ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ/೧೪೯

ನಿಮ್ಮ ಮುಂದಿಟ್ಟಿರುವ ಈ ಹಳೆಯ ಓಲೆ ಪ್ರತಿಯಲ್ಲಿರುವ ಆ ಪದ್ಯವನ್ನು ನೋಡಿ ಸಮಾಧಾನ ತಂದುಕೊಳ್ಳಬಹುದು. ಇದರಲ್ಲಿ 'ಈ ಪಾರ್ವತೀ ನಂದನಂ' ಎಂದು ಸುಸ್ಪಷ್ಟವಾಗಿದೆ.

ಇನೀಗ ಪ್ರತ್ಯಕ್ಷ ಉದಾಹರಣೆಗಾಗಿ ಮಲೆಯಾಳ 'ರಾಮನಾಟ' 'ಮತ್ತು ಪಾರ್ತಿಸುಬ್ಬನ ರಾಮಾಯಣ ಪ್ರಬಂಧಗಳ ಕೆಲವು ಪದ್ಯಗಳನ್ನು ಪ್ರತ್ಯನಂತರಾನುಕ್ರಮ ದಲ್ಲಿ ಓದಿ ಹೇಳುತ್ತೇನೆ :

ಕೊಟ್ಟಾರಕರನ ರಾಮಾಯಣವು ಪುತ್ರಕಾಮೇಷ್ಟಿ, ಸೀತಾಸ್ವಯಂವರಂ, ವಿಚ್ಛಿನ್ನಾಭಿ ಷೇಕಂ, ಖರವಧಂ, ವಾಲಿವಧಂ, ತೋರಣಯುದ್ಧಂ, ಸೇತುಬಂಧಂ, ಯುದ್ಧಂ ಎಂಬ ಎಂಟು ಸಂಧಿಗಳಲ್ಲಿದೆ. ಸುಬ್ಬನ ರಾಮಾಯಣವೂ ಪುತ್ರಕಾಮೇಷ್ಟಿ, ಸೀತಾ ಸ್ವಯಂವರ, ಪಟ್ಟಾಭಿಷೇಕ, ಪಂಚವಟಿ- ವಾಲಿಸಂಹಾರ, ಚೂಡಾಮಣಿ, ಸೇತುಬಂಧ, ಅಂಗದ ಸಂಧಾನ, ಕುಂಭಕರ್ಣಾದಿ ಕಾಳಗ ಎಂಬ ಎಂಟು ಸಂಧಿಗಳಲ್ಲಿದೆ. ಉಡುಪಿ ಪ್ರೆಸ್ಸಿನಲ್ಲಿಯೆ ಅಚ್ಚಾಗಿರುವ ಕಣ್ವಪುರ ಕೃಷ್ಣನ ಅಂಕಿತವೂ ಇರುವ ಪಾರ್ತಿಸುಬ್ಬನ ಪುತ್ರಕಾಮೇಷ್ಟಿ- ಸೀತಾ ಸ್ವಯಂವರದ ಪ್ರತಿಯನ್ನು ಶ್ರೀ ಕಾರಂತರು ಏಕೆ ಹೆಸರೆತ್ತದ ಬಿಟ್ಟರೆಂದು ಅರ್ಥವಾಗುವುದಿಲ್ಲ.

ಸೂಚನೆ : ಕೆಳಗೆ ಉದಾಹರಿಸುವ ಮಲೆಯಾಳ ಮತ್ತು ಕನ್ನಡ ಪದ್ಯಗಳ ಆಯಾ ಸಂಖ್ಯೆಯ ಚರಣಗಳನ್ನು ಒಂದೊಂದನ್ನೇ ತುಲನೆ ಮಾಡಿ ನೋಡಿರಿ-

ಪುತ್ರಕಾಮೇಷ್ಟಿಯ ಕಥಾರಂಭದ ಮೊದಲ ಪದ್ಯ, ಮಕ್ಕಳಿಲ್ಲದೆ ದುಃಖದಿಂದಿದ್ದ ದಶರಥನಿಗೆ ವಸಿಷ್ಠ ಮುನಿಯು ಯಜ್ಞವನ್ನು ಮಾಡೆಂದು ಉಪದೇಶಿಸುವುದು.

ಝಂಪ

ಮುನಿವರತ: ಪೋನಿಧೇ | ಮಹಿತಚರಿ |ತ||ಪಲ್ಲ||
ಸರಸಿಜ ಭ | ವಾತ್ಮಜ | ಮದ್ದುರೋ | ಸಾದರಂ|
ವಿರವಿಲಡಿ | ಯನುಡೆ | ವಾಕ್ಕುಗಳ್ | ನೀ ಕೇಳ್ಕ ||೧||
ವದ ಮಮ ಮ | ಹೀಪತೇ | ನಿನ್ನ ನೋ | ರಥಮಯೇ |
ತ್ರಿದಶವರ | ಸಮವೀರ್ಯ | ದಶರಥ ಮ|ಹಾತ್ಮನ್||೨||
ಪುತ್ರರಿ | ಲಾಯ್ಕಯಾ | ಲತ್ತಲ್ ಮಮ | ಮಾನಸೇ |
ಎತ್ತು ನ್ನ| ರಿಂಞಿಞ|ನೋರ್ತನೀ | ವಣ್ಣಂ ||೩||
ಅಶ್ವಮೇ | ಧಂಕೊಂಡು ದೇವರ್ಕ | ಆ ಇನಿಕಾನ್ |
ನಿಶ್ಚಯಂ | ಪ್ರೀತರಾಯ್ | ಚೆಯ್ಪಿಡೆಣ| ಮಲ್ಲೊ ||೪||
ಕರುದಿನೇನ್ | ಕಾರ್ಯಮಿದಿ | ಧರಣಿಪಶಿ | ಖಾಮಣೇ ।
ವಿರವಿನೊಡು | ಕೊಪ್ಪು ಕಳುಂ ಕೂಡಿಡುಕ | ವೀರ ||೫||
ಮು೦ಚತುರ | ಗಂ ಪ್ರಭೋ | ದೀಕ್ಷಿಕ್ಕು | ಸತ್ವರಂ|
ಚಂಚಲಾ | ಕ್ಷಿಕಳೋಡು | ಕೂಡೆ ಅಧು1 ನಾ ||೬||