ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೪ /ಕುಕ್ಕಿಲ ಸಂಪುಟ

ಹೀಗೆ ಏಲಾದಿ ದೇಶೀ ಪ್ರಬಂಧಗಳಲ್ಲಿರುವುದು ಶುದ್ಧ ಗೀತಗಳ ಶಾಸ್ತ್ರೋಕ್ತ ಲಕ್ಷಣ ವಲ್ಲವೆಂದೂ ಅವುಗಳ ರಚನೆಯಲ್ಲಿ ವೈದಿಕ ಸಾಮಗೀತಗಳ ಅವಯವ ಸಾದೃಶ್ಯವಿದೆ ಎಂದೂ ಪ್ರಾಚೀನ ಶಾಸ್ತ್ರಗ್ರಂಥಗಳಿಂದ ತಿಳಿಯಬಹುದಾಗಿದೆ. ಸಂಕ್ಷೇಪವಾಗಿ ಅದು ಹೀಗೆ ಎನ್ನಬಹುದು-ವೈದಿಕ ಸಾಮಗೀತದಲ್ಲಿ ಪ್ರಸ್ತಾವ, ಉಥ, ಪ್ರತೀಹಾರ, ಉಪದ್ರವ, ನಿಧನ ಎಂಬ ಐದು ಅವಯವಗಳಿರುವುವು. ಇದಕ್ಕೆ ಹೋಲಿಕೆಯಾಗಿ ಏಲಾಪ್ರಬಂಧ ದಲ್ಲಿಯೂ ಐದು ಪಾದಗಳಿರುತ್ತಿದ್ದು ಆ ಪಾದಗಳಿಗೆ ಕ್ರಮವಾಗಿ ಉತ್ಸಾಹ, ಅನುಾಹ, ಸಂಶೋಧ ಧ್ರುವಕ, ಆಭೋಗ ಎಂಬ ಹೆಸರುಗಳಿದ್ದುವು. ನಾನ್ಯದೇವನ 'ಭರತ ಭಾಷ್ಯ'ದಲ್ಲಿ ಅದರ ವಿವರಣೆ ಹೀಗಿದೆ- (ಇದು ಸಂಗೀತ ರತ್ನಾಕರಕ್ಕಿಂತ ಪ್ರಾಚೀನ ಗ್ರಂಥ)-
ಉದ್ದ್ರಾಹಶ್ಚಾಪ್ಯನುತ್ಸಾಹಃ ಸಂಬೋಧೋ ಧ್ರುವಕಂ ತಥಾ |
ಆಭೋಗ: ಪಂಚಪಾದಾಃ ಸ್ಯುರೇಲಾಯಾಃ ಕಶ್ಯಪೋದಿತಾಃ ||
ಪ್ರಸ್ತಾವಶ್ಚ ಉದ್ಗೀಥಂ ಚ ಪ್ರತಿಹಾರಉಪದ್ರವಃ
ಸಂಬೋಧನಂ (ನಿಬಂಧನಂ) ಚೇತಿ ಪಂಚ... ಸಾಮಗೀತಕೇ
ಪ್ರಸ್ತಾವಃ ಸಾಮಗೀತೇಷು ಏಲಾಸೂದ್ಗ್ರಾಹ ಉಚ್ಯತೇ
ಇತರಾಣಿ ಯಥಾಸಂಖ್ಯಂ ಅನುದ್ಗ್ರಾಹಾದಿ ಸಂಜ್ಞಯಾ
ಏಲಾದಿ ಪ್ರಬಂಧಗಳ ಗಾನಕ್ರಮದಲ್ಲಿಯೂ ಕೆಲಮಟ್ಟಿಗೆ ಸಾಮಗಾನಕ್ರಮದ ಹೋಲಿಕೆ ಇದೆಯೆಂದೂ ತಿಳಿಯಬಹುದಾಗಿದೆ. ಉದಾ :
ಋಗಕ್ಷರಂ ಯಥಾಸಾಮ್ನಿ ತಕಾರೇಣ ವಿಭಜ್ಯತೇ |
ತಥೈವ ತೇನಯಾಗೀತಂ ವಿಭಜ್ಯ ಪ್ರತಿಗೀಯತೇ
ಇದು ದೇಶೀಯ (ಶುದ್ಧ ಸೂಡ) ಗೀತಗಳಲ್ಲಿ ಪ್ರಥಮವೂ ಪ್ರಧಾನವೂ ಆದ ಏಲಾಪ್ರಬಂಧದ ಲಕ್ಷಣ, ಸಾಮದಲ್ಲಿ ಋಕ್ಕುಗಳನ್ನು ಹಾಡುವಾಗ ಗೇಯಾನುಕೂಲದ ವಿಭಾಗಕ್ಕಾಗಿ ತಕಾರವನ್ನು ಅಲ್ಲಲ್ಲಿ ಸೇರಿಸುತ್ತಿದ್ದಂತೆ ಏಲಾಗಾನದಲ್ಲಿ ತೇನ ಎಂಬ ಅಕ್ಷರಗಳನ್ನು ಬಳಸಲಾಗುತ್ತಿತ್ತು ಎಂದು ಇದರ ಅರ್ಥ. ಇದೂ ಅಲ್ಲದೆ ಸಾಮಾದಿ ಶುದ್ಧ ಗೀತಗಳನ್ನು ಹಾಡುವಾಗ ಪಾದಾರಂಭಾದಿ ಉಪಕ್ರಮದಲ್ಲಿ ಕಂಠವನ್ನು ಗ್ರಹಸ್ವರಕ್ಕೆ ಹೊಂದಿಸಿ ಸ್ಥಿರಪಡಿಸಿಕೊಳ್ಳುವ ಉಪೋಹನ ಕ್ರಮಕ್ಕೆ ಸದೃಶವಾಗಿ ಏಲಾದಿ ಗಾನ ದಲ್ಲಿಯೂ 'ರಂಗ' ಪ್ರಯೋಗವೆಂಬ ಕ್ರಮವಿತ್ತು ಎಂದು ಸಹ ಭರತಭಾಷ್ಯದಿಂದ ತಿಳಿಯ ಬಹುದಾಗಿದೆ. ಹೀಗೆಲ್ಲ ರಚನೆಯಲ್ಲಿ ಮತ್ತು ನಿರೂಪಣೆಯಲ್ಲಿ ಸಾಮಗೀತದ ಅವಯವ ಸಾದೃಶ್ಯವಿರುವುದರಿಂದ ಶುದ್ಧಪ್ರಬಂಧ ಎಂಬ ಹೆಸರು ವ್ಯವಹಾರದಲ್ಲಿರುವುದು ಅಸಮ್ಮತವಲ್ಲ ಎಂದೇ ಶಾರ್ಙ್ಗದೇವನು ಆ ಶ್ಲೋಕದಲ್ಲಿ ಹೇಳಿದುದಿರಬೇಕು ಎಂಬುದ ರಲ್ಲಿಯೂ ಸಂದೇಹ ಕಾಣುವುದಿಲ್ಲ.
ಮೂಲತಃ ದೇಶೀತಾಳಗಳಿಗೆ ಅನ್ವರ್ಥವಾಗಿ ಬಂದ ಸಾಲಗ ಎಂಬ ಹೆಸರೇ ಪ್ರಬಂಧಗಳಿಗೂ ರೂಢಿಯಾಗಿರುವುದು ಸಹಜವೇ ಸರಿ. ದೇಶೀಯ ತಾಳ ಎಂಬ ಅರ್ಥವು


೧. ಉಪೋಹ್ಯತೇ ಸ್ವರೋಯಸ್ಮಾದೇನಗೀತಂಪ್ರವರ್ತತೇ
ತಸ್ಮಾದುಪೋಹನಂಜೇಯಂ ಸ್ಥಾಯಿಸ್ಟರಸಮಾಶ್ರಯಂ (ಭ. ನಾ.)
೨. ರಂಗಪ್ರಬೋಧಕಂ ಬೀಜಂ ಜೀವವತ್ ಕ್ಯಾಪಿ ವಿನ್ಯಸೇತ್ | ಗೀತಂ ರಂಗವಿನಿರ್ಮುಕ್ತಂ ನಪ್ರೋತೃಸುಖದಂಭವೇತ್ (ಏಲಾದಿ ದೇಶಿಕಾಗೀತಗಾನಕ್ರಮ, ಭರತಭಾಷ್ಯ)