ವಿಷಯಕ್ಕೆ ಹೋಗು

ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಬ್ಬಿಣ ರಂಟೆಯ ಜನನ - ಔಂಧದಿಂದ ಮರಳಿದ ಬಳಿಕ ಮೊದಲಿನಂತೆ ಸಾಯಕಲ್ಲಿನ ವ್ಯಾಪಾರ ದಲ್ಲಿ ಮಗ್ನರಾದರು, ಅಂಗಡಿಯ ಹಿಂಬದಿಯಲ್ಲಿಯೇ ಮೇವು ಕೊರೆಯುವ ಒಂದು ಚಿಕ್ಕ ಕಾರಖಾನೆಯು ಇದ್ದಿತು. ಕಿರ್ಲೋಸ್ಕರ ಒಂಧುಗಳ ವ್ಯಾಪಾರವು ಹೀಗೆ ಇಬ್ಬಗೆಯಾಗಿ ಸಾಗಿತ್ತು, ಆದರೆ ಕೇವಲ ವ್ಯಾಪಾರವಷ್ಟೇ ಅವರಿಗೆ ಸೇರಲಿಲ್ಲ. ಕಾರಖಾನೆದಾರರಾಗಲು ಅವರು ಬಯಸುತ್ತಿದರು. ಅವರು ಅನುಕೂಲ ಪರಿಸ್ಥಿತಿ ಒದಗಿದೊಡನೆಯೇ ನಾಯಕಲ್ಲಿನ ಉದ್ಯೋಗವನ್ನು ಬದಿಗಿರಿಸಿ, ಮೇವು ಕೊರೆಯುವ ಯಂತ್ರದ ಜೊತೆಗೆ ರೈತನಿಗೆ ಉಪಯುಕ್ತ ವಾಗುವ ಇನ್ನೊಂದು ಸಾಧನವನ್ನು ನಿಮ್ಮಿಸುವ ಕಾಠ್ಯಕ್ಕೆ ಕೈ ಹಾಕಬೇಕೆಂದು ಯೋಚಿಸಹತ್ತಿದರು. ಕಾಕತಾಲೀ ನ್ಯಾಯದಿಂದ ಬೆಳಗಾವಿಯ ಶ್ರೀ ನಾನಾ ದೇನಲರು ಅಂಗಡಿಯನ್ನು ಕೊಳ್ಳಲು ಮುಂದೆ ಬಂದರು. ೧೯೦೩ ರಲ್ಲಿ ೩೦೦೦ ರೂಪಾಯಿಗಳಿಗೆ ಸಾಯಕಲ್ಲಿನ ಅಂಗಡಿಯನ್ನು ಮಾರಿ ತಮ್ಮ, ಮುಂದಿನ ಕಾರ್ಯಕ್ಕೆ ಪ್ರವೃತ್ತರಾದರು. - ಭಾರತವು ಕೃಷಿಪ್ರಧಾನವಾದ ದೇಶ, ರೈತರಿಗೆ ಉಪಯುಕ್ತ ಹಾಗೂ ಲಾಭದಾಯಕವಾದ ಒಂದು ಸಾಧನವನ್ನು ಒದಗಿಸಿಕೊಟ್ಟರೆ, ಅದಕ್ಕೆ ಬೇಡಿ ಕೆಯು ತಾನಾಗಿಯೇ ಬರುವದೆಂದು ಲಕ್ಷ್ಮಣರಾಯರ ಎಣಿಕೆ, ಇಂತಹ ಯಾವ ವಸ್ತುವನ್ನು ನಿಮ್ಮಿಸಲು ಸಾಧ್ಯ ? ಎಂದು ದೀರ್ಘ ವಿಚಾರ ಮಾಡಿ ಕಬ್ಬಿಣದ ರಂಟೆಯನ್ನು ನಿಶ್ಮಿಸುವ ನಿಶ್ಚಯ ಮಾಡಿದರು. - “ಶ್ರೇಯಾಂಸಿ ಬಹು ವಿಸ್ಪ್ಯಾನಿ” ಎಂಬಂತೆ ಯಾವುದೇ ಕ್ಷೇತ್ರದಲ್ಲಿ ಯಶ ದೊರಕಿಸಲು ಅನೇಕ ಸಂಕಟಗಳನ್ನು ಎದುರಿಸಬೇಕಾಗುತ್ತದೆ. ಯಶದ ಉಗಮವು ಕೂಡಾ ಅವರ ಮನಸ್ಸಿನಲ್ಲಿ ಸ್ಪುರಿಸಿದ ಸೂಕ್ಷ್ಮ ಕಲ್ಪನೆಯಲ್ಲಿಯೇ ಇರುತ್ತದೆಂಬುದೂ ಅಷ್ಟೇ ಸತ್ಯ. ಈ ಕಲ್ಪನೆಯೇ ಯಶದ ಬೀಜವು, ವ್ಯಕ್ತಿ ಹಾಗೂ ಸಮಾಜದಲ್ಲಿ ಸುಧಾರಣೆಯಾಗಬೇಕೆಂದು ಅಪೇಕ್ಷಿಸುತ್ತಿದ್ದರೆ ಇಂತಹ .ನವ ಕಲ್ಪನೆಗಳಿಗೆ ಸಮಾಜದಲ್ಲಿ ಸ್ವಾಗತ ದೊರೆಯಬೇಕು, ತುಳಿದ.ಧಾರಿ