ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಯಂತ್ರಯೋಗಿ ಕಿರ್ಲೋಸ್ಕರ ಲಕ್ಷಣರಾಯರು ಒಂದು ಗುಡಿಸಲನ್ನು ಕಟ್ಟಿಸಿಕೊಂಡರು. ರಾಮರಾಯರು ಸರದಾರ ಹೈಸ್ಕೂಲಿನ ಶಿಕ್ಷಕರಷ್ಟೇ ? ಅವರನ್ನು ಕಂಡು ಅವರ ಸ್ನೇಹಿತರಾದ ಶ್ರೀ ಮೋಹ; ಹಳಬೆ, ಮಹಿಷಿ ಮೊದಲಾದ ಶಿಕ್ಷಕರೂ ಈ ಬೈಲಿನಲ್ಲಿ ಇರಲು ಬಂದರು. ಕೆಲವು ಡಾಕ್ಟರರೂ ಗುಡಿಸಲುಗಳನ್ನು ಹಾಕಿದರು. ಹೀಗೆ ಇದಕ್ಕೆ ಹೊಸ ಊರಿನ ಸ್ವರೂಪವು ಪ್ರಾಪ್ತವಾಯಿತು. ೧೯೦೦ ರ ಸುಮಾರಿಗೆ ಕಿರ್ಲೋಸ್ಕರ ಒಂದುಗಳ ಉದ್ಯೋಗವು ಸಾಕಷ್ಟು. ಸೈರಗೊಂಡಿದ್ದಿತು, ಆದರೆ ಇದರಿಂದ ಲಕ್ಷ್ಮಣರಾಯರಿಗೆ ಸಮಾಧಾನವಾಗ ಲಿಲ್ಲ. ತಾವು ಕೇವಲ ವಿಲಾಯತಿಯ ಮಾತುಗಳ ಸಿಜಂಟರಾಗುವದಕ್ಕಿಂತ ಸ್ವತಃ ಮಾಲುಗಳನ್ನು ಸಿದ್ದಪಡಿಸಿ ಕಾರಖಾನೆದಾರರಾಗಬೇಕೆಂಬ ಹಂಬಲವು ಅವರ ಮನಸ್ಸಿನಲ್ಲಿ ಕಟೆಯಹತ್ತಿತು, ವಿಲಾಯತಿಯಿಂದ ಸಾಯಕಲ್ಲುಗಳನ್ನು ತರಿಸುವಕ್ಕಿಂತ ಅವಶ್ಯವಿರುವ ಸಾಹಿತ್ಯಗಳನ್ನು ಕೂಡಿಸಿ ನಾವೇ ಏಕೆ ಸಾಯಕಲ್ಲುಗಳನ್ನು ನಿಮ್ಮಿಸಬಾರದು ? ಎಂದು ವಿಚಾರಿಸಹತ್ತಿದರು. ಆ ಪ್ರಯತ್ನಕ್ಕೆ ಕೈ ಹಾಕಿ ನಾಲ್ಕು ಸೈಕಲ್ಲುಗಳನ್ನು ಸಿದ್ದಪಡಿಸಿದರು ಕೂಡ. ನಾಯಕಲ್ಲುಗಳನ್ನು ನಿರಿಸುವದು ಅಶಕ್ಯವಲ್ಲದಿದ್ದರೂ ಸಾಕಷ್ಟು ಬಂಡವಲು ಇಲ್ಲದೇ ಈ ಉದ್ಯಮಕ್ಕೆ ಕೈಯಿಕ್ಕುವದು ತಪ್ಪು ಎಂಬ ಅನುಭವವೂ ಅವರಿಗೆ ಬಂದಿತು. ಆಗ ಅವರು ತಮ್ಮ ಅಳತಯಲ್ಲಿರುವ ಯಾವ ಮಾಲನ್ನು ಸಿದ್ದ ಸಡಿಸಬಹುದು ? ಎಂಬ ಶೋಧಕ್ಕೆ ಬಿದ್ದರು. - ಪರದೇಶದ ಕಾರಖಾನೆಗಳಿಂದ ಅವರ ಮಾಲುಗಳ ಸೂಚಿಪತ್ರಿಕೆಯನ್ನು ತರಿಸುವ ಹುಚ್ಚು ಲಕ್ಷರಾಯರಿಗೆ ಮೊದಲಿನಿಂದ ಇದ್ದಿತು, ಇಂತಹ ಸೂಚಿ ಪತ್ರಿಕೆಗಳಿಂದ ಮೂರು ನಾಲ್ಕು ಕಪಾಟುಗಳು ತುಂಬಿದ್ದವ್ರ, ಕಾಮೂಅಣ್ಣಾ ಅವರು ಈ ಎಲ್ಲ ಪತ್ರಿಕೆಗಳ ಜಂತ್ರಿಯನ್ನು ಇಂಗ್ರೇಜಿಯಲ್ಲಿ ಸುಂದರವಾಗಿ ಮಾಡಿ ಇಟ್ಟಿದ್ದರು. ಲಕ್ಷ್ಮಣರಾಯರು ಈ ಸಂಗ್ರಹವನ್ನು ನಿರೀಕ್ಷಿಸುತ್ತಿರು ವಾಗ ಮೇವು ಕೊರೆಯುವ ಯಂತ್ರವು ಇವರ ದೃಷ್ಟಿಗೆ ಬಿದ್ದಿತು, ಅದು ಅವರ ಕುತೂಹಲವನ್ನು ಕೆರಳಿಸಿತು. ಅಮೇರಿಕೆಯಿಂದ ಆ ಯಂತ್ರವನ್ನು ತರಿಸಿವಕು ಯಂತ್ರವು ತೀರ ಸಾದಾ ಇದ್ದಿತು, ನಾಲ್ಕು ಕಾಲುಗಳ ಮೇಲೆ ಒಂದು ಚೌಕ ಕಟ್ಟಿಗೆಯ ಪೆಟ್ಟಿಗೆಯಿದ್ದು ಅದರ ಬಾಯಿಗೆ ಮೇಲೆ ಕೆಳಗೆ ಮಾಡಲು ಬರುವ ಚೂರಿಯಿಂದ ಕೂಡಿದ ಒಂದು ಕೈ ಕೋಲು (ಹ್ಯಾಂಡಲ್) ಜೋಡಿಸಲ್ಪಟ್ಟಿತ್ತು. ಈ ಯಂತ್ರಗಳಿಂದ ಕೊರೆದ ಮೇವಿನ ತುಂಡಿಗೆ ಉಪ್ಪಿನ ನೀರನ್ನು ಸಿಂಪಡಿಸಿ