ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦ / ಕುಕ್ಕಿಲ ಸಂಪುಟ

ಮೃದುಶಬ್ದವಿಧಾನಂ ಚ ಕವಿ: ಕುರ್ಯಾತ್ತು ನಾಟಕಂ ǁ
ಚೇಕ್ರೇಡಿತಪ್ರಕೃತಿಭಿಃ ವಿಕೃತೈಶ್ಚ ರಬ್ಬೆ
ಯುಕ್ತಾ ನ ಭಾಂತಿ ಲಲಿತಾ ಭರತಪ್ರಯೋಗಾ: |
ಕೃಷ್ಣಾಜಿನಾಕ್ಷರುರುಚರ್ಮಧರೈರ್ಫುತಾಕೈ
ವೇಶ್ಯಾ ದ್ವಿಜೈರಿವ ಕಮಂಡಲುದಂಡಹಸೆ: ǁ

ಅರ್ಥ : ಕಠಿಣ ಅರ್ಥವುಳ್ಳ, ಉಚ್ಚಾರಕ್ಕೆ ತೊಡಕಾದ ವಿಕೃತ ಶಬ್ದಪ್ರಯೋಗಗಳಿಂದ ರಚಿಸಿದ ದೃಶ್ಯಕಾವ್ಯಗಳು, ಕೃಷ್ಣಾಜಿನ, ರುದ್ರಾಕ್ಷ ಮಾಲೆಗಳನ್ನು ಧರಿಸಿಕೊಂಡು ಹೋಮಾಹುತಿಯ ತುಪ್ಪದ ಜಿಡ್ಡನ್ನು ಮೈಗೆ ಮೆತ್ತಿಕೊಂಡು, ಕೈಯಲ್ಲಿ ದಂಡಕಮಂಡಲು ಗಳನ್ನು ಧರಿಸಿದ ಗಡ್ಡ ಬಿಟ್ಟ ಬ್ರಾಹ್ಮಣರೊಂದಿಗೆ, ಸೂಳೆ ಇದ್ದರೆ ಹೇಗೋ ಹಾಗೆ ಅಭಾಸವಾಗುವುದು ಎಂದು ಭರತ ಮುನಿಯು ಹೋಲಿಸಿದ ಈ ಮಾತು ಎಷ್ಟೊಂದು ಮಾರ್ಮಿಕವಾಗಿದೆ.

ಹೀಗಿದ್ದರೂ ಭಾಸ, ಕಾಳಿದಾಸಾದಿ ಮಹಾಕವಿಗಳ ನಾಟಕಗಳೆಲ್ಲ ಈ ಭರತೋಕ್ತಿ ಯನ್ನು ಉಲ್ಲಂಘಿಸಿ, ಸಾಮಾನ್ಯರಿಗೆ ಅಂತಿರಲಿ, ವಿದ್ವಾಂಸರಿಗೂ ಅರ್ಥ ಮಾಡಲು ಕಷ್ಟವಾಗುವಂತಹ ಕಠಿಣ ಶಬ್ದಗಳನ್ನು ಪ್ರಯೋಗಿಸಿ, ಕ್ಲಿಷ್ಟೋಚ್ಚಾರದ ಜಟಿಲ ಛಂದಸ್ಸು ಗಳನ್ನು ಉಪಯೋಗಿಸಿ ಉಪಯೋಗಿಸಿ ತಮ್ಮ ವಿದ್ವತ್ತನ್ನು ಮೆರೆಯಿಸಿದ್ದು ಕಂಡುಬರುತ್ತದೆ. ಆದ್ದರಿಂದಲೇ ಬಹುಶಃ ಆ ಸಂಸ್ಕೃತ ನಾಟಕಗಳು ಸಾವಿರ, ಎರಡು ಸಾವಿರ ವರ್ಷಕ್ಕೆ ಹಿಂದೆಯೇ ಪ್ರಯೋಗಪ್ರಾಶಸ್ತ್ರವನ್ನು ಕಳೆದುಕೊಂಡು, ಕೇವಲ ವಿದ್ವಾಂಸರಿಗೆ ಅಷ್ಟೇ ಸ್ವಾರಸ್ಯಕರವಾದ ಓದುವ ನಾಟಕಗಳಾಗಿ ಉಳಿದು ಬಂದಿರುವುದಾಗಿದೆ ಎಂದು ಯಾರೂ ಊಹಿಸಿಕೊಳ್ಳಬಹುದಲ್ಲವೆ? ಒಂದು ವೇಳೆ ಆ ಕಾಲದಲ್ಲಿ ಆ ನಾಟಕಗಳು ಪ್ರಯೋಗ ಪ್ರಶಸ್ತವಾಗದಿದ್ದರೂ ಅವು ರಾಜಮಹಾರಾಜರುಗಳು ನಿರ್ಮಿಸಿರುವ ಭವ್ಯ ನಾಟ್ಯ ಮಂದಿರಗಳಲ್ಲಿ ಅಭ್ಯಂತರ ಪ್ರಯೋಗಗಳಾಗಿದ್ದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಅಷ್ಟಲ್ಲದೆ ಪ್ರತಿಭಾವಂತರಾದ ಈ ಮಹಾಕವಿಗಳು ತಮ್ಮ ನಾಟಕಗಳಲ್ಲಿ ಪಾಂಡಿತ್ಯ ಪ್ರತಿಭೆಯ ಪ್ರದರ್ಶನಕ್ಕೂ ಎಂಬಂತೆ ನಾಟಕ ಪಾತ್ರಗಳ ಸಂಭಾಷಣೆಯ ವಾಕ್ಯಗಳನ್ನು ತಾವೇ ರಚಿಸಿದ್ದಾಗಿದೆ ಎಂಬುದು ಶಾಸ್ತಾನುರೋಧವಾಗಿ ನೋಡಿದಲ್ಲಿ ನಿಜವೆಂದು ಕಂಡುಬರುತ್ತದೆ. ಅವು ರಸವತ್ತಾಗಿರುವುದು ಸರಿ. ಆದರೂ ಓದುವುದಕ್ಕೆ ಲಾಯಕ್ಕು ಹೊರತು ಆಡುವುದಕ್ಕೆ ಅಲ್ಲ ಎಂಬುದನ್ನು ವಿದ್ವಾಂಸರು ಒಪ್ಪಲೇಬೇಕು. ಪಕ್ಷಪಾತ ವಿಲ್ಲದೆ ಹಾಗೆ ಒಪ್ಪಿಕೊಂಡೂ ಇದ್ದಾರೆನ್ನಿ.

ದೇಶಭಾಷೆಗಳಲ್ಲಿ ಅಥವಾ ಜಾತಿಭಾಷೆಗಳಲ್ಲಿ ಜನಸಾಮಾನ್ಯರಿಂದ, ಜನ ಸಾಮಾನ್ಯರಿಗಾಗಿ ಸಾಮಾನ್ಯ ಕವಿಗಳಿಂದ ರಚಿಸಲ್ಪಟ್ಟು ನಡೆದು ಬಂದಿರುವ ಬಾಹ್ಯ ಪ್ರಯೋಗಗಳಾದರೆ ಅಂದಿನಿಂದ ಇಂದಿನವರೆಗೂ ಭರತೋಕ್ತ ಸಂಪ್ರದಾಯದಲ್ಲಿಯೇ ಹೆಚ್ಚಿನ ಮಟ್ಟಿಗೆ ಉಳಿದುಕೊಂಡು ಬಂದಿರುವುದು ಅಷ್ಟೇ ಸತ್ಯ. ನಮ್ಮ ಬಯಲಾಟ ಸಂಪ್ರದಾಯವೇ ಇದಕ್ಕೆ ಸಾಕ್ಷಿಯಾಗಿದೆ. ದಿ| ಡಾ| ರಾಘವನ್ ಅವರಂತಹ ಕೆಲವೇ ಮಂದಿ ಪ್ರಖ್ಯಾತ ಸಂಸ್ಕೃತ ವಿದ್ವಾಂಸರು ಹಾಗೂ ಪ್ರಾಚ್ಯ ವಿದ್ಯಾವಿಮರ್ಶಕರು ನಮ್ಮ ದಕ್ಷಿಣೋತ್ತರ ಜಿಲ್ಲೆಗಳ ಬಯಲಾಟದ ಸಂಪ್ರದಾಯವು ಭರತೋಕ್ತಿ ಮಾರ್ಗದಲ್ಲೇ ಇರುವುದೆಂಬುದನ್ನು ಮನಗಂಡಿದ್ದಾರೆ. ಆರಭಟೀವೃತ್ತಿಗೆ ನಿರ್ದಿಷ್ಟವಾದ 'ಲಾಗ', 'ಧ್ಯಾಡಲಾಗ', 'ಭ್ರಮರಿ', 'ವಿದುತ್‌ಭ್ರಾಂತ' ಮುಂತಾದ ಯುದ್ಧ ಚಾರೀ ಭೇದಗಳು ರಂಗಪರಿಕ್ರಮದ ಉದ್ಧತ ಗತಿಭೇದಗಳು, ಭೀಕರ ವೇಷಗಳು, ರೌದ್ರ ನಾಟ್ಯವಿಧಿಗಳೆಲ್ಲಾ