೪೦ ಮಿಂಚಿನಬಳ್ಳಿ ಯನ್ನೇ ತುಳಿಯಬೇಕೆಂಬ ಸಾಮಾಜಿಕ ಪ್ರವೃತ್ತಿಯು ನವಕಲ್ಪನೆಯ ತರುಣ ರನ್ನು ಎದೆಗುಂದಿಸುವದು, ಇದರಿಂದ ಸಮಾಜಕ್ಕೆ ಹಾನಿ, ಸ್ವತಂತ್ರ ವಿಚಾರ ಮಾಡಲು, ಹೊಸ ಕಲ್ಪನೆಗಳನ್ನು ಜೀವನದಲ್ಲಿ ತರಲು ನಾವು ಅಂಜುತ್ತಿರು ವದೇ ನಮ್ಮ ದೇಶವು ಹಿಂದುಳಿಯಲು ಕಾರಣ. ಕಬ್ಬಿಣ ರಂಟೆಯು ಲಕ್ಷ್ಮಣರಾಯರ ಹೊಸ ಕಲ್ಪನೆ, ಈ ಕಬ್ಬಿಣ ರಂಟೆ ಹೊರಡುವ ಮುನ್ನ ಕಟ್ಟಿಗೆಯ ಒಂಟಿಯೇ ನಮ್ಮ ರೈತನ ಒಕ್ಕಲತನದ ಮುಖ್ಯ ಸಾಧನ, ಅಷ್ಟೇಕೆ ಭೂಮಿಯಿಂದ ಜನ್ಮತಾಳಿದ ಜಗನ್ಮಾತೆಯಾದ ಜಾನಕಿಯ ಕಾಲಕ್ಕಿದ್ದ ನೇಗಿಲವೇ ಈಗಲೂ ನಡೆದು ಬಂದಿದೆ. ಈ ಭಾರ ವಾರ ನೇಗಿಲವನ್ನು ಹೊಡೆಯಲು ಬಲವುಳ್ಳ ಎತ್ತುಗಳೇ ಬೇಕು, ಹೋಲ ದಲ್ಲಿಯ ಕರಿಕೆ ಕಂಟಗಳೆಲ್ಲವೂ ಹೋಗಿ, ಹೊಲವು ಹಸನಾಗಬೇಕಾದರೆ ಉದ್ದ ಹಾಗೂ ಅಡ್ಡ ನೇಗಿಲು ಹೊಡೆಯಬೇಕಾಗುವದು, ಇದರಿಂದ ಒಕ್ಕಲಿಗನಿಗೂ ಕಷ್ಟ; ದನಗಳಿಗೂ ಶ್ರಮು, ಅಲ್ಲದೆ ಈ ರಂಟೆಗಳಾದರೂ ಸಾಕಷ್ಟು ಸಿಗುವ ನೆನ್ನಬೇಕೆ ? ಅದೂ ಇಲ್ಲ. ರೈತನಿಗೆ ರಂಟೆಯನ್ನು ಮಾಡಿಸಲು ಸಾಕು ಬೇಕಾಗುತ್ತದೆ. ಸರದೇಶಗಳಲ್ಲಿ ಸುಧಾರಿಸಿದ ಒಕ್ಕಲುತನಕ್ಕೆ ಉಪಯೋಗಿಸುತ್ತಿರುವ ನೇಗಿಲುಗಳ ಬಗ್ಗೆಯೂ ಭೂಸುಧಾರಣೆಯ ಬಗ್ಗೆಯೂ ಶಕ್ಯವಿದ್ದ ಎಲ್ಲ ಸಂಗತಿಗಳನ್ನು ರಾಯರು ಕಲೆಹಾಕಿದರು. ಈ ಸಮಯದಲ್ಲಿ ಸರಕಾರದವರು ವಿಲಾಯತಿಯಿಂದ ಕೆಲವು ಕಬ್ಬಿಣದ ರಂಟೆಗಳನ್ನು ತರಿಸಿ, ಅವು ಈ ದೇಶದಲ್ಲಿ ಎಷ್ಟರಮಟ್ಟಿಗೆ ಉಪಯೋಗ ಬೀಳುವವೆಂಬ ಬಗ್ಗೆ ಪ್ರಯೋಗ ನಡೆಸಿದ್ದರು. ಶ್ರೀ ಮಲ್ಲಾರ ಲಿಂಗೋ ಕುಲಕರ್ಣಿಯವರು ಈ ಖಾತೆಯ ವರಿಷ್ಟರಾಗಿದ್ದರು. `ಲಕ್ಷ್ಮಣರಾಯರನ್ನು ಎತ್ತಿ ಹಿಡಿಯುವವರಲ್ಲಿ ಅವರೂ ಒಬ್ಬರು, ಲಕ್ಷ್ಮಣ ರಾಯರು ಅವರೊಡನೆ ಸಾಕಷ್ಟು ಚರ್ಚಿಸಿ, ಯಾವ ಬಗೆಯ ರಂಟೆಯನ್ನು ನಿಮ್ಮಿಸಬೇಕೆಂಬುದನ್ನು ಗೊತ್ತುಪಡಿಸಿ, ಅಂತಹ ಒಂದು ಮಾದರಿಯ ರಂಟಿ ಯನ್ನು ವಿಲಾಯತಿಯಿಂದ ತರಿಸಿದರು. ಈ ರಂಟಿಯ ಕುಳ ಹಾಗೂ ಅದರ ಹಿಂಭಾಗಗಳು ಬೀಡಿನವು, ಉಳಿದ .ಭಾಗಗಳು ಕಬ್ಬಿಣದವು ಇದ್ದವು, ರಂಟೆಯನ್ನು ಮಾಡಲು ಬೀಡಿನ ಭಟ್ಟಿಯು ಆವಶ್ಯವಿದ್ದಿತ್ತು, ಅದನ್ನು ಮೊದಲು ಕಟ್ಟಬೇಕಾಗಿದ್ದಿತು. “ಸನ್ಯಾಸಿಯ - ಮದುವೆಗೆ ಚಂಡಿಕೆಯಿಂದ ಸಿದ್ದ ಮಾಡಬೇಕಲ್ಲವೇ ?” ಲಕ್ಷ್ಮಣರಾಯರು
ಪುಟ:ಕಿರ್ಲೋಸ್ಕರ ಲಕ್ಷ್ಮಣರಾಯರು.djvu/೫೯
ಗೋಚರ