ಮಿ೦ಚಿನಬಳ್ಳಿ ಚಕಾರ ಶಬ್ದವನ್ನೂ ಕೂಡ ಆಡಲಿಲ್ಲ. ಕ್ಷಣ ಹೊತ್ತು ಮೂವರನ್ನು ದಿಟ್ಟಿಸಿ ನೋಡಿದರು ಮಾತ್ರ ಇದೇ ಅವರ ಪರೀಕ್ಷೆ, ನಂತರ ಗುತ್ತಿಗೆ ಸತ್ಯಕ್ಕೂ ೧೭೦೦೦ ರೂಪಾಯಿಯ ಚೆಕ್ಕಿಗೂ ಅಂಕಿತಹಾಕಿ, ಅವರಿಗೆ ಕೊಟ್ಟು ಆಪ್ಪಣೆಯನ್ನಿತ್ತರು. ಶಿಕ್ಷಣರಾಯರು ಕೂಡಲೇ ಉದ್ಯೋಗಕ್ಕೆ ಹತ್ತಿದರು, ರಹೀಮಶ". ಪೂರ ಸ್ಟೇಶನ್ನಿನಿಂದ ೧೨ ಮೈಲು ದೂರವಿರುವ ಔಂಧದಂಥ ಕಾಡುದಾರಿಯ ಸ್ಥಳಕ್ಕೆ ದೊಡ್ಡ ದೊಡ್ಡ ಮೊಲೆ, ಕಬ್ಬಿಣದ ಸಾಮಾನು, ಕಲ್ಲು, ಸುಣ್ಣ ಮೊದಲಾದವುಗಳನ್ನು ಸಾಗಿಸುವರು ಸುಲಭವೇ ? ಬಡಿಗ, ಉಪ್ಪಾರ, ಕಾರ, ವಡ್ಡರು ಇವರನ್ನೆಲ್ಲ ಕಲೆಹಾಕಿ ಮಂಟಪವನ್ನು ಹೇಗೆ ಸಿದ್ದಪಡಿಸಿದ ರೆಂಬುದನ್ನು ಬರೆಯಲು ಒಂದು ಪ್ರಕರ್ಣನೇ ಬೇಕು. ಈ ಕೆಲಸಕ್ಕಾಗಿ ಲಕ್ಷ್ಮಣರಾಯರು ಔಂಧದಲ್ಲಿ ಮೂರು ವರ್ಷ ನಿಲ್ಲಬೇಕಾಯಿತು. ೭೫' ಉದ್ಧ ೨೦' ಅಗಲದ ಈ ಭವ್ಯವಾದ ನು೦ಟಪವು ಔಂಧಕ್ಕೆ ಭೂಷಣವೂ ಆಕರ್ಷಕವೂ ಆಗಿದೆ, ದೊಡ್ಡ ದೊಡ್ಡ ಸಮಾರಂಭಗಳು, ಉತ್ಸವಗಳು, ರಾಜಕೂಟಗಳು ಎಲ್ಲವೂ ಈ ಮಂಟಪದಲ್ಲಿಯೇ ನಡೆಯಹತ್ತಿದವು. .ಈ ಕಾರ್ಯವು ಯಶಸ್ವಿಯಾಗಿ ಕೊನೆಗೊಂಡ ಬಗ್ಗೆ ಲಕ್ಷ್ಮಣರಾಯ:- ಗೆ ಮನಸ್ಸು ಬಹು ಸಮಾಧಾನಗೊಂಡಿತು, ಆದರೆ ಇದನ್ನು ನೋಡಲು LLಯ ಮಹಾರಾಜರು ಜೀವಂತವಿರಲ್ಲ. ಈ ಮಂಟಪದ ನೆವದಿಂದ ಬಾಳು ಸಾಹೇಬ ಹಾಗೂ ಲಕ್ಷ್ಮಣರಾಯರ ಗೆಳೆತನ, ವಿಶ್ವಾಸ, ಆತ್ಮೀಯತೆಗಳು ಬಹಳ ಗಾಢವಾಗಿ ಬೆಳೆದವು, ಲಕ್ಷ್ಮಣರಾಯರು ಕೈಕೊಂಡ ಮೊದಲನೆಯ ಗುತ್ತಿಗೆಯ ಕೆಲಸವಾದರೂ ಯೋಗ್ಯ ಲಾಭದಾಯಕವಾಯಿತು. ಅನರ ಭಾಸೀ ಯೋಜನೆಗೆ ಇದ್ದ ಹಣದ ಅವಶ್ಯಕತೆಯನ್ನು ಇದು ಕೆಲಮಟ್ಟಿಗೆ ಪೂರೈಸಿತು. ಔಧದಲ್ಲಿರುವಾಗ ಅಕ್ಷಣರಾಯರು ಪ್ರತಿದಿನ ಭಕ್ತಿಯಿಂದ ದಮಾಯಿಯು (ಶಕ್ತಿಯ ಒಂದು ರೂಪ) ದರ್ಶನ ತೆಗೆದುಕೊಳ್ಳುತ್ತಿದ್ದರು. ಅವರ ಭಕ್ತಿಗೆ ದೇವಿಯ ಪ್ರಸನ್ನಳಾಗಿ ಊರಿಗೆ ಮರಳುವಾಗ ಲಕ್ಷಣರಾಯ ವಿಗೆ ವರವನ್ನು ಕೊಟ್ಟಂತಾಯಿತು, ಬರಿಗೈಯಿಂದ ಬಂದ ಲಕ್ಷ್ಮಣರಾಯರು ಐಸಿರಿನಿಂದ ಕೂಡಿ ಬೆಳಗಾವಿಗೆ ಮರಳಿದರು.
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೭
ಗೋಚರ