ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ - 'ತಾಳಮದ್ದಳೆ'

( ಯಕ್ಷಗಾನವು ಮೂಲತಃ ನಮ್ಮ ದೇವಸ್ಥಾನಗಳಿಗೆ ಸಂಬದ್ಧವಾಗಿದ್ದ ಸಂಪ್ರದಾಯ ವೆಂಬುದನ್ನು ಗಮನಿಸಬೇಕು. 'ಆಟ, ತಾಳಮದ್ದಳೆ' ಎಂಬ ಅದರ ಎರಡು ರೂಪಗಳು ದೇವಸ್ಥಾನಗಳಲ್ಲಿ ಪೂಜಾವಿಧಿಯಾಗಿ ನಡೆಯುತ್ತಿದ್ದ ನಾಟ್ಯಸೇವೆ ಮತ್ತು ಸಂಗೀತ ಸೇವೆ ಗಳಿಗಾಗಿ ಸಲ್ಲುತ್ತಿದ್ದವು. ಆಟದ ಮೇಳಗಳೆಲ್ಲ ಒಂದೊಂದು ದೇವಸ್ಥಾನಗಳದ್ದೇ ಸೊತ್ತಾಗಿ ನಡೆದುಬಂದಿರುವುದೂ, 'ತಾಳಮದ್ದಳೆ ಸೇವೆ'ಗಾಗಿ ಉಂಬಳಿ ಉತಾರಗಳನ್ನು ಕೊಟ್ಟಿದ್ದ ಹಿಂದಿನ ದಾಖಲೆಗಳು ದೇವಸ್ಥಾನಗಳಲ್ಲಿ ಕಂಡುಬರುವುದೂ, ಯಕ್ಷಗಾನ ಕವಿಗಳು ತಮ್ಮ ಕೃತಿಗಳನ್ನು ಅಂಥ ದೇವಸ್ಥಾನಗಳ ದೇವರ ಅಂಕಿತದಲ್ಲಿ ರಚಿಸಿರು ವುದೂ ಇದಕ್ಕೆ ನಿದರ್ಶನಗಳಾಗಿವೆ.

ನಿತ್ಯಪೂಜೆಯಲ್ಲಿ ಈ ಸೇವೆಗಳು ಸಂಕ್ಷಿಪ್ತವಾಗಿಯೂ ಉತ್ಸವಾದಿಗಳು ನಡೆಯುವ ವಿಶೇಷದಿನಗಳಲ್ಲಿ ಪೂರ್ಣರೂಪದಿಂದಲೂ ನಡೆಯುತ್ತಿದ್ದವೆಂದು ನ್ಯಾಯವಾಗಿ ಊಹಿಸ ಬಹುದು. ಆದುದರಿಂದಲೇ ರಾತ್ರಿ ಬೆಳಗನಕ ನಡೆಯುವ ಆಟವು 'ಬಯಲಾಟ'ವೆಂದೂ, 'ದೊಡ್ಡಾಟ'ವೆಂದೂ, 'ರಂಗಸ್ಥಳದಾಟ'ವೆಂದೂ, 'ಪ್ರಸಂಗದಾಟ'ವೆಂದೂ ಕರೆಯಲ್ಪಡುವು ದಾಗಿದೆ. ನಿತ್ಯಸೇವೆಯದು ಸಣ್ಣಾಟವಾಗಿರುವುದು ಸಹಜ. ಪ್ರಾಯಶಃ ಸ್ತುತಿಪದ್ಯ ಗಳಿಗಷ್ಟೇ ಕುಣಿಯುವುದಾಗಿ ಅದು ಪ್ರಸಂಗದಾಟವಲ್ಲ, ಹಾಗೂ ದೇವಸ್ಥಾನದ ಒಳಗೇ ನಡೆಯುವುದಾಗಿ ರಂಗಸ್ಥಳದಾಟವಲ್ಲವೆಂಬುದೂ ಸರಿ. ಉತ್ಸವದಿನಗಳಲ್ಲಿ ದೇವಸ್ಥಾನದ ಹೊರಬಯಲಲ್ಲಿ ರಂಗಸ್ಥಳ ಹಾಕಿ ಇಡೀ ರಾತ್ರಿ ಆಡುವುದಾದ್ದರಿಂದ 'ಬಯಲಾಟ'ವೆಂದು ಕರೆಯಲ್ಪಟ್ಟಿತು.

ದೇವಸ್ಥಾನಗಳಲ್ಲಿ ಈ ನಿತ್ಯಸೇವೆ ಕ್ರಮೇಣ ಲುಪ್ತವಾಗಿರುವುದಾದರೂ ಮೇಳದಾಟ ಗಳಲ್ಲಿ ಆ ಆಚಾರ ಉಳಿದಿರುವುದನ್ನು ಇಂದೂ ಕಾಣಬಹುದು. ಆಟ ಸುರುವಾಗುವುದಕ್ಕೆ ಮೊದಲಾಗಿ 'ಚೌಕಿ'ಯಲ್ಲಿ ಮೇಳದ ದೇವರನ್ನು, ಅದು ಆಯಾ ದೇವಸ್ಥಾನಗಳ ದೇವರೇ, ಪೂಜೆಗೆ ಇಡುವುದೂ, ವೇಷಗಳು ರಂಗಸ್ಥಳಕ್ಕೆ ಕಾಲಿಡುವ ಮೊದಲು ಆ ದೇವರಿಗೆ ಮುಖಮಾಡಿ (ರಂಗಸ್ಥಳಕ್ಕೆ ಬೆನ್ನು ಹಾಕಿ) ಸ್ವಲ್ಪ ಹೊತ್ತು ನಾಟ್ಯ ಮಾಡುವುದೂ ಸಂಪ್ರದಾಯವಾಗಿ ಬಂದಿದೆ. ಇದು ನಿತ್ಯಸೇವೆಯ ಅಂಶ. ಆಟ ಮುಗಿದ ಮೇಲೆ ಆ ದೇವರಿಗೆ ಮಂಗಳಾರತಿ ಮಾಡಿ ಮೇಳದವರೆಲ್ಲ ಪ್ರಸಾದ ಸ್ವೀಕರಿಸುವುದೂ ನಿಯಮವಾಗಿ ನಡೆದುಬಂದಿದೆ. ಇದರಂತೆ 'ತಾಳಮದ್ದಳೆ'ಯೂ ನಿತ್ಯಪೂಜಾವಸರದಲ್ಲಿ ಕೆಲವೇ ಪದ್ಯ ಗಳನ್ನು ಹಾಡಿ ಮುಗಿಸುವ ಸಂಕ್ಷಿಪ್ತ ಗೀತಾರಾಧನೆಯಾಗಿಯೂ ಹಬ್ಬಹರಿದಿನ, ಶಿವರಾತ್ರಿ ಜಾಗರಣೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಇಡೀ ರಾತ್ರಿಯ 'ಕಾಲಕ್ಷೇಪ'ವಾಗಿಯೂ ನಡೆಯುತ್ತಿದ್ದಂತೆ ತಿಳಿಯಬಹುದು. 'ತಾಳಮದ್ದಳೆ' ಎಂಬ ಹೆಸರು ಪ್ರಾಯಶಃ ನಿತ್ಯ ಸೇವೆಯದೇ ಸಾಮಾನ್ಯವಾಗಿ ರೂಢಿಯಲ್ಲಿ ಬಂದಿದೆ. ಆದರೆ ಇಡೀ ರಾತ್ರಿಯಲ್ಲಿ ನಡೆಯುವ 'ತಾಳಮದ್ದಳೆ'ಯನ್ನು ವಿಶೇಷವಾಗಿ, 'ಕಾಲಕ್ಷೇಪ'ವೆಂದೂ, ಪ್ರಸಂಗ ಹೇಳುವುದೆಂದೂ, 'ಸಭಾ ಯಕ್ಷಗಾನ'ವೆಂದೂ ಕರೆಯುವುದಿತ್ತು; ಈಗಲೂ ಇದೆ. ದೇವಸ್ಥಾನಗಳ ಆ ನಿತ್ಯಸೇವೆಯು ತಾಳ ಮತ್ತು ಮದ್ದಳೆ ಎಂಬ ಎರಡೇ ವಾದ್ಯಗಳಿಂದ