ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೯೨ / ಕುಕ್ಕಿಲ ಸಂಪುಟ

ಸಾಮಾನ್ಯ ರೂಢಿಯಲ್ಲಿ ಕರೆಯಲಾಗುವ ಹೆಸರಿನ ಮೂಲರೂಪವು 'ವೆಂಕಟರಮಣ' ಎಂದಾಗಿದೆಯಷ್ಟೆ. ಅಜ್ಜನ ಹೆಸರನ್ನು ಬಹುಶಃ ಮೊಮ್ಮಗನಿಗೆ ಇಡುವ ರೂಢಿಯಂತೆ ಸುಬ್ಬನ ಮಗನಿಗೆ ವೆಂಕಟನೆಂಬ ಹೆಸರು ಪಿತಾಮಹನಾದ ಆ ವೆಂಕಾರ್ಯನಿ೦ದ ಕ್ರಮಪ್ರಾಪ್ತವಾಗಿ ಬಂದಿದೆ ಎಂದೂ ನ್ಯಾಯವಾಗಿ ಊಹಿಸಬಹುದು.

ಮೈರಾವಣಕಾಳಗದಲ್ಲಿ ವೆಂಕಟನು ಮೊದಲ ಪದ್ಯದಲ್ಲಿ 'ವೆಂಕಾರ್ಯ ಪ್ರಧಾನ'ನ್ನು ಸ್ತುತಿಸಿ ಮತ್ತಣ ಪದ್ಯದಲ್ಲಿಯೇ 'ಅಜಪುರದ ಬುಧಕುಲದೊಳುದಿಸಿದ ಸುಜನ ಜನಸುರಧೇನು ವೆಂಕಾರ್ಯಜನೆನಿಪ ಸುಬ್ಬಾಭಿಧಾನನ' ಎಂದು ಹೇಳಿರುವುದು ಪೂರ್ವೋಕ ವೆಂಕಾರ್ಯ ಪ್ರಧಾನನ್ನೆ ಎಂಬುದರಲ್ಲಿ ಸಂದೇಹ ಬರುವಂತಿಲ್ಲ. ಆದುದ ರಿಂದ ಆ ವೆಂಕಾರ್ಯ ಪ್ರಧಾನನೇ ಸುಬ್ಬನ ತಂದೆ ಎಂಬುದು ಸ್ಪಷ್ಟ. ತನ್ನ ಎರಡು ಕೃತಿಗಳಲ್ಲಿಯೂ 'ಮತಿವಿಶಾರದ', 'ಮಹದಧಿಕಮತಿ' ಎಂದು ಆತನ ಬುದ್ದಿ ಮತ್ತೆಯ ಪ್ರಶಸ್ತಿಯನ್ನೆ ವಿಶ್ಲೇಷಿಸಿ ಸುಬ್ಬನು ಹೊಗಳಿರವುದರ ಔಚಿತ್ಯವು ವೆಂಕಟನ ಪದ್ಯದಿಂದ ಸಮರ್ಥನೀಯವಾಗಿದೆ. ಅಂತಹ ಮೇಧಾವಿಯಾಗಿದ್ದುದರಿಂದಲೇ ಹೈದರಾಲಿಯು ಆತನಿಗೆ ಮಂತ್ರಿ ಪದವಿಯನ್ನು ಕೊಟ್ಟುದೆಂಬುದು ಸಂಭಾವ್ಯವೂ, ಸುಸಂಗತವೂ ಆಗಿದೆ ಎಂದು ಬೇರೆ ಹೇಳಬೇಕಾಗಿಲ್ಲವಷ್ಟೆ.

ಹೈದರಾಲಿಯ ಪ್ರತಾಪದ ಕಾಲವು ಕ್ರಿ. ಶ. ೧೭೫೦ರ ಅನಂತರ. ೧೭೬೩ರಲ್ಲಿ ಆತನು ಕೆಳದಿಯ ರಾಜ್ಯವನ್ನು ಹಿಡಿದು ತಾನೇ ಅರಸಾದನು. ಈ ಸುಮಾರಿಗೆ ವೆಂಕಾರ್ಯ ನನ್ನು ತನ್ನ ಮಂತ್ರಿಯಾಗಿ ಆತನು ನೇಮಿಸಿದ್ದಿರಬೇಕು. ಕವಿಚರಿತ್ರೆಯಲ್ಲಿ ಸುಮಾರು ೧೭೭೦ ಎಂದು ಕೊಟ್ಟಿರುವ ವೆಂಕಾರ್ಯನ ಕಾಲವೂ ಇದಕ್ಕೆ ಹೊಂದಿಕೆಯಾಗಿಯೇ ಇದೆ. ಹಾಗಿರುವಾಗ ಸುಬ್ಬನು ತನ್ನ 'ರುಕ್ಷ್ಮಿಣೀ ಸ್ವಯಂವರ'ದಲ್ಲಿ ಹೇಳಿದಂತೆ ಈ ವೆಂಕಾರ್ಯನು ಆಶ್ರಯಿಸಿಕೊಂಡಿದ್ದ ಕೆಳದಿಯ ರಾಜನು ಒಂದನೆಯ ಬಸವಪ್ಪನಾಗಿರಲು ಸಾಧ್ಯವಿಲ್ಲ.

ಕ್ರಿ. ಶ. ೧೭೩೯ರಿಂದ ೧೭೫೪ರ ವರೆಗೆ ಕೆಳದಿ ರಾಜ್ಯವನ್ನು ಆಳಿದವನು ಎರಡನೆಯ ಬಸವಪ್ಪ ನಾಯಕನು, ಆಮೇಲೆ ಮೂರು ವರ್ಷ ಇವನ ದತ್ತುಪುತ್ರನಾದ ಮೂರನೆಯ ಬಸವಪ್ಪನು ಆಳಿದ ಕಾಲ. ಈ ಇಬ್ಬರಲ್ಲಿ ಒಬ್ಬನ ಅಥವಾ ಇಬ್ಬರ ಕಾಲದಲ್ಲಿ ಸಹ ವೆಂಕಾರ್ಯನು ಅವರ ಆಶ್ರಯವನ್ನು ಪಡೆದುದಿರಬೇಕು. ಎರಡನೆಯ ಬಸವಪ್ಪನ ರಾಣಿಯು ನೀತಿಭ್ರಷ್ಟಳಾಗಿ ದತ್ತುಪುತ್ರನನ್ನು ಕೊಲ್ಲಿಸಿ ತನ್ನ ನಿರಂಕುಶ ಪ್ರಭುತ್ವವನ್ನು ಮೆರೆಯಿಸುತ್ತಿದ್ದ ಸಂದರ್ಭವು ಹೈದರಾಲಿಗೆ ಅನುಕೂಲವಾಯಿತೆಂದು ಚರಿತ್ರೆಯಿಂದ ತಿಳಿಯುತ್ತದೆ. ಎರಡನೆಯ ಬಸವಪ್ಪನ ಕಾಲದಲ್ಲಿ ಆತನನ್ನು ಆಶ್ರಯಿಸಿಕೊಂಡಿದ್ದು ರಾಣಿಯ ಕಾಲದಲ್ಲಿ ಪ್ರಾಯಶಃ ಪದಚ್ಯುತನಾಗಿದ್ದಿರಬಹುದಾದ ಅತ್ಯಂತ ಬುದ್ದಿ ಶಾಲಿಯೂ, ಸಮರ್ಥನೂ ಆಗಿದ್ದ ವೆಂಕಾರ್ಯನನ್ನು ಹೈದರಾಲಿಯು ಅಮಾತ್ಯನನ್ನಾಗಿ ನೇಮಿಸಿಕೊಂಡಿರಬೇಕೆಂದು ನ್ಯಾಯವಾಗಿ ಅನುಮಾನಿಸಬಹುದು. ಸುಬ್ಬನ ಬಾಲ್ಯದಲ್ಲಿ ಆತನು ರುಕ್ಷ್ಮಿಣೀಸ್ವಯಂವರವನ್ನು ರಚಿಸುವಾಗ ಕೆಳದಿಯ ಆ ರಾಜನ ಆಶ್ರಯದಲ್ಲಿದ್ದ ವೆಂಕಾರ್ಯನಿಗೆ ಅನಂತರ ಸುಬ್ಬನ 'ಪಾರಿಜಾತ' ಮತ್ತು ಹನುಮದ್ರಾಮಾಯಣಗಳನ್ನು ರಚಿಸುವಾಗ ರಾಜಾಶ್ರಯವು ತಪ್ಪಿರಬೇಕು. ಆದುದರಿಂದಲೆ ಈ ಎರಡು ಗ್ರಂಥಗಳಲ್ಲಿ ತನ್ನ ತಂದೆಯ ರಾಜಾಶ್ರಯದ ಕುರಿತು ಸುಬ್ಬನು ಪ್ರಸ್ತಾವಿಸಲಿಲ್ಲ. ತದನಂತರ ವೆಂಕಟನು 'ಮೈರಾವಣನ ಕಾಳಗ'ವನ್ನು ರಚಿಸುವಾಗ ವೆಂಕಾರ್ಯನು ಹೈದರಾಲಿಯ ಮಂತ್ರಿ