ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೦ / ಕುಕ್ಕಿಲ ಸಂಪುಟ

ಬಸವಪ್ಪನಾಯಕನ ಸಮಕಾಲೀನನು ಎಂದರೆ ಕ್ರಿ. ಶ. ೧೭೧೫ರಲ್ಲಿ ಪ್ರೌಢವಯಸ್ಕನೂ, ಪ್ರಸಿದ್ದಿಗೆ ಬಂದವನೂ ಎಂಬುದಾಗಿ ಹೇಳಬಹುದು'.

ಮೇಲಿನ ಪದ್ಯದಲ್ಲಿರುವ 'ಕೆಳದಿಯ ಭರಮಣನಂತ್ರಿಯ ಸೇರಿಬಾಳ್ವ' ಎಂಬ ವಿಶೇಷಣವನ್ನು ಸುಬ್ಬನಿಗೆ ಅನ್ವಯಿಸಿ ಶ್ರೀಯುತರು ತಮ್ಮ ಗ್ರಂಥದಲ್ಲಿ (ಪುಟ ೨೦೪, ೨೦೫) 'ರಾಜಾಶ್ರಯವನ್ನು ಕೊಟ್ಟಾತ ರಾಣಿ ಚೆನ್ನಮ್ಮಾಜಿಯ ಬಳಿಕ ೧೬೯೮ರಿಂದ ಹದಿನೇಳು ವರ್ಷಗಳ ಕಾಲ ಆಳಿದ ಬಸವಪ್ಪನಾಯಕ, 'ಹನುಮದ್ರಾಯಣ'ದಂಥ ಪ್ರೌಢ ಕಾವ್ಯಕ್ಕಾಗಿ ವೆಂಕಾರ್ಯತನುಜ ಸುಬ್ಬನಿಗೆ ರಾಜಮನ್ನಣೆ ದೊರೆಯುವಂತಾಯಿತು ಎಂದೂ ಅನುಮಾನಿಸಿದ್ದಾರಷ್ಟೆ? ಆದರೆ ಆ ಪದ್ಯಕ್ಕೆ ನ್ಯಾಯವಾಗಿ ಹೀಗೆ ಅರ್ಥವಾಗುತ್ತದೆಯೆ? 'ಬಸವೇಂದ್ರನಂಫ್ರಿಯ ಸೇರಿ ಬಾಳ' ಎಂಬ ವಿಶೇಷಣವು ಅದರ ಮುಂದೆಯೇ ಇರುವ ವೆಂಕಣಾರ್ಯನಿಗಲ್ಲವೆ ಅನ್ವಯಿಸತಕ್ಕುದು? ಬಸವೇಂದ್ರನನ್ನು ಸೇರಿ ಬಾಳಿದವನು ವೆಂಕಣಾರ್ಯ, ಅವನ ಪತ್ನಿ ದೇವಮ್ಮ, ಅವಳ ಮಗ ಚೆನ್ನಯ್ಯ, ಅವನ ತಮ್ಮ ಸುಬ್ಬ ಎಂದಾಗುವ ಸರಳಾರ್ಥವನ್ನು ಬಿಟ್ಟು ರಾಜಾಶ್ರಯವನ್ನು ಪಡೆದವನು ಸುಬ್ಬನು ಎಂಬ ಅಸಂಗತಾರ್ಥವನ್ನು ಏಕೆ ಕಲ್ಪಿಸಬೇಕು? 'ವೆಂಕಣಾರ್ಯ' ಪದದ ಹಿಂದೆ ಹೇಳಿರುವ ವಿಶೇಷಣಗಳೆಲ್ಲ ಆ ಪದಕ್ಕೆ ಅನ್ವಯಿಸಲ್ಪಡಬೇಕೆಂಬುದರಲ್ಲಿ ಸಂದೇಹಕ್ಕೆ ಅವಕಾಶ ವೆಲ್ಲಿದೆ? 'ಮತಿವಿಶಾರದ' ಎಂಬ ವಿಶೇಷಣವನ್ನು ಕವಿಯು (ತರಳ ಸುಬ್ಬನು) ತನ್ನ ತಂದೆಯ ಕುರಿತಾಗಿಯೆ ಹೇಳಿದುದೆಂಬುದರಲ್ಲಿ ಹೇಗೆ ಸಂದೇಹಕ್ಕೆ ಆಸ್ಪದವಿಲ್ಲವೋ ಹಾಗೆಯೇ 'ಕೆಳದಿಯ ಭೂರಮಣನಂಫ್ರಿಯ ಸೇರಿಬಾಳ' ಎಂಬುದಾಗಿ ಸುಬ್ಬನು ತನ್ನ ತಂದೆಯನ್ನು ವಿಶ್ಲೇಷಿಸಿ ಹೇಳಿದ ಮಾತೆಂಬುದು ನಿಸ್ಸಂದಿಗ್ಧವಲ್ಲವೆ? ಈ ಗ್ರಂಥವನ್ನು ತಾನು ಬಾಲ್ಯದಲ್ಲಿ ರಚಿಸಿದುದೆಂಬುದು ಕವಿಯು ತನ್ನನ್ನು ತರಳ ಸುಬ್ಬನೆಂದು ಹೇಳಿಕೊಂಡಂತೆ, ಸ್ಪಷ್ಟವಾಗಿದೆಯಷ್ಟೆ. ಮಾತ್ರವಲ್ಲ, ಪ್ರಾಯಕ್ಕೆ ಬಂದವನು ತನ್ನ ಅಣ್ಣ ಚೆನ್ನಯ್ಯನೆಂದೂ, ತಾನು ಮಾತಾಪಿತೃಗಳ ದ್ವಿತೀಯಪುತ್ರನೆಂದೂ ಎಲ್ಲರೂ ತಿಳಿವಂತೆ ಸುಬ್ಬನು ಸವಿವರವಾಗಿ ಹೇಳಿದ್ದಾನೆ.

ಈತನ ಇನ್ನೊಂದು ಕೃತಿಯಾದ ಪಾರಿಜಾತದಲ್ಲಿಯೂ ತನ್ನ ಪರಿಚಯವನ್ನು ಹೇಳಿಕೊಂಡ ಪದ್ಯವಿದೆ. ಅದರಲ್ಲಿ ತನ್ನ ತಂದೆಯ ಕುರಿತು ಅವನು ಹೇಳಿರುವುದು ಹೀಗೆ :
ಮಹಿಯಸುಮನಸ ಕುಲದೊಳುದಿಸಿದ
ಮಹದಧಿಕಮತಿ ವೆಂಕಣಾರ್ಯನ
ಮಹಿಳೆದೇವಮ್ಮನ ತನೂದ್ಭವ | ಮಹಿತಸುಗುಣ ||
ನೀತಿಯುತ ಚೆನ್ನಯ್ಯ ವರ ಸಹ | ಜಾತ ಸುಬ್ಬನು...
ಈ ಪದ್ಯದಲ್ಲಿ ತನ್ನ ತಂದೆಗೆ ಕೆಳದಿರಾಯನನ್ನು ಸೇರಿ ಬಾಳುವವನೆಂಬ ವಿಶೇಷಣ ವನ್ನು ಹೇಳಲಿಲ್ಲ. ಆದುದರಿಂದ ಈ ಗ್ರಂಥರಚನೆಯ ಕಾಲದಲ್ಲಿ ವೆಂಕಣಾರ್ಯನು ಆ ರಾಜನ ಆಶ್ರಯದಲ್ಲಿರಲಿಲ್ಲವೆಂದು ನ್ಯಾಯವಾಗಿ ಅನುಮಾನಿಸಬೇಕು. ಅದಲ್ಲದೆ, ಶ್ರೀ ಕಾರಂತರು ಹೇಳುವಂತೆ ರಾಜಾಶ್ರಯವನ್ನೂ, ರಾಜಮನ್ನಣೆಯನ್ನೂ ಪಡೆದವನು ಸುಬ್ಬನೆಂದಾಗಿದ್ದರೆ ಈ ಗ್ರಂಥದಲ್ಲಿ ಸುಬ್ಬನು ಆ ರಾಜನನ್ನು ಮರೆಯಲು ಕಾರಣವೇನು? ಬಯಲಾಟ ಗ್ರಂಥದ ಪುಟ ೧೧೭ರಲ್ಲಿ ಶ್ರೀಯುತರು 'ಆತ ಕೆಳದಿಯ ಅರಸುಗಳಲ್ಲಿ ಆಸ್ಥಾನಕವಿಯಾದ ಮೇಲೆ ಬರೆದ 'ಪಾರಿಜಾತ' ಗ್ರಂಥದಲ್ಲಿ ತನ್ನ ಪ್ರೌಢಿಮೆಯನ್ನು ತೋರಿಸಿಕೊಟ್ಟಿದ್ದಾನೆ' ಎನ್ನುತ್ತಾರೆ. ಹಾಗೆ ಆಸ್ಥಾನಕವಿಯಾಗಿ ವಿಶೇಷ ಪ್ರೌಢಿಮೆಯಿಂದ by