ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

1 ಸಂಗೀತ ರತ್ನಾಕರ - ವ್ಯಾಖ್ಯಾನ | ೨೭೭ ನಿಗಮೇಷು ಚತುರ್ಥ್ಯಾಂತು ವಿಶಂತಿ ಸಮಪಾಃ ಕ್ರಮಾತ್ ||
ಶ್ರುತಿದ್ವಾವಿಂಶತಾವೇವಂ ಸಾರಣಾನಾಂ ಚತುಷ್ಟಯಾತ್ |
ಧ್ರುವಾಶ್ರುತಿಹು ಲೀನಾಯಾಮಿಯತ್ತಾಜ್ಞಾಯತೇ ಸ್ಸುಟಂ ||
ಅತಃ ಪರಂ ತು ರಕ್ತಿಂ ನ ಕಾರ್ಯಮಪಕರ್ಷಣಂ
|| sa || ಈ ಎರಡನೇ ಸಾರಣೆಯಲ್ಲಿ ಚಲವೀಣೆಯ ಸ್ವರಗಳು ಧ್ರುವವೀಣೆಯ ಸ್ವರಗಳಿಗಿಂತ ಎರಡು ಶ್ರುತಿಗಳಷ್ಟು ಕೆಳಗೆ ಇಳಿಯುವಾಗ ಚಲವೀಣೆಯ ಗ, ನಿ ಸ್ವರಗಳು ಎರಡು ಶ್ರುತಿಯಂತೆ ಕಳೆದುಕೊಂಡುದುದರಿಂದ ಧ್ರುವವೀಣೆಯಲ್ಲಿರುವ 'ರಿ, ಧ' ಸ್ವರಗಳಲ್ಲಿ ಸೇರುತ್ತವೆ. ಇದೇ ರೀತಿ ಮೂರನೇ ಸಾರಣೆಯನ್ನು ಮಾಡುವಾಗ ಚಲವೀಣೆಯ ರಿ ಮತ್ತು ಧ ಸ್ವರಗಳು ಧ್ರುವವೀಣೆಯ ಸ ಮತ್ತು ಪ ಸ್ವರಗಳನ್ನು ಸರಿಯಾಗಿ ಸೇರುತ್ತವೆ. ನಾಲ್ಕನೇ ಸಾರಣೆಯಲ್ಲಿ ಚಲವೀಣೆಯ ಸ, ಮ, ಪ ಸ್ವರಗಳು ಧ್ರುವವೀಣೆಯ ನಿ, ಗ, ಮ ಸ್ವರಗಳಲ್ಲಿ ಐಕ್ಯವಾಗುತ್ತವೆ. ಹೀಗೆ ನಾಲ್ಕು ಸಾರಣೆಗಳಲ್ಲಿ ಅಡಗುವುದರಿಂದ ಶ್ರುತಿ ಎಂದರೆ ಇಷ್ಟು ಎಂಬ ಮಿತಿಯು ಸ್ಪಷ್ಟವಾಗಿ ತಿಳಿಯುವುದು. ಇನ್ನು ಮುಂದೆ, ರಕ್ತಿಗೆ ಎಂದರೆ ಚಲವೀಣೆಯ ಶ್ರುತಿಗಳು ಧ್ರುವವೀಣೆಯ ಶ್ರುತಿಗಳಲ್ಲಿ ಸೇರುವುದಕ್ಕೆ ಹಾನಿ ಇರುವುದರಿಂದ ಎಂದರೆ ಇನ್ನೂ ಮಂದ್ರವಾದ ಧ್ವನಿಯು ಸ್ಪುಟಗೋಚರವಲ್ಲದಿರು ವುದರಿಂದ ಸಾರಣೆಯನ್ನು ಮಾಡತಕ್ಕದ್ದಲ್ಲ. ಶ್ರುತಿಭ್ಯಃ ಗ್ಯುಃ ಸ್ವರಾಃ ಷಡ್ವರ್ಷಭ ಗಾಂಧಾರ ಮಧ್ಯಮಾಃ |
ಪಂಚಮೋ ಧೈವತ ಶ್ಚಾಥ ನಿಷಾಧ ಇತಿ ಸಪ್ತತೇ
ತೇಷಾಂ ಸಂಜ್ಞಾ ಸರಿಗಮ ಪಧ ನೀತ್ಯಪರಾಮತಾ |
" || ೨೪ || { ಹೇಳಿದ ನಿದರ್ಶನದಿಂದ ಸ್ಪಷ್ಟವಾಗುವಂತ ಮಂದ್ರಸ್ಥಾನದ ೪ನೇ, ೭ನೇ, ೯ನೇ, ೧೩ನೇ, ೧೭ನೇ, ೨೦ನೇ, ೨೨ನೇ ಶ್ರುತಿಗಳಿಂದ ಕ್ರಮವಾಗಿ ಷಡ್ಡ, ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ ಎಂಬ ಏಳು ಸ್ವರಗಳಾಗುವುವು. ಅವುಗಳಿಗೆ ಸರಿ ಗ ಮ ಪ ಧ ನಿ ಎಂಬ ಬೇರೆ ಸಂಜ್ಞೆಗಳಿವೆ. ಶ್ರುತ್ಯನಂತರ ಭಾವೀಯಃ ಸ್ನಿಗೋ ಅನುರಣನಾತ್ಮಕಃ | ಸ್ವತೋ ರಂಜಯತಿ ಶೋತೃಚಿತ್ರಂ ಸ ಸ್ವರಉಚ್ಚತೇ । ಶ್ರುತಿಯ, ಎಂದರೆ ಹಿಂದೆ ಹೇಳಿದಂತೆ ಸ್ವರವಿರುವ ನಾಲ್ಕನೇ, ಏಳನೇ ಇತ್ಯಾದಿ ಶ್ರುತಿಯ ಅನಂತರದಲ್ಲಿ ಉಂಟಾಗುವ ಇಂಪಾಗಿರುವ ಹಾಗೂ, ಅನುರಣನಾತ್ಮಕಃ ಎಂದರೆ ನುಡಿಯುತ್ತಲಿದ್ದು ಪ್ರೋತೃಗಳಿಗೆ ಮನೋರಂಜನೆಯನ್ನುಂಟು ಮಾಡಲು ಸಮರ್ಥವಾದ ನಾದವು ಸ್ವರವೆಂದು ಕರೆಯಲ್ಪಡುತ್ತದೆ. ನಾದವು ಸೂಕ್ಷ್ಮ ಹಾಗೂ ಪ್ರಸ್ತ ಸ್ವರೂಪದ ನಾದವು ಶ್ರುತಿ ಎಂದೂ ಅದೇ ಸಾಕಷ್ಟು ಸ್ಕೂಲ ಹಾಗೂ ದೀರ್ಘವಾಗಿದ್ದರೆ ಸ್ವರವೆಂದೂ ತಾತ್ಪರ್ಯ, ನನಗು ಶ್ರುತಿಶ್ಚತುರ್ಥ್ಯಾದಿ ರವಂ ಸ್ವರಕಾರಣಂ
ತ್ರಾದೀನಾಂ ತತ್ರ ಪೂರ್ವಾಸಾಂ ಶ್ರುತೀನಾಂ ಹೇಳುತಾ ಕಥಂ
ಬೂಮಸ್ತುರ್ಯಾತೃತೀಯಾದಿ: ಶ್ರುತಿಃ ಪೂರ್ವಾಭಿಕಾಂಕ್ಷೆಯಾ
ನಿರ್ಧಾರ್ಯತೇತಃ ಶ್ರುತಯಃ ಪೂರ್ವಾ ಅತ್ಯತ್ರಹೇತವಃ ||

ಶ್ತ್ರುತಿನಿದಶ್ರನದ ಕುರಿತಾಗಿ ಹೇಳಬಹುದಾದ ಒಂದು ಆಕ್ಷೇಪವನ್ನೆತ್ತಿಕೊಂಡು

ಅದಕ್ಕೆ ಸಮಾಧಾನವನ್ನು ಹೇಳುತ್ತಾನೆ- ಹಿಂದೆ ಶ್ರುತಿನಿದರ್ಶನದಲ್ಲಿ ಷಡ್ಡಾದಿಸ್ಟರಗಳು