೧೬೨ / ಕುಕ್ಕಿಲ ಸಂಪುಟ
ಕಾಲದೊಳಗೆ ಪರಿಹರಿಸದಿದ್ದಡೆ ಮುಂದೆ ।
ಕೀಳುವಡರಿದು ಚಾತುರ್ಯವುಳ್ಳವರಿಗೆ ॥
'ಎಂಬ ಯುಕ್ತಿಗಳನ್ನು ಮುಂದಿಟ್ಟು' ತಂಗಿಯ ಕೊಲೆಗೆ ಕೈಯೆತ್ತಿದ ಕಂಸನಿಗೆ
ವಸುದೇವನು ಹೇಳುವ ವಿನಯೋಕ್ತಿಗಳು ಹೀಗಿವೆ :
ಒಡಲು ಶಾಶ್ವತವಲ್ಲ ಕಂಸರಾಯ-ಪುಣ್ಯ ।
ಬಿಡುವದೊಂದೇ ನಿಮಿಷದಲ್ಲಿ ಕಂಸರಾಯ ॥
ಮಡದಿ ಮಕ್ಕಳೆಂಬ ಭಾಗ್ಯ ಕಂಸರಾಯ್ -ಮಳೆ ।
ಹೊಡೆದ ನೀರ ನೆರೆಗಳೆಂತೆ ಕಂಸರಾಯ ॥
ಕಂಡು ಕಂಡು ತಿಳಿದು ತಿಳಿದು ಕಂಸರಾಯ-ಯಮನ ।
ದಂಡನೆಗೆ ಸಿಲುಕುವೆಯ? ಕಂಸರಾಯ ॥
ಬಂಡಾಟಗಳುಚಿತವಲ್ಲ ಕಂಸರಾಯ-ನರಕ ।
ಕುಂಡದೊಳಗೆ ಬೀಳ್ವೆಯಲ್ಲ ಕಂಸರಾಯ ॥
ರೂಪಕತಾಳ :
ಕೊಂದವರಿಗೆ ಕೊಲೆ ತಪ್ಪದು । ಕಡೆಗೀ ಭಯ ನಿನಗಪ್ಪುದು ।
ಸಂದರೆ ಪ್ರಾಣದ ಭಯ ಎಂ । ದೆಂದಿಗು ಬಿಡದಯ್ಯ ॥
ಹುಟ್ಟಿ, ಕೂಡಲೆ ಮರಣವ । ಕಟ್ಟಿರಿಸಿದ ವಿಧಿ ಫಣೆಯಲಿ ।
ಕೆಟ್ಟಾ ಮೇಲಲ್ಲದೆ ಮತಿ । ಪುಟ್ಟದು ಜೀವರಿಗೆ ॥
ಮುನೆ ಕಾಲಿಗೆ ನೆಟ್ಟರೆ । ಪನೆ ಚುಚ್ಚುವುದೇತಕೆ ? ।
ಸೂಕ್ಷ್ಮನಸಿನ ಕಂಗೆಡಿಕೆಯ । ಕಲ್ಮನ ಮಾಡದಿರು ॥
ಕಂಸನು ನೀತಿಗೆ ಮಣಿಯದಿರಲು ಹುಟ್ಟಿದ ಮಕ್ಕಳನ್ನೆಲ್ಲ ತಂದೊಪ್ಪಿಸುವೆನೆಂದು ವಸುದೇವನು ಭಾಷೆ ಕೊಡುತ್ತಾನೆ. ಅದಕ್ಕೆ ಕಂಸನ ಉತ್ತರ ಹೀಗಿದೆ :
ನಿಜವಲ್ಲ-ಮಾತು ನಿಜವಲ್ಲ ।
ನಿಜವಲ್ಲ ಈ ಮಾತು ನಿನ್ನಂತರಂಗ । ಕುಜನರ ಕೂಡಾಡುವಂಥ ಪ್ರಸಂಗ ॥ ಪಲ್ಲ ॥
ಬೀಸಿದ ಕೈತಪ್ಪಿ ನಡೆದರೆ ಮುಂದೆ । ಸಾಸಿರಕಾಲ ಎಂಬರು ಗಾದೆ ಹಿಂದೆ ।
ಬೆಟ್ಟದ ಮೊಸಳೆಯ ಜಲದಲಿ ತಂದು । ಬಿಟ್ಟವನುಪಕಾರವರಿವುದೆ ಮುಂದು? ।
ದುಷ್ಟರಿಗುಂಟೆ ದಾಕ್ಷಿಣ್ಯವೆಂದೆಂದೂ? । ಭ್ರಷ್ಟಕಾರ್ಯದ ಮಾತಾಡುವರೆ
ಕೊಂಡದ ನೆಲೆ ನೀರ ತಿಳಿದು ತಾ ಮೊದಲೆ । ಗುಂಡಿಯೊಳಗೆ ಬಿದ್ದು ಸಾವರೆ?
ಕಂಡು ಹಾದಿಯೊಳಿದ್ದ ಮಾರಿಯ ಮನೆಗೆ । ಕೊಂಡುಹೋಗುವರುಂಟೆ?