ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೪ /ಕುಕ್ಕಿಲ ಸಂಪುಟ

ಇನ್ನು ನಾಟಕಾರಂಭಕ್ಕೆ ಪೂರ್ವರಂಗ ಪ್ರಯೋಗದಲ್ಲಿಯೂ ಹಾಡತಕ್ಕ ಧ್ರುವಾ ಗೀತೆಗಳಿವೆ. ಸಂಸ್ಕೃತಪ್ರಾಯವಾದ ಆ ಗೀತೆಗಳು ಅಕ್ಕಿಯ ರಚನೆಗಳಲ್ಲ. ಅವುಗಳ ವರ್ಣಾಲಂಕಾರಾದಿ ವೈಶಿಷ್ಟ್ಯಗಳು ನಾಟಕಧ್ರುವದಲ್ಲಿರುವುದಕ್ಕಿಂತ : ಭಿನ್ನವಾದವು. ಎಲ್ಲವೂ ದೇವಸ್ತುತ್ಯಾಶ್ರಯವಾದ ಅರ್ಥವುಳ್ಳವು. ಅವುಗಳ ಗಾನವು ನಾಟಕಧ್ರುವಾಗಾನ ದಂತೆ ಶೋತೃರಂಜನೆಯೇ ಮುಖ್ಯೋದ್ದೇಶವಾಗಿರುವ, ರಸಭಾವೋಚಿತವಾದ ಲೌಕಿಕ ಗಾನವಲ್ಲ. ಅದು ಅದೃಷ್ಟ ಫಲೋದ್ದೇಶವುಳ್ಳ, ದೇವಪ್ರೀತ್ಯರ್ಥವಾದ ಗಾಂಧರ್ವ ಗಾನ. ತಾಳಗಳೂ (ಆಸಾರಿತ ವರ್ಧಮಾನಾದಿ) ಸುದೀರ್ಘ ಪ್ರಸ್ತಾರಗಳುಳ್ಳ ಮಾರ್ಗ ತಾಳಗಳೇ ಹೊರತು ನಾಟಕಧ್ರುವಕ್ಕೆ ಹೇಳಿದ ದ್ರುತಾದಿ ಖಂಡಕಾಲದ ತಾಲಪ್ರಭೇದ ಗಳಲ್ಲ. ಅಲ್ಲಿ ನಡೆಯತಕ್ಕ ಲಾಸ್ಯತಾಂಡವ ನರ್ತನಗಳು ಕೇವಲ ದೇವತಾ ಪ್ರೀತ್ಯರ್ಥ ವಾಗಿಯೇ ಇರುವಂಥವು. ಲಾಸ್ಯವಿಧಿಯಲ್ಲಿ ನಡೆಯುವ ಹಾಸ್ಯವಿನೋದಗಳೂ ದೇವರ ಹೆಸರಲ್ಲೇ ನಡೆಯತಕ್ಕವು. ನಾಟ್ಯಶಾಸ್ತ್ರದಲ್ಲಿ ವಿಸ್ತಾರವಾಗಿ ವರ್ಣಿಸಿರುವ ಆ ಪೂರ್ವ ರಂಗದ ಸ್ವರೂಪವನ್ನು ಸಾಧಾರಣವಾಗಿ ಹೀಗೆ ತಿಳಿಯಬಹುದು :

ಚತುರಸ್ರಾಕಾರದ ರಂಗಭೂಮಿಯ ಹಿಂಬದಿಯ ಅಗಲಕ್ಕೂ ಪರದೆ ಇಳಿಬಿಟ್ಟಿರು ತದೆ. ಪರದೆಯ ಎಡಬಲಗಳ ತುದಿಭಾಗಗಳಲ್ಲಿ, ಕ್ರಮವಾಗಿ ನಟರು ಹೋಗುವ ಮತ್ತು ಹೊರಡುವ ದ್ವಾರಗಳಿರುವುವು. ಇವಕ್ಕೆ ನೇಪಥ್ಯದ್ವಾರಗಳೆಂದು ಹೆಸರು. ದ್ವಾರದೇಶಗಳ ಮಧ್ಯಕ್ಕೆ, ಪರದೆಯ ಹಿಂಭಾಗದಲ್ಲಿ ಸಾಕಷ್ಟು ವಿಶಾಲವಾದ ಸ್ಥಳವಿರುತ್ತದೆ. ಇಲ್ಲಿ ಗಾಯಕವಾದಕರು ಕೂತಿರುತ್ತಾರೆ. ಆ ವಿಭಾಗಕ್ಕೆ ರಂಗಶೀರ್ಷಿಕೆ ಎಂದು ಹೆಸರು. ಇದಕ್ಕೆ ತಾಗಿ ಹಿಂದೆ ನೇಪಥ ಗೃಹ (ಗ್ರೀನ್ ರೂಂ) ಇರುವುದರಿಂದ ಪರದೆಯ ಹಿಂದಿರುವ ಭಾಗಕ್ಕೆಲ್ಲ, ಗಾಯಕ ವಾದಕರು ಕೂತಿರುವ ಭಾಗ ಸಮೇತ, ನೇಪಥ್ಯವೆಂದೇ ನಾಟಕ ಗಳಲ್ಲಿ ವ್ಯವಹರಿಸಲಾಗಿದೆ. ಪಾತ್ರಗಳ ಪ್ರವೇಶ ನಿಷ್ಕಾಮಗಳಲ್ಲಿ ದ್ವಾರಭಾಗಗಳಷ್ಟು ಮಾತ್ರ ತೆರೆಯನ್ನು ಸರಿಸಲಾಗುವುದು. ಗಾಯಕವಾದಕರಿರುವ ಮಧ್ಯಭಾಗವು ನಾಟಕ ಪ್ರಯೋಗಕಾಲದಲ್ಲಿ ತೆರೆಯೊಳಗೇ ಇರುತ್ತದೆ. (ಆಧುನಿಕ ನಾಟಕಗಳಲ್ಲಿ ಇರುವಂತೆ ದೃಶ್ಯ ಬದಲಾಯಿಸುವ ಬೇರೆ ಬೇರೆ ಚಿತ್ರದ ಪರದೆಗಳು ಆಗ ಇದ್ದಂತಿಲ್ಲ).

ಪೂರ್ವರಂಗದ ಆರಂಭಕ್ಕೆ ಗಾಯಕ ವಾದಕರೇ ನಿರ್ವಹಿಸುವ ನಿರ್ಗೀತ 'ಸಗೀತ'ಗಳೆಂಬ ವಾದ್ಯವಿಧಿಗಳು ಪರದೆಯ ಒಳಭಾಗದಲ್ಲಿ ನಡೆಯುವಂಥವು. ಆ


ಯದ್‌ವೃತ್ತಂತು ಭವೇದ್ಧಾನಂ ತದ್‌ವೃತ್ತಂ ವಾದ್ಯಮಿಷ್ಯತೇ
ಗೀತವಾದ ಪ್ರಮಾಣೇನ ಕುರ್ಯಾಚ್ಚಾಂಗವಿಚೇಷ್ಟಿತಂ|||೧೩೩||
ಯೋವಿಧಿರ್ಗಾನವಾದ್ಯಾನಾಂ ಪದಾಕ್ಷರಲಯಾನ್ವಿತಃ
ಏತನ್ನತ್ತಾಂಗಹಾರೇಷು ಕರ್ತವೂ ನಾಟ್ಯೋಕ್ಕಭಿ||೧೮೪||

(ನಾ, ಶಾ. ಅ. ೩೩೪)

೩೬. ನಾ, ಶಾ. ಅ. ೩೩ರ ಆರಂಭದ ವ್ಯಾಖ್ಯಾನ ನೋಡುವುದು:
“ಪೂರ್ವರಂಗೇ ಗಾಂಧರ್ವಮೇವ ಪ್ರಧಾನಂ”
“ನಾದೃಷ್ಟಾರ್ಥಂ ಧ್ರುವಾಪದಂ ಗಾಂಧರ್ವಪದವತ್ | ಅತ್ರ ಹಿ
ಸಂಭವತ್ ಪದೇ ಸ್ತೋತ್ರಾಪೇಕ್ಷಾ | ಧ್ರುವಾಗಾನೇ ತು ತದವಗಮಂ
ಪ್ರಧಾನಂ ಸಾಮಾಜಿಕಂ ಪ್ರತಿ”