೨೭೦ / ಕುಕ್ಕಿಲ ಸಂಪುಟ
ಮೊದಲು ವಿಸ್ತಾರವಾಗಿ ಬರೆದದ್ದಾಗಿದೆ. ('ಸೂಡ-ಸೂಳಾದಿ-ಸಾಲಗ' - 'ಸವಿನೆನಪು ದಿ. ಟಿ. ಎಸ್. ವೆಂಕಣ್ಣಯ್ಯನವರ ಸ್ಮಾರಕ ಗ್ರಂಥ.)
ನಮ್ಮ ಆಂಧ್ರ ಮತ್ತು ಕೇರಳಗಳು ಸಂಸ್ಕೃತ ನಾಟಕ ಪ್ರಯೋಗವನ್ನು ಕೊನೆಯ ಗಳಿಗೆಯವರೆಗೂ ಉಳಿಸಿಕೊಂಡವು. ಕ್ರಮೇಣ ಅದನ್ನೇ ದೇಶಿಗೂ ಪರಿವರ್ತಿಸಿಕೊಂಡವು. ಆಂಧ್ರದಲ್ಲಿ ಅದು ಯಕ್ಷಗಾನವಾಯಿತು. ಕೇರಳದಲ್ಲಿ ರಾಮನಾಟ್ಟಂ ಅಥವಾ ಕಥಕಳಿ ರೂಪವಾಗಿ ಬಂತು. ಯಕ್ಷಗಾನ ಪದ, ಕಥಕಳಿಯ ಪದ ಇವುಗಳೊಳಗೆ ಭೇದವಿಲ್ಲ. ಒಂದೇ ರಚನೆ ಒಂದೇ ರೀತಿ, ಆಂಧ್ರ ಯಕ್ಷಗಾನ ಸುಕುಮಾರ ಪ್ರಾಯವಾದರೆ ಕೇರಳದ್ದು ಆವಿದ್ದ ಪ್ರಯೋಗ, ಭರತನ ವೃತ್ತಿವಿಭಾಗದಲ್ಲಿ ಉತ್ತರಕ್ಕೆ ಹೇಳಿದ 'ಆರಭಟಿ' ಅಲ್ಲಿ ನಷ್ಟವಾದ್ದನ್ನು ಕೇರಳ ತುಂಬಿಕೊಂಡಿತು.
ಯಕ್ಷಗಾನ ಪದಗಳಿಗೂ ಸಂಗೀತದ ಕೀರ್ತನೆಗಳಿಗೂ ರಚನೆಯಲ್ಲಿ ವ್ಯತ್ಯಾಸವಿಲ್ಲ. ಇದು ಪ್ರತ್ಯಕ್ಷ ತಿಳಿಯುವ ವಿಚಾರ. ಪುರಂದರಾದಿ ಹರಿದಾಸರ ಪದಗಳಾದರೂ ಇವಕ್ಕಿಂತ ಭಿನ್ನವಲ್ಲ. ಎಲ್ಲವೂ ಸೂಡ ಸಂಪ್ರದಾಯದ ಪರಂಪರೆ.
ಪದ-ಕೀರ್ತನೆ ಎಂಬ ಭಿನ್ನ ವ್ಯವಹಾರವೇಕೆ? ಹಾಗೂ ಯಕ್ಷಗಾನವೆಂಬ ಹೆಸರು ಬೇರೆ ಹುಟ್ಟಿತೇಕೆ? ಎಂಬ ಪ್ರಶ್ನೆ. ನೃತ್ಯೋದ್ದಿಷ್ಟವಾದುದು ಪದ ಎಂದೂ ಮೊದಲೇ ಹೇಳಿದೆವು. ಕೇವಲ ಸಂಗೀತಕ್ಕಿರುವ ಸ್ತುತಿಪದಗಳಾದರೆ ಕೀರ್ತನೆಗಳು, ಆಂಧ್ರದಲ್ಲೇ ಉಂಟಾಯಿತು ಈ ವಿಭಾಗ, ಸಂಕೀರ್ತನ ಪಿತಾಮಹ ತಿರುಪತಿ ಅಣ್ಣಮಾಚಾರ್ಯರಿಗಿಂತ ಹಿಂದೆಯೇ ಉಂಟಾಗಿತ್ತು. ಇದನ್ನು ಅವರೇ ಹೇಳಿದ್ದಾರೆ. ಬಹುವಿಧ ತಾಳಗಳಲ್ಲಿರುವ ಅನೇಕ ಪದ್ಯಗಳ ಮಹಾಪ್ರಬಂಧವು ಯಕ್ಷಗಾನವೆಂದು ಪೂರ್ವದ ಸಂಕೀರ್ತನಾ ಚಾರ್ಯರ ವಿಭಾಗ ಎನ್ನುತ್ತಾರೆ-
೧.ಯಕ್ಷಗಾನ ಪದಂಬುಲವಿಧಮುನ
ಸಮುಚಿತಾನೇಕವಿಧ ತಾಳಸಂಗತುಲನು
ನವರಸಾಲಂಕ್ರಿಯಾ ಸವರ್ಣ೦ಬುಲಗುಚು
ನಲರುನನಿ ಸಂಕೀರ್ತನಾಚಾರ್ಯಡನಿಯೆ |
(ತಾಳಪಾಕ ಕವಿಕುಟುಂಬ ಕೃತಿಸಮುಚ್ಚಯಮು- ತಿರುಪತಿ ದೇವಸ್ಥಾನ)
೨.ಯಕ್ಷಗಾನ೦ಬುನನ್ ವಲಯುಪದಂಬುಲು, ದರುವುಲು, ನೇಲ
ಲು, ಧವಳಂಬುಲು, ಮಂಗಳಹಾರತುಲು, ಶೋಭನಂಬುಲು,
ನುಯ್ಯಾಲಜೋಲುಲು, ಜಕ್ಕುಲರೇಕುಪದಂಬುಲು, ಕಂದವೃತ್ತಾ
ದುಲು, ಚಂದಮಾಮಸುದ್ದುಲು, ಅಷ್ಟಕಂಬುಲು, ಏಕಪದ,
ದ್ವಿಪದ, ತ್ರಿಪದ, ಚತುಷ್ಪದ, ಷಟ್ಟದಾಷ್ಟ ಪದುಲು ನಿವಿ
ಯಾದಿಗಾಗಲ್ಲು ನನ್ನಿಯುಲಯಪ್ರಮಾಣ
ಬುಲು ನೊಪ್ಪಿಮೃದುಮಧುರ ರಚನಲ ಪ್ರಸಿದ್ಧಂಬೈನ
ಕವಿತ್ವಂಬುಲು-
('ಲಕ್ಷಣದೀಪಿಕಾ' -ಪ್ರಾಚ್ಯಲಿಖಿತ ಪುಸ್ತಕಭಂಡಾರ ಡಿ. ನಂ. ೧೩೨೯)