ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಆಂಧ್ರ ಯಕ್ಷಗಾನ - ತುಲನಾತ್ಮಕ ವಿವೇಚನೆ / ೧೩೩

ಹಾಗೂ'ಚಿತ್ರಾಭಿನಯ'ವೆಂಬಂಥಾ ಹಸ್ತಮುದ್ರಿಕೆಗಳ ಸಾಂಕೇತಿಕಾಭಿನಯವನ್ನಳ ವಡಿಸಿಕೊಂಡು ವಿಶೇಷ ಸಂಸ್ಕಾರವನ್ನು ಹೊಂದಿದೆ.
ತಮಿಳರ 'ತೆರುಕ್ಕೂತ್ತಿ'ನ (ತೆರು = ಬಯಲು ಅಥವಾ ಬೀದಿ, ಕೂತ್ತು = ಆಟ) ವೇಷಭೂಷಣ ರಂಗ ಸಂಪ್ರದಾಯಾದಿ ವಿಧಾನಗಳೂ ಅದೇ ಕೂಡಿಯಾಟ್ಟದ ಮರ್ಯಾದೆ ಯಲ್ಲಿ ಉಳಿದುಬಂದಿವೆಯನ್ನಬಹುದು. ಶಾಸ್ತ್ರೀಯ ಆನುವಂಶಿಕ ಗುಣಗಳು ಅದರಲ್ಲಿಯೂ ಸಾಕಷ್ಟು ಕಂಡುಬರುತ್ತವೆ. ಪ್ರಾದೇಶಿಕ ನಾಗರಿಕ ಸುಧಾರಣೆಗಳಿಗೆ ಒಳಪಡದೆ ಇನ್ನೂ ಹಳ್ಳಿಯ ಜನರ ಕೈಯಲ್ಲೇ ಉಳಿದಿದ್ದು, ಪುರಾತನ ಸಂಪ್ರದಾಯವನ್ನು ಅದು ಸಾಕಷ್ಟು ಉಳಿಸಿಕೊಂಡು ಬಂದಿದೆ. ಆಂಧ್ರ ಸಂಪ್ರದಾಯಕ್ಕೂ, ಅದಕ್ಕೂ ಹೋಲಿಕೆ ಯಿರುವುದು ಕಡಿಮೆ.
(ಕನ್ನಡ ಬಯಲಾಟದ ಮಟ್ಟಿಗೆ ಹೋಲಿಸಿ ನೋಡುವುದಾದರೆ, ಇದರಲ್ಲಿರುವ ತೆಂಕ ಬಡಗ, ಮೂಡ ಎಂಬ ಮೂರು ಪ್ರಾದೇಶಿಕ ಭಿನ್ನತ್ವಗಳನ್ನು ಗಮನಿಸಬೇಕಾಗುತ್ತದೆ. ತೆಂಕಮಟ್ಟು ಎಂಬ ನಮ್ಮ ಪ್ರಾಂತದ, ಎಂದರೆ ಕುಂಬಳೆ ಮೂಲದ ಬಯಲಾಟ ಸಂಪ್ರದಾಯವು ಹೆಚ್ಚಿನ ಮಟ್ಟಿಗೆ ಕೇರಳ ಕಥಕಳಿ (ರಾಮನಾಟ್ಟಂ)ಯನ್ನು ಹೋಲು ವಂಥದ್ದೆಂಬುದು ಸ್ಪಷ್ಟವೇ ಇದೆ. (ವೇಷಭೂಷಣ, ಬಣ್ಣದ ವೇಷ, ಚುಟ್ಟಿ, ಜಾಗಟೆ, ಕೇಶಭಾರ ತಟ್ಟಿ - ಬಣ್ಣದ ವೇಷದ ಕಿರೀಟ ಚೆಂಡೆ ಮೊದಲಾದುವುಗಳಲ್ಲಿ ಕಥಕಳಿಯ ಅನುಕರಣೆ ಎದ್ದು ಕಾಣುತ್ತದೆ. ಆದ್ದರಿಂದಲೇ ಅದಕ್ಕೆ 'ತೆಂಕಮಟ್ಟು' ಎಂಬ ಹೆಸರಾಗಿರು ವುದು ಸಹಜವೇ ಸರಿ. ನಮಗೆ 'ತೆಂಕ' ಎಂದರೆ ಕೇರಳ ತಾನೆ.)
ಇನ್ನು ಮೂಡಲಪಾಯವೆಂಬ ಸಂಪ್ರದಾಯವಾದರೆ, ನಮಗೆ ಮೂಡಕ್ಕಿರುವ ತಮಿಳುನಾಡಿನ ತೆರುಕ್ಕೂತ್ತನ್ನೇ ಬಹಳ ಮಟ್ಟಿಗೆ ಹೋಲುತ್ತಿರುವುದರಿಂದ ಅದಕ್ಕೂ ಅನ್ವರ್ಥವಾಗಿಯೇ 'ಮೂಡಲಪಾಯ'ವೆಂಬ ಹೆಸರು ಬಂದಿರುವುದನ್ನಬೇಕು.
ಇನ್ನುಳಿದುದು 'ಬಡಗಮಟ್ಟು' ಎಂಬುದು (ಈಗ ಬಟಗುತಿಟ್ಟು, ತೆಂಕುತಿಟ್ಟು ಎನ್ನುತ್ತಾರೆ. ಆದರೆ ಮೊದಲಿಗೆ ಬಡಗಮಟ್ಟು, ತೆಂಕಮಟ್ಟು ಎಂದೇ ಈ ಸಂಪ್ರದಾಯ ಗಳಿಗೆ ಹೆಸರು ಇದ್ದುದು. ರೂಢಿಯಲ್ಲಿಯೂ ಹಾಗೆಯೇ ಕರೆಯಲಾಗುತ್ತಿತ್ತು. 'ತಿಟ್ಟು' ಎಂಬುದು ದೇಶವಾಚಕ, ದೇಶವಾಚಕ ಎಂಬ ಅಭಿಪ್ರಾಯದಲ್ಲಿ ಮಟ್ಟನ್ನು ತಿಟ್ಟು ಎಂದು ಈಗ ಕರೆಯುವುದಾಗಿದೆ. 'ಮಟ್ಟು' ಎಂದರೆ ರೀತಿ, ಕ್ರಮ ಅಥವಾ ಸಂಪ್ರದಾಯ. ಆ ಹೆಸರು ಬಿದ್ದಿರುವುದೂ ಸಂಪ್ರದಾಯ ಭೇದ ಎಂಬ ಅರ್ಥದಲ್ಲಿಯೇ, ತೆಂಕಮಟ್ಟು ತೆಂಕ ಸಂಪ್ರದಾಯ, ಎಂದರೆ ಕೇರಳದ ಸಂಪ್ರದಾಯ, ಉಡುಪಿ ಮಧ್ವ ಸಿದ್ಧಾಂತ ಮುದ್ರಣಾಲಯದವರು ಮುದ್ರಿಸಿದ ಅನೇಕ ಯಕ್ಷಗಾನ ಕೃತಿಗಳಲ್ಲಿ 'ಕೃಷ್ಣಾರ್ಜುನ ಕಾಳಗ-ಬಡಗಮಟ್ಟು, ತೆಂಕಮಟ್ಟು, 'ಕರ್ಣಪರ್ವ-ತೆಂಕಮಟ್ಟು, ಬಡಗಮಟ್ಟು' ಎಂದೇ ಪ್ರತ್ಯೇಕ ಕೃತಿಗಳನ್ನು ಕುರಿತಾಗಿ ಹೆಸರಿಸಿದ್ದಿದೆ.) ಬಡಗಮಟ್ಟು ಎಂದರೆ ಆಂಧ್ರ ಸಂಪ್ರದಾಯ. ಆಂಧ್ರ ದೇಶಕ್ಕೆ 'ಬಡಗರಾಜ್ಯ'ವೆಂದೂ, ತೆಲುಗರಿಗೆ 'ಬಡಗ'ರೆಂದೂ ಕರೆಯುವುದು ನಮ್ಮಲ್ಲಿಯೂ ಕೇರಳ ತಮಿಳುನಾಡುಗಳಲ್ಲಿಯೂ ವ್ಯವಹಾರದಲ್ಲಿರು ವಂಥಾದ್ದೆ. ವೇಷಭೂಷಣ, ಕುಣಿತ, ರಂಗಸ್ಥಳ ಸಂಪ್ರದಾಯ, ಮಂಗಲಾಚಾರ ಮೊದಲಾದುವುಗಳಲ್ಲಿ ಬಡಗಮಟ್ಟಿನ ಬಯಲಾಟವು ಆಂಧ್ರದ್ದನ್ನು ಬಹಳ ಮಟ್ಟಿಗೆ ಹೋಲುತ್ತದೆ. ಪುರುಷ ವೇಷಗಳು ಹೆಚ್ಚಾಗಿ ತಲೆಗೆ ಕಿರೀಟದ ಬದಲು ಅಶ್ವತ್ಥ ಎಲೆಯಾಕಾರದ ಮುಂಡಾಸು ಅಥವಾ ಪಕಡಿ ಸುತ್ತುವುದು, ಕಚ್ಚೆಹಾಕಿ ಲುಂಗಿ ಉಡುವುದು, ರಾಜವೇಷಗಳು ಮುಖಕ್ಕೆ ಬಣ್ಣವಿಲ್ಲದೆ ಬಿಳಿ ಪೌಡರು ಮಾತ್ರ