ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೨ / ಕುಕ್ಕಿಲ ಸಂಪುಟ

ಕಾಲದೊಳಗೆ ಪರಿಹರಿಸದಿದ್ದಡೆ ಮುಂದೆ | ಕೀಳುವಡರಿದು ಚಾತುರ್ಯವುಳ್ಳವರಿಗೆ || 'ಎಂಬ ಯುಕ್ತಿಗಳನ್ನು ಮುಂದಿಟ್ಟು ತಂಗಿಯ ಕೊಲೆಗೆ ಕೈಯೆತ್ತಿದ ಕಂಸನಿಗೆ ವಸುದೇವನು ಹೇಳುವ ವಿನಯೋಕ್ತಿಗಳು ಹೀಗಿವೆ : ಏಕತಾಳ : ಒಡಲು ಶಾಶ್ವತವಲ್ಲ ಕಂಸರಾಯ-ಪುಣ್ಯ | ಬಿಡುವದೊಂದೇ ನಿಮಿಷದಲ್ಲಿ ಕಂಸರಾಯ || ಮಡದಿ ಮಕ್ಕಳೆಂಬ ಭಾಗ್ಯ ಕಂಸರಾಯ್ -ಮಳೆ | ಹೊಡೆದ ನೀರ ನೆರೆಗಳೆಂತೆ ಕಂಸರಾಯ || ಕಂಡು ಕಂಡು ತಿಳಿದು ತಿಳಿದು ಕಂಸರಾಯ-ಯಮನ | ದಂಡನೆಗೆ ಸಿಲುಕುವೆಯ? ಕಂಸರಾಯ || ಬಂಡಾಟಗಳುಚಿತವಲ್ಲ ಕಂಸರಾಯ-ನರಕ | ಕುಂಡದೊಳಗೆ ಬೀಳ್ವೆಯಲ್ಲ ಕಂಸರಾಯ || ರೂಪಕತಾಳ : ಕೊಂದವರಿಗೆ ಕೊಲೆ ತಪ್ಪದು | ಕಡೆಗೀ ಭಯ ನಿನಗಪ್ಪುದು | ಸಂದರೆ ಪ್ರಾಣದ ಭಯ ಎಂ | ದೆಂದಿಗು ಬಿಡದಯ್ಯ || ಹುಟ್ಟಿ, ಕೂಡಲೆ ಮರಣವ | ಕಟ್ಟಿರಿಸಿದ ವಿಧಿ ಫಣೆಯಲಿ | ಕೆಟ್ಟಾ ಮೇಲಲ್ಲದೆ ಮತಿ | ಪುಟ್ಟದು ಜೀವರಿಗೆ || ಮುನೆ ಕಾಲಿಗೆ ನೆಟ್ಟರೆ | ಪನೆ ಚುಚ್ಚುವುದೇತಕೆ ? | ಸೂಕ್ಷ್ಮನಸಿನ ಕಂಗೆಡಿಕೆಯ | ಕಲ್ಮನ ಮಾಡದಿರು || ಕಂಸನು ನೀತಿಗೆ ಮಣಿಯದಿರಲು ಹುಟ್ಟಿದ ಮಕ್ಕಳನ್ನೆಲ್ಲ ತಂದೊಪ್ಪಿಸುವೆನೆಂದು ವಸುದೇವನು ಭಾಷೆ ಕೊಡುತ್ತಾನೆ. ಅದಕ್ಕೆ ಕಂಸನ ಉತ್ತರ ಹೀಗಿದೆ : ನಿಜವಲ್ಲ-ಮಾತು ನಿಜವಲ್ಲ | ನಿಜವಲ್ಲ ಈ ಮಾತು ನಿನ್ನಂತರಂಗ | ಕುಜನರ ಕೂಡಾಡುವಂಥ ಪ್ರಸಂಗ || ಪಲ್ಲ || ಬೀಸಿದ ಕೈತಪ್ಪಿ ನಡೆದರೆ ಮುಂದೆ | ಸಾಸಿರಕಾಲ ಎಂಬರು ಗಾದೆ ಹಿಂದೆ | ನೀ ಶಿಶುಗಳ ತಂದುಕೊಡುವ ಮಾತುಂಟೆ? | ಲೇಸೆಂದು ನಂಬಿ ಬಿಟ್ಟರ ಟೆಂಟೆ ಮಂಟೆ ! | ನೀನಿಂದು? | ಬೆಟ್ಟದ ಮೊಸಳೆಯ ಜಲದಲಿ ತಂದು | ಬಿಟ್ಟವನುಪಕಾರವರಿವುದೆ ಮುಂದು? | ದುಷ್ಟರಿಗುಂಟೆ ದಾಕ್ಷಿಣ್ಯವೆಂದೆಂದೂ? | ಭ್ರಷ್ಟಕಾರ್ಯದ ಮಾತಾಡುವರೆ ಕೊಂಡದ ನೆಲೆ ನೀರ ತಿಳಿದು ತಾ ಮೊದಲೆ | ಗುಂಡಿಯೊಳಗೆ ಬಿದ್ದು ಸಾವರೆ? ಕಂಡು ಹಾದಿಯೊಳಿದ್ದ ಮಾರಿಯ ಮನೆಗೆ | ಕೊಂಡುಹೋಗುವರುಂಟೆ? ಮರುಳೆ | ಕಡುಜಾಣರೊಳಗೆ ||