ದೈವವು ತೆರೆಯಿತು - ಬೆಳಗಾವಿಯಲ್ಲಿ ಕೇಳಕರ ಬಾಗಿನಲ್ಲಿ ರಾಮರಾಯರು ವಾಸಿಸುತ್ತಿದ್ದರು. ಲಕ್ಷ್ಮಣರಾಯರೂ ಅಲ್ಲಿಯೇ ಬೀಡಾರ ಮಾಡಿದರು. ಅವರು ಬಂದಂದಿನಿಂದ ಸಾಯಕಲ್ಲಿನ ಉದ್ಯೋಗಕ್ಕೆ ಕಳೆಯೇರಿತು, ಸೈನಿಕ ನಿವಾಸದಲ್ಲಿ ಒಂದು ಆಯಕಟ್ಟಿನ ಸ್ಥಳವನ್ನು ಬಾಡಿಗೆಗೆ ಹಿಡಿದು ಅಂಗಡಿಯನ್ನು ಸ್ಥಳಾಂತರಿಸಿದರು. ಆಧುನಿಕ ಪ್ರಚಾರ ತಂತ್ರದಲ್ಲಿ ಲಕ್ಷ್ಮಣರಾಯರಿಗೆ ಬಲು ವಿಶ್ವಾಸ, ಆದ್ದ. ರಿಂದಲೇ ಅವರು ಸಾಯಕಲ್ಲುಗಳ ಹಾಗೂ ಅದರ ಬಿಡಿ ಭಾಗಗಳ ಸೂಚಿಪತ್ರ (ಕ್ಯಾಟಲಾಗ) ವನ್ನು ಕಿರ್ಲೋಸ್ಕರ ಬಂಧುಗಳ ಹೆಸರಿನಿಂದ ಮುದ್ರಿಸಿ ಪ್ರಕಟಿಸಿದರು. ಸಾಯಕಲ್ಲಿನ ಅಂಗಡಿಯು ಬೆಳೆದು ಚನ್ನಾಗಿ ಬೇರೂರಿತು. ಆದರೆ ಲಕ್ಷ್ಮಣರಾಯರಿಗೆ ಇಷ್ಟರಿಂದ ತೃಪ್ತಿಯಿರಲಿಲ್ಲ. ಅವರ ಶಬ್ದಕೋಶದಲ್ಲಿ ಸಮಾಧಾನವೆಂಬ ಶಬ್ದ ವೇ ಇರಲಿಲ್ಲ. ವಿಶ್ರಾಂತಿಯಿಲ್ಲದ ಪ್ರವಾಸಿಕರು ಇವರು. ಅಂಗಡಿ ಸುಸೂತ್ರವಾಗಿ ನಡೆದೊಡನೆ ಏನಾದರೊಂದು ಹೊಸ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ವಿಚಾರದಲ್ಲಿ ಮಗ್ನರಾದರು, ಬೆಳಗಾವಿಯಲ್ಲಿ ಪಶ್ಚಿಮದ ಗಾಳಿಯು ಸತತ ಬೀಸುತ್ತಿದ್ದಿತು. ಊರಲ್ಲಿ ಆಗಲೂ ನಳಗಳಿರಲಿಲ್ಲ, ಈಗಲೂ ಬಾವಿಗಳಿಂದಲೇ ನೀರು ಸೇದುವರು, ಈ ಬಾವಿಗಳಿಗೆ ಪವನಚಕ್ಕಿಯನ್ನು ಜೋಡಿಸಿದರೆ, ಗಾಳಿಯಿಂದ ಅನಾಯಾಸವಾಗಿ ನೀರು ಮೇಲೆ ಬಂದು, ಮಾನವರ ಶ್ರಮವೆಲ್ಲ ಉಳಿಯುವದಲ್ಲ ! ಎಂಬ ಕಲ್ಪನೆಯು ಅವರ ತಲೆಯಲ್ಲಿ ಸುಳಿಯಹತ್ತಿತು. ಪವನಚಕ್ಕಿಯ ಬಗ್ಗೆ ಅವಶ್ಯವಿದ್ದ ಸಂಗತಿಗಳನ್ನೆಲ್ಲ ಕಲೆಹಾಕಿದರು. ಅಮೇರಿಕೆಯ ಒಕ್ಕಲಿಗರು ಒಕ್ಕಲುತನಕ್ಕಾಗಿ ಈ ಯಂತ್ರ ಗಳನ್ನು ಹೆಚ್ಚಾಗಿ ಉಪಯೋಗಿಸುವರೆಂದು ತಿಳಿದು ಬಂದಿತು. ಈ ಹವನಚಕ್ಕೆಗಳಲ್ಲಿ ಸಮ್ಸನ್ ಕಂಪನಿಯ ಚಕ್ಕೆಗಳು ಹೆಚ್ಚು ಉಪಯೋಗಬೀಳುವ ವೆಂದು ನಿಶ್ಚಯಿಸಿ ಆ ಕಂಪನಿಯ ಎಜನ್ಸಿಯನ್ನು ದೊರಕಿಸಿದರು, ಬೆಳಗಾವಿಯ ನಿವಾಸಿಗಳಾದ ಗಿಂಡೆ, ಬಾಯಿಸ ಮೊದಲಾದ ಪ್ರಕೃತಿಗಳ ಬಂಗಲೆಗಳಲ್ಲಿಯ
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೨
ಗೋಚರ