ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಧ್ಯಕ್ಷ ಭಾಷಣ / ೧೭೫


ಅಧ್ಯಕ್ಷ ಭಾಷಣ | ೧೭೫ ಕಳ್ಳನನ್ನು ಹಿಡಿದು ತಂದರೆ ದಂಡಿಸುವೆನೆಂದು ಹಿಂದೆ ಹೇಳಿದ ಮಾತಿಗೆ ಈಗೇನೆನ್ನು ವಳು ಗೋಪಿ? 'ತಿಂದ ಮೊಸರಿನ ಸೋರುದುಪ್ಪದ ಜೊಲ್ಲು ಕೈಬಾಯಿ ಎಂಜಲೂಡಿರಲು ಬೇರೆ ಸಾಕ್ಷ್ಯ ಬೇಕೆ? ಚಿಣ್ಣನ ಕಳ್ಳತನಕ್ಕೆ ತಾನೇ ನಾಚಿಕೊಂಡು ಮನೆಗೊಯ್ದು ಪರಿಪರಿಯಿಂದ ಬುದ್ದಿ ಹೇಳುತ್ತಾಳೆ, ಆ ಪದ್ಯಗಳೆಲ್ಲ ಬಹಳ ಸೊಗಸಾಗಿವೆ. ವಿಸ್ತಾರ ಭಯದಿಂದ ಬಿಟ್ಟಿದ್ದೇನೆ. ಅವುಗಳಲ್ಲಿ ಗೋಪಿಯ ಮಾತಿನ ಕೊನೆಯ ಪದ್ಯವೊಂದನ್ನು ಹಾಡುತ್ತೇನೆ- (ಚಾಪು) ಅಷ್ಟತಾಳ :
ಅರಿತವ | ರಂತರಂ | ಗದಿ ನಿನ್ನ | ವರ ಕಣ್ವ |
ಪುರದ ಶ್ರೀ ಗೋಪಾಲಕೃಷ್ಣನೆಂದು |
ಹಿರಿಯಣ್ಣ ಬಲರಾಮನುರಗೇಂದ್ರನೆಂಬಂಥ |
ಮರಿಯಾದೆಯಲಿ ಪಾಠಕರು ಪೊಗಳುವುದಾಗಿ | ತರವೇನೋ ರಂಗ
ನಿನಗಿಂಥ ಚಾಳಿ || ಬಾಲಕೃಷ್ಣನು ತಾನು ಏನೊಂದೂ ಏನೊಂದೂ ಅರಿಯದ ನಿರಪರಾಧಿ, ತಪ್ಪಲ್ಲ ಆ ಗೊಲ್ಲತಿಯರದು ಎಂದು ತಾಯಿಗೆ ತೋರಿಸುವ ಚಮತ್ಕಾರದ ಪದ್ಯವೊಂದು ಹೀಗಿದೆ : ಮಚ್ಚೆ ತಾಳ : ತಡೆಯದೆಂದಿ | ನಂತೆ ಗೋಪ | ಹುಡುಗರೊಡನೆ | ಗೋಳನ್ನು |
ಹೊಡೆದುಕೊಂಡು ಹೋಗಲ್ಮರೆಯೊಳಡಗಿ ಎನ್ನ ಬಾ ಬಾರೆಂದು |
ಕಡುವಿನೋದದಿಂದ ಕರೆವರು ಮುಂದ್ವರಿಯೆ ಕೈಯ |
ಪಿಡಿದು ಒಳಮಂದಿರಕೆ ಒಯ್ಯರು-ಹಲವು ಚೇಷ್ಟೆ.|
ನಡೆಸಿ ಉಟ್ಟವಸನ ಸುಲಿವರು ಮಂಚದ ಮೇ |
ಲಡರಿಸುತಲಿ ತೊಡೆಯಸಂದಿನಡೆಯೋಲೌಕಿ ಬಹಳ ಭಂಗ |
ಬಡಿಸಿ ವಿವಿಧ ಬೆಡಗುದೋರಿ ನಡೆವರಿವರ ಕೆಡುಕುತನಕೆ ||
ಬೆದರಿಸದಿರು ಇದಕೆ ಎನ್ನನು ||
ಇರುಳಿನಲ್ಲಿ ಬೆದರಿ ಒಳಮಂದಿರವ ಪೊರಡದಿರುವ ನಾನೋಂ |
ದರಿಯೆನಿವರ ದಾವಾವಡೆಯೊಳಿರುವುದೆಂಬ ತೆರನಿದೆಲ್ಲ |
ತಿರುಕನಂತೆ ತಿರುಗಲರಿವನೆ?- ಪಾಸರ ಗಡಿಗೆ |
ಸುರಿದು ಬೆಣ್ಣೆ ಮೆಲುತ ಬರುವೆನೆ? “ಬಚ್ಚಲಿನೊಳಡಗೆ ..
ಮರುಳನೇ ನಿನ್ನಗಲಿ ಇರುವೆನೆ? “ಬೇಕಾದುದೆಲ್ಲ |
ನಿರತ ಉಣಿಸುತ್ತಿರುವ ಅದನು ತೊರೆದು ಕದ್ದು ಮಲ್ಲಲೇನು |
ಕೆರೆಯೆ ಎನ್ನ ಹೊಟ್ಟೆ ? ಏಕೆ ಜರವೆಯವರ ಬರಿಯ ನುಡಿಗೆ ||
ಚಿಣ್ಣನ ಮಾತಿಗೆ ಮನ ಕರಗಿದ ಗೋಪಿ
ಏಕತಾಳ :
ಎತ್ತಿ ಆಡಿಸಿದಳು | ಚಿತ್ತ ಜಪಿತನ |
ಮುತ್ತಿಟ್ಟು ಪಾಲ ಕುಡಿಸಿ ಗುಣಯುತನ || ಪಲ್ಲ