ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಧ್ಯಕ್ಷ ಭಾಷಣ / ೧೬೧

ನೂರೆಯಲೆನ್ನಳವಲ್ಲ ಹರನೊಬ್ಬ ಬಲ್ಲ ||
ಸುಜನರ ತಿರುಗಾಡಗೊಡರು | - ದೈತ್ಯ |
ಕುಜನರೆಸಗುವಂಥ ತೊಡರು ||
ಯಜನ ಕರ್ಮಗಳೆಲ್ಲ ವನದ ಪಾಲಾಯಿತು |
ನಿಜ ವೇದ ಮತಗಳು ತ್ಯಜವಾಯಿತಯ್ಯ ||
ಪುಂಡುಪೋಕರ ಸಂಚಾರಗಳ | -ಗಂಡ |
ಹಂಡ್ಯರೊಳಿಕ್ಕುವರ್ಜಗಳ ||
ಉಂಡಮನೆಗೆ ಎರಡೆಣಿಸುವರ್ದಣಿಸುವರ್ |
ಕೊಂಡೆಯವರ ಚಾಳಿ ಘನವಾಯಿತಯ್ಯ ||
ಮರುತಾನಲಾದಿತ್ಯರ್ಗಳಿಗೆ | -ತೊಡರ್ |
ಬರುತಿದೆ ಸಂಚಾರದೊಳಗೆ ||
ಪರರ ದ್ರವ್ಯವ ಅಪಹರಿಸುವರರಸುವರ್ |
ಪರವಧುಗಳ ಗೋಷ್ಠಿ ಸ್ಥಿರವಾಯಿತಯ್ಯ ||
ಧರ್ಮವು ಖಿಲವಾಯಿತಯ್ಯ 1 - ಅವ
ಧರ್ಮ ಶಾಶ್ವತವಾಯಿತಯ್ಯ ||
ನಿರ್ಮಲಾತ್ಮಕ ನಿರಂಜನನ ಪೂಜಿಸದ ದು|
ಷ್ಕರ್ಮಿಗಳನು ಹೊತ್ತು ದಣಿದ ನಾ ಬೇಸತ್ತು ||
ತಂದೆ ಮಕ್ಕಳ ನಂಬಲಾರ ] -ಬಂಧು |
ಬಾಂಧವರೊಳು ಬದ್ಧ ವೈರ ||
ಒಂದ ಕೊಡ್ಕೊಂಭತ್ತ ಕೊಂಬರನ್ಯಾಯದ |
ಬಂದಿಕಾರರ ಕಾಟ ದಿನನಿತ್ಯ ಕೊಂದಾಟ ||
ಅಧ್ಯಕ್ಷ ಭಾಷಣ | ೧೬೧ ಭೂದೇವಿಯ ಕಷ್ಟಕ್ಕೆ ಮರುಗಿದ ಬ್ರಹ್ಮನು ದೇವತೆಗಳೊಡನೆ ಹೋಗಿ ಶ್ರೀಮನ್ನಾರಾಯಣನಿಗೆ ದೂರಲು ಮಹಾವಿಷ್ಣುವು ತಾನು ದೇವಕಿಯ ಗರ್ಭದಲ್ಲಿ ಜನಿಸಿ ದುಷ್ಟರನ್ನು ಸಂಹರಿಸುವುದಾಗಿ ಅಭಯವಿತ್ತು ಬ್ರಹ್ಮಾದಿಗಳನ್ನು ಸಂತೈಸಿ ಕಳುಹಿಸುತ್ತಾನೆ.
ಅತ್ತ ಮಥುರೆಯಲ್ಲಿ ವಸುದೇವ ದೇವಕಿಯರಿಗೆ ಸಂಭ್ರಮದ ವಿವಾಹವಾಗುತ್ತದೆ. ಬಳುವಳಿ ಸಮೇತ ನವವಧೂವರರನ್ನು ಕಳುಹಿಸಿಕೊಡಲು ರಥವೇರಿ ಬಂದ ಕಂಸನು ತಂಗಿಯ ಎಂಟನೆಯ ಗರ್ಭದಲ್ಲಿ ಪರಮಾತ್ಮನು ಅವತರಿಸಿ ತನ್ನನ್ನು (ಕಂಸನನ್ನು) ಕೊಲ್ಲುವನೆಂಬ 'ಮರಣದೊಸಗೆಯ ಗಗನವಾಕ್ಯ'ವನ್ನು ಕೇಳಿ 'ಕಂಗಳೆರಡರಲ್ಲಿ ಕಿಡಿಗೆದಿಂ' ಹೇಳುತ್ತಾನೆ :
ಅಷ್ಟತಾಳ ನೀರ ಬತ್ತಿಸಿದ ಮೇಲೆ-ಮುತ್ತಿನ ಚಿಪ್ಪು ಗಾರಾಗದುಳಿವುದುಂಟೆ? | ಬೇರು,ಕಡಿದ ಮೇಲೆ ಬೆಳೆಯದು ಗಿಡ ಇಂದೀ | ನಾರಿ ಇಲ್ಲದಡೆ ಕುಮಾರರಾಗುವದೆಂತು || ಸಾಲ, ರೋಗಗಳು, ಶತ್ರು, “ಮೀರಿದವ ಜ್ವಾಲೆ, ನಾಲ್ಕದಕೆ ಹೆಚ್ಚು |