ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೧೭೪ / ಕುಕ್ಕಿಲ ಸಂಪುಟ


ಮೊಸರು ಬೆಣ್ಣೆ ಬಾಳೆಹಣ್ಣ ತಾ ಮೆಲುವಾಗ |
ಹಸುಮಗುವೆಂದು ಪಾಲಿಸಿಕೊಂಡೆವು ||
ನಿಶಿಯೊಳಡಗಿ ಬಳಿಗೆ ತಂದೀ ತರುಣಿಯ |
ಪೊಸಕುಚಂಗಳ ಮುಟ್ಟಲುಚಿತವೇನಮ್ಮ? |
ಕಣ್ಣಮುಚ್ಚಳಯನಾಡುವ ಎಂದು ಕರೆವಾಗ|
ಸಣ್ಣವನೆಂದು ತಣ್ಣಗೆ ಬಿಟ್ಟೆವು |
ಕಣ್ವಪುರೀಶ ಶ್ರೀಕೃಷ್ಣ ಈ ತರುಣಿಯ |
ಬೆನ್ನಿನ ಮೇಲೇರಿ ಇರಬಹುದೇನಮ್ಮ? || ಸಿಕ್ಕಿದ
ಸಿಕ್ಕಿದ ಕಳ್ಳ ತಪ್ಪಿಸಿಕೊಂಡೋಡದ ಹಾಗೆ ರಾತ್ರಿ ಎಲ್ಲರೂ ಕಾದಿರುತ್ತಾರೆ. ಮನೆಗೆ ಬಾರದ ಮಗನನ್ನು ಕೇರಿಕೇರಿಯಲ್ಲಿ ಹುಡುಕುತ್ತ ಬಾಲನ ಸೌಂದರ್ಯವನ್ನು ಬಣ್ಣಿಸಿ ಯಶೋದೆಯು ಹಂಬಲಿಸುವ ಪದ್ಯ : ಏಕತಾಳ :
ರಂಗ ಬಂದ | ನೆ ಪಾಂಡು | ರಂಗ ಬಂದ | ನ-
ರಂಗು ಮಾಣಿ | ಕದ ಹರಳ | ಉಂಗುರದ | ಕೈಯಬೆರಳ || ಪಲ್ಲ ||
ಸಿರಿಯ ಸೋ | ಲ್ಮುಡಿಯ ಸೌಂ| ದರಿಯ ಪು | ಪ್ರಮಾಲೆಯ |
ಧರಿಸಿ ಕುಂ | ಕುಮವ ಕ |ಸ್ತುರಿಯನಾಮ | ಹಣೆಯೊಳಿಟ್ಟು
ಕೊರಳ ಕೌ | ಸುಭಹಾರ | ಮೆರೆವ ಕ | ರ್ಣಕುಂಡಲ |
ಕರದಿ ಕಂ | ಕಣ ಪೀತಾಂ | ಬರದುಡಿ | ಗೆಯನುಟ್ಟು || ರಂಗ-
ಉರದೊಳೊ | ಪ್ಪುವ ರತ್ನ | ವರವೈಜ | ಯಂತೀಮಾಲೆ |
ಕರದ ಕೊ | ಳಲ ಕಣ್ವ | ಪುರದ ಗೋಪಾಲಕೃಷ್ಣ II ರಂಗ || Il don II ಹೀಗೆ ಅಂಗಲಾಚಿ ಕರೆಯುತ್ತ ಬರುವ ಗೋಪಿಯ ಮುಂದೆ ಗೊಲ್ಲ ಹೆಂಗುಸರು ಕಳ್ಳನನ್ನು ತಂದೊಪ್ಪಿಸಿ ಹೀಗೆನ್ನುತ್ತಾರೆ : ಏಕತಾಳ :
ಗೋ || ಪಮ್ಮ ನಿಮ್ಮ | ಕಂದನ | ಕೆಟ್ಟಚಾಳಿಯ | ಬಿಡಿಸ
ಬೇಡವೆಂದೊಡ | ಬಡಿಸೇ
ದಯದಿ೦ದೆಮ್ಮನು | ನಡೆಸೇ
ಬೇಕಾದ್ದೆಲ್ಲವ | ಕೊಡಿಸೇ || ಗೋ || ಪಲ್ಲ ||
ಸುಳ್ಳು ಮಾ | ತಾಡುವಿರಿ ನೀ | ವೆಂದೆ ಗೋ | ಪಾಲಕೃಷ್ಣ |
ಒಳ್ಳೆಯವ | ನೆಂದೆ ಗುಣದಿ | ಹಿಂದೆ - 1 - ದಯ |
ಉಳ್ಳಡಿ | ನ್ನಾದರೂ | ಮುಂದೆ - | - ಇಸ್ಕೊ |
ಕಳ್ಳನ | ನೊಪ್ಪಿಸಿದೆವು ನಾ | ಎಂದೆ - | ಸಟೆ |
ಯಲ್ಲಿ ಕೈ 1 ಮುಗಿದು ಬೇಡುವ | ದೊಂದೆ- ಗೋ | ಪಮ್ಮ ನಿಮ್ಮ ||
ಬೆಳಗು ಜಾ | ವದಲಿ ಮೆಲ್ಲಗೆ | ಬಂದ- ದಂ | ಪತಿಗಳು ಕೋಣೆ
ಯೊಳಗೆ ಮಲ | ಗಿರಲು ಲಜ್ಜ | ಮುಂಡ - ಪೇ | ಳಲೇನ್ ಬಂಡ |
ಇಳೆಯೊಳ | ಗೀತನೆ ಬಲು | ಪುಂಡ ಮಂ | ಚದ ಕೆಳಗೆ
ಕುಳಿತಲ್ಲಿ | ಯವರ ನಿಜವ | ಕಂಡ ನಾ | ಚಿಕೆ ಇಲ್ಲದೆ |
ಒಳಗೆ ನಗು | ತಿರುವನು ದೇವ ಮು 1 ಕುಂದ ಗೋ | ಪಮ್ಮ ನಿಮ್ಮ ||