ಮಿಂಚಿನಬಳ್ಳಿ ಸ್ವಲ್ಪ ಹಿಂಡಿಯನ್ನು ಬೆರಿಸಿ ದನಗಳ ಮುಂದಿಟ್ಟರೆ ಅವು ಅತ್ಯಂತ ಪ್ರೇಮದಿಂದ ತಿನ್ನುವದು ಕಂಡುಬಂದಿತು, ಆಗ ಮೇವಿನ ಬಳಿಕೆಯನ್ನು ಉಳಿಸುವ ದನಗಳ ಪೋಷಣೆಯನ್ನು ಮಾಡುವ ಉಪಯುಕ್ತವಿದ್ದ ಈ ಯಂತ್ರವನ್ನು ಮಾಡುವ ಸಂಕಲ್ಪವನ್ನು ಮಾಡಿದರು. ಸಾಯಕಲ್ಲಿನ ಅಂಗಡಿಯಲ್ಲಿ ಮಿಟ್ಸ್ ಮತ್ತು ಮೆರೆಲಿಯ ಎರಡೂವರೆ ಅಶ್ವಶಕ್ತಿಯ ಇಂಜೀನು, ಬರೈಸ್ ಕಂಪನಿಯ ಒಂದು ಚಿಕ್ಕ ಲೇಥು, ಒಂದು ಲಿಂಗ ಯಂತ್ರ, ಒಂದು ಎಮರಿ ಗ್ರಾಯಿಂಡರ ಇಷ್ಟು ಯಂತ್ರಗಳಿದ್ದವು. ಅಂಗಡಿಯ ಹಿಂಬದಿಯ ಚಪ್ಪರದಲ್ಲಿ ಒಂದು ಭಟ್ಟಿ ಇದ್ದಿತು. ೪-೫ ಜನ ರಿಂದಲೇ ಈ ಎಲ್ಲ ಕಾರ್ಯವು ಸಾಗುತ್ತಿತ್ತು, ಇಷ್ಟೇ ಸಲಕರಣೆಗಳಿಂದ ರಾಯರು ಮೇವು ಕೊರೆಯುವ ಯಂತ್ರದ ಕಾರ್ಯವನ್ನು ಪ್ರಾರಂಭಿಸಿದರು. ಕಟ್ಟಿಗೆಯ ಬದಲು ತಗಡು ಮತ್ತು ತ್ರಿಕೋನಾಕೃತಿಯ ಕಬ್ಬಿಣಗಳನ್ನು ಉಪಯೋಗಿಸಿದರು, ಬೀಡಿನ ಕೈಕೋಲುಗಳನ್ನು ಮುಂಬಯಿಯಿಂದ ಎರಕ ಹೊಯಿಸಿ ತರಿಸಿದರು. ಹೀಗೆ ೧೯೦೧ ರಲ್ಲಿ “ಕಿರ್ಲೋಸ್ಕರ ಬಂಧುಗಳ ಮೇವು ಕೊರೆಯುವ ಮೊದಲನೆಯ ಯಂತ್ರವು ಹೊರಬಿದ್ದಿತು, ವೃತ್ತ ಪತ್ರ ಗಳಲ್ಲಿ ಅದರ ಜಾಹೀರಾತು ಮೆರೆಯಹತ್ತಿತು, ಯಂತ್ರದ ಬೆಲೆಯು ೧೦-೫-೦ ಮಾತ್ರ, ಕಿರ್ಲೋಸ್ಕರ ಬಂಧುಗಳ ಕಾರಖಾನೆಯ ಉಗಮವು ಹೀಗೆ ತೀರ ಚಿಕ್ಕ ಪ್ರಮಾಣದಲ್ಲಿ ಪ್ರಾರಂಭವಾಯಿತು. ರಾಯರ ಈ ಪ್ರಯತ್ನವು ವ್ಯರ್ಥ ಹೋಗಲಿಲ್ಲ. ಮೊದಮೊದಲು ರೈತರು ಈ ಯಂತ್ರವನ್ನು ಉಪಯೋಗಿಸಲು ಉತ್ಸುಕತೆ ತೋರಲಿಲ್ಲ. ಈ ಯಂತ್ರದಿಂದ ಮೇವಿನ ಉಳಿತಾಯವಾಗುವದೆಂದು ಪ್ರತ್ಯಕ್ಷ ಕಂಡರೂ ಅದನ್ನು ಬಳಸಲು ಸ್ವಲ್ಲು ಶ್ರಮವಾಗುತ್ತಿದ್ದುದರಿಂದ ಸೋಮಾರಿಗಳಿಗೆ ಇದು ಹೇಗೆ ಸೇರಬೇಕು ? ಆದರೆ ಮೆಲ್ಲಮೆಲ್ಲನೆ ಈ ಯಂತ್ರಕ್ಕೆ ಬೇಡಿಕೆಗಳು ಬರಹತ್ತಿದವು. - ಈ ಸಮಯದಲ್ಲಿ ಲಕ್ಷ್ಮಣರಾಯರ ಮನಸ್ಸನ್ನು ಬೇರೆಡೆಗೆ ಎಳೆಯುವ ಘಟನೆಯೊಂದು ಸಂಭವಿಸಿತು, ಔಂಧದ ಶ್ರೀಮಂತ ಬಾಳಾಸಾಹೇಬರಿಂದ ಅಕಸ್ಮಿಕವಾಗಿ ಕೆಳಗಿನ ಓಲೆಯೊಂದು ಬಂದಿತು. “ಔಂಧದಲ್ಲಿ ಕಟ್ಟಲ್ಪಡುತ್ತಿರುವ ಯಮಾಯಿ ದೇವರ ಗುಡಿಯ ಕಳಸಕ್ಕೆ ಬೆಳ್ಳಿಯ ಕಲಾಯಿ ಮಾಡುವ ಕಾರ್ಯವನ್ನು ತಾವು ವಹಿಸಬಹುದೇ ? "ಎಂದು ವಿಚಾರಿಸಿದ್ದರು, ಲಕ್ಷಣರಾಯರು ವಿದ್ಯುತ್ತಿನಿಂದ ಕಲಾಯಿ ಮಾಡುವದನ್ನು
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೫
ಗೋಚರ