ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ ಕೋಟ ಶಿವರಾಮ ಕಾರಂತರ 'ಸುಬ್ಬನ ಸಮಸ್ಯೆ' / ೧೮೯

ಯವನೆಂದು ಅವನೇ ಹೇಳಿರುವಾಗ ನಾವು ಅವನನ್ನು ಬ್ರಹ್ಮಾವರದವನೆಂದು ಸಾಧಿಸು ವುದು ಹೇಗೆ? ಮತ್ತು ಏಕೆ?

ಸುಬ್ಬನು ಬ್ರಹ್ಮಾವರವನ್ನೇ 'ಆಡುವಳ್ಳಿ' ಎಂದಾಗಿಸಿ ಹನುಮದ್ರಾಮಾಯಣವನ್ನು ರಚಿಸಿದ್ದನೆಂಬುದಕ್ಕೆ ಶ್ರೀ ಕಾರಂತರು ಕೊಡುವ ಇನ್ನೊಂದು ಕಾರಣವು ಸಹ ಕ್ಷುಲ್ಲಕ ವಾದುದೆಂದೇ ಹೇಳಬೇಕಾಗಿದೆ. 'ಕೊಲ್ಲೂರಿನ ಆಚೆ ಈಚೆ ಆಡುವಳ್ಳಿ ಎಂಬ ಬೇರೆ ಗ್ರಾಮವಿಲ್ಲ. ಬರೆದವನು ವೆಂಕಾರ್ಯ ತನುಜ ಸುಬ್ರಹ್ಮಣ್ಯನಾದರೆ ಅವನ ಊರು ಅಜಪುರ (ಬ್ರಹ್ಮಾವರ) ಎಂದು ತಮ್ಮ ಬಯಲಾಟ ಗ್ರಂಥದ ಪುಟ ೨೦೫ರಲ್ಲಿ ಹೇಳುತ್ತಾರೆ. ಆಡುವಳ್ಳಿಯು ಕೊಲ್ಲೂರಿನ ಆಚೆ ಈಚೆ ಇದ್ದರೆ ಮಾತ್ರ ಅಲ್ಲಿರುವವರಿಗೆ ಕೊಲ್ಲೂರು ಮುಕಾಂಬೆಯನ್ನು ಸ್ತುತಿಸುವ ಅಧಿಕಾರವಿರುವುದೆ? ದೂರದಲ್ಲಿದ್ದವರು ಮುಕಾಂಬೆಯ ಭಕ್ತರಾಗಿಲ್ಲವೆ? ಅವಳನ್ನು ಸ್ತುತಿಸಿ ಅವಳ ಅಂಕಿತದಲ್ಲಿ ಕೃತಿರಚನೆ ಮಾಡಲಿಲ್ಲವೆ? ಕೊಲ್ಲೂರು ಮುಕಾಂಬೆ, ಧರ್ಮಸ್ಥಳ ಮಂಜುನಾಥ, ಉಡುಪಿಯ ಶ್ರೀಕೃಷ್ಣ, ಸುಬ್ರಹ್ಮಣ್ಯದ ಸುಬ್ಬರಾಯ, ಶೃಂಗೇರಿಯ ಶಾರದೆ, ಕಾಶಿ ವಿಶ್ವೇಶ್ವರ ಇತ್ಯಾದಿ ಸುಪ್ರಸಿದ್ಧ ಕ್ಷೇತ್ರದ ದೇವರ್ಕಳು ಸಮೀಪದಲ್ಲಿರುವವರಿಗೆ ಹೆಚ್ಚು ದೂರದವರಿಗೆ ಕಡಮೆ ಎಂದಿದೆಯೇ? ಮಾತ್ರವಲ್ಲ, ಕೊಲ್ಲೂರಿನ ಸಮೀಪ 'ಆಡುವಳ್ಳಿ' ಎಂಬ ಸ್ಥಳವಿಲ್ಲ ದಿರುವುದರಿಂದ ಸುಬ್ಬನು ಆ ಊರಿನವನು ಅಲ್ಲವೆಂದೇ ಸ್ವತಃ ಸಿದ್ಧವಾಗುವುದಲ್ಲ! ಈ ತರ್ಕವು 'ಉಷ್ಕಲಗುಡನ್ಯಾಯ'ದಂತೆ ತನಗೆ ತಾನೇ ಪ್ರತಿಬಂಧಿಯಾಗಿದೆ.

ಇನ್ನು ವೆಂಕಾರ್ಯನ ಮಗ ಸುಬ್ಬನು ಕೆಳದಿಯ ಒಂದನೆಯ ಬಸಪ್ಪನಾಯಕನ ಆಸ್ಥಾನಕವಿಯಾಗಿದ್ದನು ಎಂಬುದಕ್ಕೆ ಶ್ರೀ ಕಾರಂತರು ಕೊಡುವ ಒಂದೇ ಒಂದು ಆಧಾರ ವೆಂದರೆ 'ರುಕ್ಷ್ಮಿಣೀ ಸ್ವಯಂವರ'ದಲ್ಲಿ ಕವಿಯು ತನ್ನ ಪರಿಚಯವನ್ನು ಹೇಳಿಕೊಂಡಿರುವ ಒಂದು ಪದ್ಯ. ತಮ್ಮ 'ಬಯಲಾಟ' ಗ್ರಂಥದಲ್ಲಿ ಶ್ರೀಯುತರೇ ಉದ್ದರಿಸಿಕೊಟ್ಟಿರುವಂತೆ (ಯಕ್ಷಗಾನ ಬಯಲಾಟ, ಪುಟ ೧೮೮) ಆ ಪದ್ಯವು ಹೀಗಿದೆ :
ಧಾರಿಣಿಗೆ ಪಶ್ಚಿಮದಿ ಶೋಭಿಪ
ವಾರಿನಿಧಿಯಾನಾಳ್ವ ಕೆಳದಿಯ
ಭೂರಮಣ ಬಸವೇಂದ್ರನಂಫ್ರಿಯ | ಸೇರಿ ಬಾಳ್ವೆ |
ಕ್ಷಿತಿಯ ದಿವಿಜರ ಕುಲದೊಳುದಿಸಿದ
ಮತಿವಿಶಾರದ ವೆಂಕಣಾರ್ಯನ
ಸತಿಸುಗುಣೆ ದೇವಮ್ಮನೆಂಬಳ | ಸುತಸುಶೀಲ |
ನೆರೆಪ್ರೌಢ ಚೆನ್ನಯ್ಯನನುಜನು
ತರಳಸುಬ್ಬನು ಶಿವೆಯ ಸಾಕ್ಷಾತ್
ಕರುಣದಿಂ ನುಡಿಸಿರ್ದ ಶ್ರೀವರ | ಚರಿತವನ್ನು |
ಈ ಪದ್ಯಕ್ಕೆ ಶ್ರೀಯುತರು ಮಾಡಿದ ವ್ಯಾಖ್ಯಾನ ಹೀಗೆ : 'ಆತ ಕೆಳದಿಯ ನಾಯಕನ ಕಾಲದಲ್ಲಿ ಅವನ ಆಶ್ರಯದಲ್ಲಿದ್ದನೆಂಬುದೂ ತಿಳಿಯುತ್ತದಷ್ಟೆ. ಕೆಳದಿಯ ಅರಸುಗಳಲ್ಲಿ ಇಬ್ಬಿಬ್ಬರು ಬಸವಪ್ಪನಾಯಕರೆಂಬವರಿದ್ದರು. ಮೊದಲನೆಯವನು ಕ್ರಿ.ಶ. ೧೬೯೮- ೧೭೧೫ರ ತನಕ ಆಳಿದವನು, ಮತ್ತಿನವನು ಕಿರಿಯ ಬಸವಪ್ಪನೆನಿಸಿಕೊಂಡವನು. ಆತ ಕ್ರಿ.ಶ. ೧೭೪೦ರಲ್ಲಿ ಪಟ್ಟಕ್ಕೆ ಬಂದವನು. ಕಿರಿಯ ಎಂದು ಹೇಳಿಲ್ಲದುದರಿಂದಲೂ ಸುಬ್ಬನ ಕ್ರಿ. ಶ. ೧೭೪೦ರ ಮೊದಲಿನ ತಾಡವಾಲೆಗಳು ಸಿಗುವುದರಿಂದಲೂ ಈತ ಹಿರಿಯ