ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಶ್ರೀ ಕೋಟ ಶಿವರಾಮ ಕಾರಂತರ 'ಸುಬ್ಬನ ಸಮಸ್ಯೆ' / ೧೯೧

ಬರೆದ ಗ್ರಂಥದಲ್ಲಿ ತನ್ನ ಪೋಷಕನಾದ ರಾಜನನ್ನು ಸ್ಮರಿಸದೆ ಉಳಿಯುತ್ತಿದ್ದನ? ಅದೂ ಅಲ್ಲದೆ ಶ್ರೀ ಕಾರಂತರು ಹನುಮದ್ರಾಮಾಯಣದಂತಹ ಪ್ರೌಢ ಕಾವ್ಯಕ್ಕೆ ಸುಬ್ಬನಿಗೆ ರಾಜಮನ್ನಣೆ ದೊರೆಯಿತೆಂದೂ ಹೇಳುತ್ತಾರಲ್ಲ; ಆ ಹನುಮದ್ರಾಮಾಯಣದಲ್ಲಿಯೂ ಸುಬ್ಬನು ಕೆಳದಿಯ ಬಸವಪ್ಪನನ್ನು ಸ್ಮರಿಸಲಿಲ್ಲ! ಹೀಗಿರುವಾಗ ರಾಜಾಶ್ರಯವನ್ನು ಪಡೆದಿದ್ದವನು ವೆಂಕಣಾರ್ಯನೆಂಬುದರಲ್ಲಿ ಸಂದೇಹವೇ ಇಲ್ಲ.

ಇನ್ನಿಗ ಸುಬ್ಬನ ತಂದೆಯಾದ ಆ ವೆಂಕಣಾರ್ಯನು ಯಾರು? ಆತನಿಗೆ ಆಶ್ರಯ ವನ್ನು ಕೊಟ್ಟ ಬಸಪ್ಪನಾಯಕನು ಯಾರಾಗಿರಬಹುದು? ಎಂದು ನೋಡೋಣ, ಸುಬ್ಬನ ಮಗನಾದ ವೆಂಕಟನೂ ತಾನು ರಚಿಸಿದ 'ಮೈರಾವಣ ಕಾಳಗ'ದ ಪ್ರಾರಂಭದಲ್ಲಿ ತನ್ನ ತಂದೆಯನ್ನು ಸ್ತುತಿಸುವ ಮೊದಲು ಆ ವೆಂಕಾರ್ಯನನ್ನು ಸ್ತುತಿಸಿದ್ದಾನೆ. ಆ ಪದ್ಯವು ಹೀಗಿದ :
ಭೂಕವಿಗಳೊಳ್ ಶೋಭಿಸುತ ಮೆರೆವ ಬಾಲ ವಾ
ಲ್ಮೀಕಿ ಎಂದೆನಿಸಿ ಸಂಸ್ಕೃತಮಾದ ರಾಮಚರಿ
ತಾಕಥಾಸಾರಮಂ ಕರ್ಣಾಟಕಾವ್ಯದಿಂದತಿಮನೋಹರವಾಗಿಯೆ |
ಪ್ರಾಕವೃದ್ಧ ಬಲೆಯರು ಎಲ್ಲರುಂ ತಿಳಿವಂತೆ
ಪ್ರಾಕಟಿಸಿದುರುಮಹಿಮೆ ಹಂಪೆಯಾತ್ಮದ ಸದ್ವಿ
ವೇಕಿ ವೆಂಕಾರ್ಯ ಪ್ರಧಾನನಂ ತುಳಿಯುತುಸುರ್ವೆನೀ ಚಾರಿತ್ರಮಂ ||
ವೆಂಕಟನು ತನ್ನ ಗ್ರಂಥಾರಂಭಕ್ಕೆ ಇನ್ನಿತರ ಕವಿಗಳನ್ನೂ ಸ್ಮರಿಸಿರುತ್ತಿದ್ದರೆ, ಒಂದು ವೇಳೆ ಪೂರ್ವಕವಿಪರಂಪರೆಯಲ್ಲಿ ಈ ವೆಂಕಾರ್ಯನನ್ನೂ ಸ್ತುತಿಸಿದ್ದಿರಬಹುದೆಂದು ಊಹಿಸ ಬಹುದಿತ್ತು. ಇಲ್ಲಿ ಹಾಗೆಣಿಸಲು ನ್ಯಾಯವಿಲ್ಲ. ಏಕೆಂದರೆ, ವೆಂಕಾರ್ಯನೊಬ್ಬನನ್ನಲ್ಲದೆ ಇತರ ಯಾವ ಕವಿಯನ್ನೂ ವೆಂಕಟನು ಸ್ತುತಿಸಲಿಲ್ಲ. ಕನ್ನಡದಲ್ಲಿ ರಾಮಾಯಣವನ್ನು ರಚಿಸಿದ ಕವಿಗಳು ಹಲವರಿದ್ದಾರೆ. ಅವರಾರನ್ನೂ ಹೆಸರೆತ್ತದೆ ವಂಕಾರ್ಯನನ್ನು ಮಾತ್ರ ಸ್ತುತಿಸಿರುವುದಕ್ಕೆ ಆತನು ಕವಿಯಾಗಿದ್ದನೆಂಬುದು ಮುಖ್ಯ ಕಾರಣವಲ್ಲ, ವೆಂಕಾರ್ಯನು ತನ್ನ ಪಿತಾಮಹನಾಗಿದ್ದುದರಿಂದ ಸಹ ವೆಂಕಟನು ತನ್ನ ತಂದೆಯನ್ನು ಸ್ತುತಿಸುವುದಕ್ಕೆ ಮೊದಲು ತನ್ನ ಅಜ್ಜನನ್ನು ನಮಸ್ಕಾರಪೂರ್ವಕ (ತುಳಿಯುತ) ಸ್ತುತಿಸಿದ್ದಾಗಿದೆ. ಆ ವೆಂಕಾರ್ಯನು ಅಂತಹ ಅಸಾಮಾನ್ಯ ಕವಿಯಾಗಿದ್ದುದರಿಂದಲೆ ಆತನ ಮಗ ಸುಬ್ಬನೂ, ಮೊಮ್ಮಗನಾದ ವೆಂಕಟನೂ ಬಾಲ್ಯದಲ್ಲಿಯೇ ಕಾವ್ಯಸಂಸ್ಕಾರವನ್ನು ಆನುವಂಶಿಕವಾಗಿ ಪಡೆದರೆಂದೂ ಸಹಜವಾಗಿ ಅನುಮಾನಿಸಬೇಕು.

ಮೇಲೆ ಹೇಳಿದ ವೆಂಕಟನ ಪದ್ಯದಲ್ಲಿ ಪ್ರಸ್ತುತವಾದ ವೆಂಕಾರ್ಯನ ರಾಮಾಯಣವು ೯೮೬೫ ಪದ್ಯಗಳುಳ್ಳ ದೊಡ್ಡ ಗ್ರಂಥ. ಇದಲ್ಲದೆ ಆ ವೆಂಕಾರ್ಯನು 'ಇಂದಿರಾಭ್ಯುದಯ', 'ಹನುಮದ್ವಿಲಾಸ', 'ಅಲಂಕಾರಮಣಿದರ್ಪಣ' ಮುಂತಾದ ಹಲವಾರು ಸಂಸ್ಕೃತ ಗ್ರಂಥಗಳನ್ನು ಸಹ ರಚಿಸಿದ ಮಹಾಕವಿ ಎಂದು ಕವಿಚರಿತ್ರೆಯಿಂದ ತಿಳಿಯುತ್ತೇವೆ. ಅಖಂಡ ವಿದ್ವಾಂಸನೂ, ಅತ್ಯಂತ ಮೇಧಾವಿಯೂ ಆಗಿದ್ದ ಈತನು ಹೈದರಾಲಿಯ ಮಂತ್ರಿಯಾಗಿದ್ದನೆಂದೂ ಕರ್ಣಾಟಕ ಕವಿಚರಿತ್ರೆಯಲ್ಲಿಯೂ ಮದ್ರಾಸು ಓರಿಯಂಟಲ್ ಲೈಬ್ರೆರಿಯವರಿಂದ ಪ್ರಕಾಶಿಸಲ್ಪಟ್ಟ ಈತನ ಆ ರಾಮಾಯಣ ಕಾವ್ಯದ ಮುನ್ನುಡಿಯಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಮೇಲೆ ಉದಾಹರಿಸಿದ ಪದ್ಯದಲ್ಲಿ ವೆಂಕಟನು 'ವೆಂಕಾರ್ಯ ಪ್ರಧಾನನಂ se' ಎಂದು ಹೇಳಿರುವುದರಿಂದ ಈತನು ಮಂತ್ರಿಯಾಗಿದೆ A ನೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ವೆಂಕಯ್ಯ, ವೆಂಕಾರ್ಯ, ವೆಂಕಟ ಎಂದು