ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ / ೧೬೭

ಧಾರಿಯ ಮಹಿಮೆಯಂದವನೀಗ ||
ಒಡೆಯ ಕೋಪಿಸಬಾರದೆಂದು ಪನ್ನಗರಾಜ |
ನಡುವಿರುಳಿನೊಳೆದ್ದು ಬಂದನು - ಮಳೆ |
ಹೊಡೆಯಲಂಜುವದನ್ನು ಕಂಡನು -ತನ್ನ |
ಹಡೆಯನಂಬರಕೆತ್ತಿ ನಿಂದನು ಮಾಣಿ |
ಕ್ಯಗಳನು-ಪ್ರಕಾ |
ಶಗಳನು-ಮಾಡಿ |
ಕೊಡುತಾಡುತಲೆ ನಡೆತಂದನು-ಭೋ |
ರ್ಗುಡಿಸುವ ಯಮುನೆಯ ಕಂಡನು ||
...............................
...............................

ಯಮುನೆಯನ್ನು ದಾಟಿ ನಂದಗೋಕುಲಕ್ಕೆ ಬಂದ ವಸುದೇವನು-

ಪೊತ್ತುಕೊಂಡಿರ್ದ ಗೋವಿಂದನಾನಂದದ |
ಮೂರ್ತಿಯನತ್ತಿ ತಗ್ಗಿರಿಸಿದ ಕೈಯೊಳ್ |
ಮತ್ತೆ ಮಾಯಾಂಗಿಯ ಧರಿಸಿದ ಕಾ |
ಣುತ್ತ ಮನದೊಳು ಕಾತರಿಸಿದ-ತಿರು |
ಗಿದ ಬೇಗ ಸೆರೆ |
ಮನೆಗಾಗ-ಬಳಿ |
ನಿತ್ತೊಳಪೊಗಲು ಮುಚ್ಚಿತು ಕದ ಕಾಲಿ |
ಗೊತ್ತೆ ಸಂಕಲೆ ಹೇಳಲೇನದ ||

ಆಗ ಶಿಶುವಳುವುದನ್ನು ಕೇಳಿ ಎಚ್ಚತ್ತ ಕಂಸ-

ತ್ರಿವುಡೆ :

ಪುಟ್ಟಿದನು ಪಗೆ ಎಂದು ಮನದಲಿ |
ಬಿಟ್ಟಮಂಡೆಯೊಳೊದರಿ ಬಲುಬುಸು |
ಗುಟ್ಟುತೇಳುತ ಬೀಳುತಲೆ ಕಂ | ಗೆಟ್ಟುಭರದಿ |
ತಡವುತೆಡವುತ ಒಂದುಬಾಗಿಲ |
ನೊಡೆದು ಹುಂಕರಿಸುತ್ತ ಶಿಶುವನು |
ಕೊಡುಕೊಡೆನುತಾರ್ಭಟಿಸಿನಿಂದನು | ಹೊಡೆದುಕೈಯ ||

ಇದೊಂದು ಹೆಣ್ಣು ಮಗುವನ್ನಾದರೂ ಉಳಿಸಲಾರೆಯಾ? ಎಂದು ದೇವಕಿಯು ಅಣ್ಣನಾದ ಕಂಸನನ್ನು ಪ್ರಾರ್ಥಿಸುವ ಹತ್ತಕರುಳಿನ ಮರುಕವು ಹೀಗಿದೆ :

ಅಷ್ಟತಾಳ :

ಅಣ್ಣಾ ಕೊಲ್ಲುವುದೇಕೊ ಮಗಳ ಇಕೊ |
ಹೆಣ್ಣು ಹುಟ್ಟಿತು ನೋಡು ಪುಣ್ಯಭಾಗ್ಯಗಳ || ಪಲ್ಲ

ಗಗನದ ನುಡಿ ತಪ್ಪಿತಲ್ಲ-ನಿನ್ನ |
ಪಗೆಯನೆಂಬಾ ಮಾತು ಪುಸಿಯಾಯಿತಲ್ಲ ||