರ