ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ನಾಟ್ಯಶಾಸ್ತ್ರ ಹಾಗೂ ಸಂಸ್ಕೃತ ನಾಟಕಗಳು / ೨೨೩

ಗೀತೆಗಳೂ ಉದ್ದುದ್ದವಾಗಿರುವುದಿಲ್ಲ. ಹಾಡುವ ಕ್ರಮದಲ್ಲಿಯೂ ಅರ್ಥಕ್ಕೆ ಕಷ್ಟ ವಾಗುವಂತೆ ಅಕ್ಷರಗಳನ್ನು ಎಳೆದೆಳೆದು ಉದ್ದ ಮಾಡಬಾರದು. ಹಾಡಿದ್ದನ್ನೇ ಪುನಃ ಬೇಕಿದ್ದರೆ ಹಾಡಬಹುದು.೩೨ ರಾಗಲಾಪನದಿಂದ ಉದ್ದ ಮಾಡಬಾರದು. ಕಾಲಯಾಪನ ಕ್ಕಿರುವ ಅಂತರಧ್ರುವಗಳಲ್ಲಿ ಮಾತ್ರ ಸಂದರ್ಭಕ್ಕೆ ತಕ್ಕಂತೆ ರಾಗಾಲಾಪನಪೂರ್ವಕ ಗೀತೆಗಳನ್ನು ವಿಸ್ತರಿಸಬಹುದು ಹೊರತು ಇತರ ಸಂದರ್ಭಗಳಲ್ಲಿ ಯಥಾಕ್ಷರವಾಗಿಯೇ ಹಾಡಬೇಕು.೩೩ ಈ ಗೀತೆಗಳೆಲ್ಲವೂ ದ್ರುತ, ಅರ್ಧದ್ರುತ, ಬಿಂದು ಇತ್ಯಾದಿ ಖಂಡಕಲಾ ಪ್ರಮಾಣದ ಭಂಗತಾಲಗಳಲ್ಲಿ ನಿಬದ್ಧವಾಗುವಂಥವು. ತಾಳದ ಘಾತಪಾತಗಳಿಗೆ ಸರಿಬೀಳುವಂತೆಯೇ ಗೀತಾಕ್ಷರಗಳ ಗುರುಲಘು ವಿನ್ಯಾಸವಿರಬೇಕು.೩೪ ತಾಳದ ಲಯಕ್ಕೆ ಸರಿಯಾದ ಯತಿ (ವಿರಾಮ), ತಾಳದ ಯತಿಗೆ (ಸೋತೋಗತಾದಿ) ಸರಿಯಾದ ಗತಿ, ತಾಳದ ಗುರುವಿಗೆ ಗೀತದ ಗುರ್ವಕ್ಷರ, ಲಘುವಿಗೆ ಲಕ್ಷರ, ಹೀಗೆಲ್ಲ ಕಟ್ಟು ನಿಟ್ಟಾಗಿರುವ ಗೀತೆಗಳನ್ನು ತಾಳಕ್ಕೆ ವಿಷಮವಾಗಿ ಹಾಡುವಂತಿಲ್ಲ. ನರ್ತನದ ಹಜ್ಜೆಗಳೂ, ಅಂಗವಿಕ್ಷೇಪಗಳೂ, ರೇಖೆಗಳೂ, ಶಾಖಾಭಿನಯಗಳೂ ತಾಳಕ್ಕೆ ಸರಿಯಾಗಿ ನಡೆಯು ತ್ತವೆ ವ.೩೫ ಎಲ್ಲವೂ ಒಟ್ಟಾಗಿ, 'ಅಲಾತಚಕ್ರ'ದಂತೆ ಏಕೀಭವಿಸಿ ರಸಭಾವಗಳಿಗೆ ದೀಪ್ತಿ ಯನ್ನು ಕೊಡುತ್ತವೆ.


೩೨. ನಹಿ ವರ್ಣಪ್ರಕರ್ಷಸ್ತು ಧ್ರುವಾಣಾಂ ಸಿದ್ಧಿರಿಷ್ಯತೇ
ಯಸ್ಮಾದರ್ಥಾನುರೂಪಾ ಹಿ ಧ್ರುವಾ ಕಾರ್ಯಾರ್ಥದರ್ಶಿಕಾǁ೨೭ǁ
ನೋ ವಾಪೃಥವಾ ಬಿಂದುರ್ಯೇ ಚಾನ್ಸ್ತು ಪ್ರಕರ್ಶಿಣ:
ತೇ ಧ್ರುವಾಣಾಂ ಪ್ರಯೋಗೇಷು ನ ಕಾರ್ಯಾ ಸ್ವಪ್ರಮಾಣತಃǁ೨೮ǁ
('ಶ್ಯೇನ', 'ಬಿಂದು' ಎಂಬವು ಗಾನವಿಸ್ತಾರವನ್ನು ಮಾಡುವ ಸ್ವರಾಲಂಕಾರಗಳು)
ಅಥವಾ ನೃತ್ಯಶೋಭಾರ್ಥಮಂಗಾನಾಂ ಪರಿವರ್ತನಂ
ಸಂಗೀತಸ್ಯ ಪ್ರಕರ್ತವ್ಯಂ ಲಯಸ್ಯ ಚ ವಿವರ್ತನಂǁ೨೯ǁ

(ನಾ. ಶಾ. ಅ. ೩೧)

ವ್ಯಾ- ಪರಿವರ್ತನಂ ಕ್ವಚಿದನುಮಪಿ ನೃತ್ಯ ಶೋಭಾರ್ಥ೦
ಕ್ರಿಯತ ಇತಿ | ಅತ ಏವ ಸಕಲಸ್ಯಾಪಿ ಗೀತಸ್ಯತ್ವವಿಲಂಬಿ
ತಾದೇರ್ಗೀತಶೋಭಾರ್ಥಂ ಪುನರಾವೃತ್ತಿರ್ಭವತೀತಿ |

೩೩. ದ್ರುತಗಮನೇ ಲಘುವರ್ಣಾ ವಿಲಂಬಿತಗ ಚ ದೀರ್ಘವರ್ಣಕೃತಃ ǁ
ಗುರ್ವಾದಿಸ್ತು ಗುರುಃ ಕಾರ್ಯೋ ಲಭ್ಯಾದಿಸ್ತು ಲಘುಸ್ತಥಾ
ವ್ಯಾ- ಸದ್ ವೃತ್ತ ಗುರು ಲಘುಸ್ಥಾನೇ ಯಥಾಸಂಖ್ಯಂ
ತಾಲೋಚಿತ ಗುರುಲಘುಯೋಜನಂ ಕಾರ್ಯಮಿತಿ |

೩೪. ಸತಾಲಂ ಚ ಧ್ರುವಾರ್ಥೇಷು ನಿಬರಂ ಸರ್ವಸಾಧಕಂ
ನಿಯತಾಕ್ಷರ ಸಂಬದ್ಧ ಛಂದೋಯತಿ ಸಮನ್ವಿತಂ
ನಿಬದ್ಧಂ ಚ ಪದಂ ಜೇಯಂ ಸತಾಲಪತನಾಕ್ಷರಂ

(ನಾ. ಶಾ. ಅ. ೩೧)

ಯಂ ಯಂ ಗಾತಾ ಸ್ವರಂ ಗಚ್ಛೇ ಮಾತೋದ್ಯರ್ವಿನಿರ್ದಿಶೇತ್
ಯತಿಪಾಣಿ ಸಮಾಯುಕ್ತಂ ಗುರುಲಘಕ್ಷರಾತಂǁ೨೯ǁ
೩೫. ಮಾತ್ರಾಂಶಕ ವಿಕಲ್ಪಸ್ತು ಧ್ರುವಾ ಪಾದೇಷು ಯೋ ಭವೇತ್
ಸತುಭಾಂಡೇನ ಕರ್ತವ್ಯಸ್ತಜ್ಞೆರ್ಗತಿಪರಿಕ್ರಮೇ
ಏವಂ ಗತಿಪ್ರಚಾರೇಷು ಕಾರ್ಯಂ ವಾದ್ಯಂ ಪ್ರಯೋಕ್ಕಭಿಸಿǁ೧೭೮ǁ