ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೮ / ಕುಕ್ಕಿಲ ಸಂಪುಟ

ಮಗು ನಿನ್ನ ಸೊಸೆ ವೈರಿಯಲ್ಲ-ಕೈಯ |
ಮುಗಿದು ಬೇಡುವೆ ಪಾಲಿಸಿದನೊಂದು ಸೊಲ್ಲ ǁ

------
------
ನಿನ್ನ ಸಂಗಡ ಹುಟ್ಟಿಬಂದು ನಿತ್ಯ |
ಕಣ್ಣನೀರ್ಕಳುಣಿಸಿದೆಯೋ ಇ೦ತಿ೦ದು |
ಇನ್ನಾದರಿದ ಮನತಂದು - ಪಾಲಿ |
ಸೆನ್ನ ಪುಣ್ಯದೊಳಾದ ಶಿರುವ ನೀನೊಂದು ǁ

ಹಲವು ಪರಿಯಲಿ ಬೇಡಿಕೊಂಡರೂ ಕೇಳದ ಮದಕಂಸನು ಶಿಶುವನ್ನು ನೆಲಕ್ಕಪ್ಪಳಿಸಿದರೆ ಆ ಚಂಡಿಕೆಯು 'ಎಲೆ ಪಾಪಿ ಕೇಳು ನೀನೆನ್ನ ಕೋಲುವುದಕೆ ಗಂಟಲೊಳಿಳಿನ ತುತ್ತಲ್ಲ' ನಿನ್ನ ವೈರಿಯು ಬೇರೆ ಬೆಳೆಯುತ್ತಿದ್ದಾನೆ ಎಂದು ಹೇಳಿ 'ಎದೆಯ ತುಳಿದಂಬರಕೆ ಚಿಗಿ'ಯುತ್ತಾಳೆ. 'ಎನ್ನ ಪ್ರಾಣವ ಕಳೆವ ಚಿಣ್ಣನನ್ನು ಕೊಲುವುದಕ್ಕೆ ಕನ್ನಡಿಯ ಗಂಟಾಯು ಕೈತಪ್ಪಿ ಹೋಯ್ತು' ಎಂಬ ವ್ಯಸನದಿಂದ ಕಂಸನು ಲೋಕದಲ್ಲಿ ಜನಿಸಿದ ಶಿಶುಗಳನ್ನೆಲ್ಲ ವಿಷದ ಮೊಲೆಯೂಡಿ ಕೊಂದುಬರುವುದಕ್ಕಾಗಿ ಪೂತನಿಯನ್ನು ಕಳುಹಿಸುತ್ತಾನೆ.

ಹಾಗೆ ಬಂದ ಪೂತನಿಯನ್ನು ಸುಬ್ಬನು ಹೀಗೆ ಉಪ್ಪೇಕ್ಷಿಸಿದ್ದಾನೆ.

ಗರುಡನನು ಕೊಲಬಂದ ನಾಗಿಯೊ |
ಕರಿಣಿಯೋ ಕೇಸರಿಯ ಸಣಸುವ |
ಉರಗ ಪುತ್ತಿನ ಕೊರೆಯಬಂದಿಹ ಇಲಿಯ ಮರಿಯೊ ǁ
ಲೋಕಶಿಶುಗಳ ಕೊಂದ ಮೊಲೆಯನು |
ತಾರಕಾಗ್ರದಿಪಿಡಿದು ಬಾಯಿ |
ಟೌಕಿ ಪಲ್ಗಳೊಳೆಳೆಯುತುಂಡನು ಲೋಕನಾಥ್ ǁ

ಝಂಪೆತಾಳ :

ಸೋಕಿದರೆ ಮೆಯ್ ಸುಡುವ ವಿಷವ ಕಟವಾಯಿಂದ |
ಲೋಕರಿಸುತುಗುಳೆ ಧಾರೆಗಳ |
ಆ ಕುಟಿಲೆಯಂಗರಕುತವ ಹೀರಿ ಬಿಡಲು ಪರಿ |
ದೋಕುಳಿಯು ನಗರ ತುಂಬಿದುದು |
ಮಗುವಲ್ಲ ಇದು ಮಾರಿ ಎನುತ ನಿಷ್ಟುರದ ಶ |
ಗಳಿಂದ ಕೂಗಿ ಬಾಯ್ದಿಡುತ |
ಅಗಣಿತದ ಪರ್ವತಕೆ ವಜ್ರನಿಟ್ಟಂತೆ ಕೈ |
ಯುಗುರ ಕೊನೆಯಿಂದ ಚಿವುಟಿದಳು ǁ

ಒಂದರೆ ನಿಮಿಷದಲ್ಲಿ ಭಯಂಕರವಾದ ನಿಜಸ್ವರೂಪದಲ್ಲಿ ಪೂತನಿಯು ಅಸುವಳಿದು 'ನೀಲಾದ್ರಿಯಂತೆ' ಕಡೆಯುತ್ತಾಳೆ. ಇದನ್ನು ಕಂಡ ಯಶೋದೆಯು ಮಗುವಿಗೆ ವಿಷವೇರಿ ತಂದು ಹೆದರಿ ಆಡರಿದಣುಗನ ಪಿಡಿದು ಮನೆಗೊಯ್ದು ವಿಷದ ಗಾರುಡಿಗರನು ಕರೆಸಿ ಮಂತ್ರಷಧಿ ಪ್ರಯೋಗವನ್ನು ಮಾಡಿಸುತ್ತಾಳೆ. ಆ ಗಾರುಡಿಗರು ಶೇಷಶಾಯಿಯಾದ