ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೨ | ಕುಕ್ಕಿಲ ಸಂಪುಟ
ಗಳುಂಟು. ಅದಂತೂ ತೆಲುಗಿನಿಂದಲೇ ಬಂದದ್ದೆಂಬುದರಲ್ಲಿ ಸಂದೇಹವೇ ಇಲ್ಲ. ತೆಲುಗು ಯಕ್ಷಗಾನಗಳಲ್ಲಿ ಇವು ಸರ್ವಸಾಮಾನ್ಯ.
ಎಲ್ಲದಕ್ಕೂ ಮುಖ್ಯವಾಗಿ, ನಮ್ಮ ಕನ್ನಡ ಯಕ್ಷಗಾನಗಳ ಆರಂಭದಲ್ಲಿ ಹಾಗೂ ಸಭಾಲಕ್ಷಣದ ಮಂಗಲಾಚಾರದಲ್ಲಿ ಕಾಣುವ ಜಯಜಯ' ಎಂದು ಆರಂಭವಾಗುವ ಜಂಪೆತಾಳದ ಸ್ತುತಿಪದ್ಯಗಳೂ (ಜಯ ಗೋಪಿಕಾ ಕಂದ ಜಯ ಸಾಧು ಗುಣವೃಂದ ಎಂಬಂತಿರುವ) ಮತ್ತು ಪ್ರತಿಪಾದದ ಆರಂಭದಲ್ಲಿ ಮತ್ತು ಕೊನೆಯಲ್ಲಿ ಶರಣು ಶರಣು' ಎಂದು ಬರುವ (ಶರಣು ತಿರುವಗ್ರಶಾಲಿವಾಹಿನಿ ಶರಣು ಪನ್ನಗ ಭೂಷಿಣಿ ಎಂಬಂತಿರುವ) ತ್ರಿವುಡೆ ತಾಳದ ಪದ್ಯಗಳೂ ಆಂಧ್ರದ ಅನುಕರಣೆ ಎಂಬುದರಲ್ಲಿ ಸಂದೇಹವಿಲ್ಲ. ಏಕೆಂದರೆ, ಆ ವಿಧದ ಮಂಗಲಾಚಾರ ಪದ್ಯಗಳ ಸಂಪ್ರದಾಯಕ್ಕೆ ಮೂಲಕರ್ತೃ ಹಿಂದೆ ಹೇಳಿದ ತಿರುಪತಿ ಅಣ್ಣಮಾಚಾರ್ಯರಾಗಿರುತ್ತಾರೆ. ಆಂಧ್ರ ಯಕ್ಷಗಾನಗಳದಲ್ಲಾದರೂ ಅವು ಅಣ್ಣಮಾಚಾರ್ಯರ ರಚನೆಗಳಿ೦ದಲೇ ಬಂದವು. ಇದಲ್ಲದೆ ನಮ್ಮ ಯಕ್ಷಗಾನದ ಪೂರ್ವರಂಗದಲ್ಲಿ (ಸಭಾಲಕ್ಷಣ) ತಪ್ಪದೆ ಹಾಡಲ್ಪಡುವ ವಿಶ್ಲೇಶ್ವರ ಸ್ತುತಿಪದ್ಯ
ಹರಿಹರವಿಧಿನುತ ಅಮರ ಪೂಜಿತುರೇ ವಾಮನ ರೂಪ |
ಏಕದಂತ ಚತುರಾದ್ಭುತ ಬಲ ಲಂಬೋದರುರೇ |
ವಾರಣ ಕಾರಣ ನಾಗಾಭರಣ ಕಾಮಿತ ಫಲದಾಯಕುರೇ |
ಎಂಬ ಪದ್ಯವೂ ಅದೇ ಅಣ್ಣಮಾಚಾರ್ಯರಿಂದ ರಚಿಸಲ್ಪಟ್ಟದ್ದೆಂದು ಆಂಧ್ರದಲ್ಲಿ ಪ್ರತೀತಿಯಿದೆ. ಹೇಗಿದ್ದರೂ ಅದರ ಶಬ್ದಸ್ವರೂಪಗಳೇ ಅದು ತೆಲುಗು ಭಾಷೆಯದೆಂಬ ಸ್ಪಷ್ಟತೆ ತೋರುತ್ತಿವೆ.
ಕೇರಳದ ಕಥಕಳಿಯ ಆರಂಭದ 'ತೋಡಯಮಂಗಳ'ದಲ್ಲಿಯೂ ಈ ಪದ್ಯವನ್ನು ತಪ್ಪದೆ ಹಾಡಬೇಕೆಂಬ ನಿಯಮವಿದೆ. ಆದ್ದರಿಂದ ಕೇರಳದ ಕಥಕಳಿಯೂ ಆಂಧ್ರದ ಋಣವನ್ನು ಹೊತ್ತಿದೆ ಎಂದು ಹೇಳಬೇಕಾಗುವುದು. ಮಾತ್ರವಲ್ಲ ಹಿಂದೆ ಹೇಳಿದಂತೆ ಆಂಧ್ರದ ದ್ವಿಪದಿ ಬಂಧವು ಕಥಕಳಿ ಪ್ರಬಂಧಗಳಲ್ಲಿ ಸೇರಿಕೊಂಡದ್ದನ್ನು ಕೊಟ್ಟಾರಕರನ ರಾಮನಾಟ್ಟಂ ಪ್ರಬಂಧಗಳಲ್ಲಿಯೇ ಕಾಣಬಹುದು. ಕೆಲವು ಜಂಪೆ ತ್ರಿವುಡೆ ತಾಳದ ಪದ್ಯರೂಪಗಳನ್ನು ಆಂಧ್ರದಲ್ಲಿ ಹುಟ್ಟಿದುವನ್ನು ಸಹಾ ಅವುಗಳಲ್ಲಿ ಕಾಣಬಹುದು.
ಹೀಗೆ ಪ್ರಬಂಧ ರಚನೆಯಲ್ಲಿ ಆಂಧ್ರದ ಋಣ ಕಂಡುಬರುವಾಗ ಪ್ರಯೋಗದಲ್ಲಿ ಹೇಗೆ ಎಂದು ವಿಚಾರಿಸಬೇಕಾಗುತ್ತದೆ. ಕಥಕಳಿ ಪ್ರಯೋಗದಲ್ಲಿ ಆಂಧ್ರ ಮೂಲದ ಚಿಹ್ನೆಗಳು ಕಂಡುಬರುವುದಿಲ್ಲ. ಹಾಡುವಿಕೆಯಾಗಲಿ, ಕುಣಿತವಾಗಲಿ, ಹಿಮ್ಮೇಳವೇ ಆಗಲಿ, ಆಂಧ್ರ ಯಕ್ಷಗಾನವನ್ನು ಹೊಂದವು, ಹೋಲವು. ಕಥಕಳಿಯ ಪ್ರಯೋಗ ಸಂಪ್ರದಾಯವು ತಮಿಳುನಾಡು ಕೇರಳಗಳಲ್ಲಿ ಮೊದಲಿಂದಲೂ ಮೊದಲಿಂದಲೂ ನಡೆಯುತ್ತಿದ್ದ 'ಚೋಕ್ಯಾ‌ರ್ ಕೂತ್ತು', 'ಕೂಡಿಯಾಟ್ಟಂ' ಎಂಬ ಶಾಸ್ತ್ರೀಯ ಸಂಸ್ಕೃತ ನಾಟಕ ಪ್ರಯೋಗ ಗಳ ಆನುವಂಶಿಕವನ್ನು ಪಡೆದುಬಂದಿರುವಂಥದ್ದು, ಅದು ಸಹಜ. ಅದರಿಂದಲೇ ಕಥಕಳಿಯು ಶಾಸ್ತ್ರೀಯ ಕಲೆಯೆಂದು ಪರಿಗಣಿಸಲ್ಪಟ್ಟಿದೆಯೆಂದು ತಿಳಿಯಬಹುದು. ಮೊದಲು 'ರಾಮನಾಟ'ವಾಗಿದ್ದು ಅನಂತರ 'ಕಥಕಳಿ' ನಾಮಕರಣದೊಡನೆ ಅದು ಮೂಕ ನಾಟ್ಯವಾಗಿ ಪರಿಣಮಿಸುವುದರೊಂದಿಗೆ ನಾಟ್ಯಶಾಸ್ತ್ರದಲ್ಲಿ ಲಕ್ಷಣಿಸಿದ 'ಪದಾರ್ಥಾಭಿನಯ'