ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

17

'ಬೆದಂಡೆ - ಚತ್ತಾಣ'

ಪದ್ಯಕಾವ್ಯ-ಚಂಪೂಕಾವ್ಯ, ಪಾಡುಗಬ್ಬ-ಬಾಜನೆಗಬ್ಬ, ವರ್ಣಕ-ವಸ್ತುಕ, ಎಂಬಂತೆ ಲಕ್ಷಣಗ್ರಂಥಗಳಲ್ಲಿ ಕಾಣುವ ಪುರಾತನ ಕನ್ನಡಕಾವ್ಯಭೇದಗಳಲ್ಲಿ ನಮಗೆ ಉಳಿದು ಬಂದಿರುವವೆಂದರೆ ಪ್ರಾಯಶಃ ಚಂಪೂ ಪ್ರಬಂಧಗಳೇ ಆಗಿರುವುದರಿಂದ, ಅಂದಿನ ಪದ್ಯಕಾವ್ಯ ಹಾಗೂ ಪಾಡುಗಬ್ಬಗಳ ಸ್ವರೂಪ ಹೇಗಿದ್ದಿತ್ತೆಂಬುದು ಯಥಾರ್ಥ ಕಲ್ಪನೆಗೆ ಸಿಗುವುದಿಲ್ಲ. ಲಕ್ಷಣ ಗ್ರಂಥಗಳಲ್ಲಿಯೂ ಆ ಕುರಿತು ಹೆಚ್ಚಿನ ಮಾಹಿತಿ ದೊರೆಯುವು ದಿಲ್ಲ. ಕವಿರಾಜಮಾರ್ಗದಲ್ಲಿ, ಪರಮ ಶ್ರೀವಿಜಯಕವೀಶ್ವರ ಪಂಡಿತ ಚಂದ್ರಲೋಕ ಪಾಲಾದಿಗಳಾ ನಿರತಿಶಯವಸ್ತುವಿಸ್ತರವಿಚರನೆಗಳು ಮಾರ್ಗ ಪದ್ಧತಿಯ ಪದ್ಯಕಾವ್ಯಕ್ಕೆ ಉದಾಹರಣೆಗಳಾಗಿವೆಯೆಂದೂ, ಸಾಮಯಿಕ ಲಕ್ಷ್ಮಮಾರ್ಗದಲ್ಲಿ 'ಬೆದಂಡೆ' ಮತ್ತು 'ಚತ್ತಾಣ' ಎಂಬ ಹೆಸರುಗಳಿಂದ ಪ್ರಸಿದ್ಧವಾಗಿದ್ದ ಎರಡು ಪ್ರಭೇದಗಳು, ಅಧುನಾ ಪ್ರಸಿದ್ಧ ಪದ್ಯಕಾವ್ಯಗಳಿಗೆ ಲಕ್ಷ್ಯಗಳಾಗಿವೆ ಎಂದೂ ಆ ಹಿಂದಿನ ಲಾಕ್ಷಣಿಕರೇ ಪರಿಗಣಿಸಿರು ತಾರೆ ಎಂದಿದೆ. ಮತ್ತು ಬೆದಂಡೆ, ಚತ್ತಾಣಗಳಲ್ಲಿರತಕ್ಕ ಛಂದೋವಿಶೇಷಗಳನ್ನೂ ಸೂಚಿಸಿದೆ. ಕಾವ್ಯಾವಲೋಕನದಲ್ಲಿ ನಾಗವರ್ಮನೂ ಬೆದಂಡೆಯ ಲಕ್ಷಣವನ್ನು ಕೊಟ್ಟಿರು ತ್ತಾನೆ. ಆ ಪ್ರಕಾರ, ಇವುಗಳ ಸ್ವರೂಪ ವೈಶಿಷ್ಟ್ಯಗಳೇನಿದ್ದಿರಬಹುದು, ಈ ಹೆಸರುಗಳ ಅರ್ಥ ಹಾಗೂ ಔಚಿತ್ಯಗಳೇನಿದ್ದಿರಬೇಕು ಎಂಬುದನ್ನು ಯಥಾಮತಿ ಪರಿಶೀಲಿಸುವುದು ಈ ಲೇಖನದ ವಿಷಯವಾಗಿವೆ.
ಕವಿರಾಜಮಾರ್ಗದಲ್ಲಿ ಇವುಗಳ ಲಕ್ಷಣಗಳನ್ನು ಹೇಳುವ ಆ ಮೂರು ಪದ್ಯಗಳು ಹೀಗಿವೆ :
ನುಡಿಗೆಲ್ಲಂ ಸಲ್ಲದ ಕ
ನ್ನಡದೊಳ್ ಚತ್ತಾಣಮುಂ ಬೆದಂಡೆಯುಮಂದೀ
ಗಡಿನ ನೆಗಲಳ್ತೆಯ ಕಬ್ಬದೊ
ಳೊಡಂಬಡಂ ಮಾಡಿದರ್‌ ಪುರಾತನಕವಿಗಳ್
|| ೩೩ || ಕಂದಮುಮಮಳಿನ ವೃತ್ತಮು
ಮೊಂದೊಂದಡಗೊಂಡು ಜಾತಿಜಾಣೆಸೆಯೆ ಬೆಡಂ
ಗೊಂದಿಮೊರೊಳಮರ ಪೆಳಲ್
ಸುಂದರರೂಪಿಂ ಬೆದಂಡೆಗಬ್ಬಮುಮಕ್ಕುಂ

ಕಂದಂಗಳ್ ಪಲವಾಗಿರೆ
ಸುಂದರವೃತ್ತ೦ಗಳಕ್ಕರಂ ಚೌಪದಿ ಮ
ತ್ವಂ ದಲ್ ಗೀತಿಕೆ ತಿವದಿಗ
ಳಂದಂಬೆಸೆಯೆ ಹೇಳ್ಕೊಡದು ಚತ್ತಾಣಂ
|| ೩೪ || || ass 11
ಮೊದಲನೆಯ ಪದ್ಯದಲ್ಲಿ 'ನುಡಿಗಲ್ಲಂ ಸಲ್ಲದ ಕನ್ನಡದೊಳ್' ಎಂಬ ಮಾತಿಗೆ ಉದ್ದಿಷ್ಟಾರ್ಥವೇನೆಂಬುದು ನಿರ್ಣಯವಾಗುವುದಿಲ್ಲ. ಆದರೆ,ಇದರ ಹಿಂದಿನ