ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೭೬ / ಕುಕ್ಕಿಲ ಸಂಪುಟ

ಶಾರ್ಙ್ಗದೇವನು ಇಲ್ಲಿ ಹೇಳುತ್ತಿರುವುದು ಮೇಲಿಂದ ಕೆಳಗೆ ಒಂದೊಂದಾಗಿ ಶ್ರುತಿ ಏರಿಸಿದ ವೀಣೆಯ ತಂತಿಗಳನ್ನು ಕುರಿತಾಗಿ ಎಂಬುದಂತೂ ಸ್ಪಷ್ಟವೇ ಸರಿ. ಹಾಗಿದ್ದರೂ, ಪ್ರತಿಯೊಂದು ತಂತಿಯೂ ತನ್ನ ಕೆಳಗಿನದಕ್ಕಿಂತ ತೀವ್ರವಾಗಿದೆ ಎನ್ನುವುದರ 'ಔಚಿತ್ಯ'ವನ್ನು ವಾಚಕರು ಊಹಿಸಿಕೊಳ್ಳಬಹುದು.

ವೀಣಾದ್ವಯೇ ಸ್ವರಾ: ಸ್ಥಾಪ್ಯಾಸ್ತತ್ರ ಷಡ್ವಶ್ಚತುಃ ಶ್ರುತಿ: |
ಸ್ಟಾಪ್ಯಸ್ತಂತ್ಯಾಂ ತುರೀಯಾಯಾಮೃಷಭಶ್ರುತೀಸ್ತತಃ ||
ಪಂಚಮೀ ತಸ್ತೃತೀಯಾಯಾಂ ಗಾಂಧಾರೋ ದ್ವಿಶ್ರುತಿಸ್ತತಃ |
ಅಷ್ಟಮೀತೋ ದ್ವಿತೀಯಾಯಾಂ ಮಧ್ಯಮೋಥ ಚತುಃಶ್ರುತಿ: ||
ದಶಮೀತಶ್ಚತುರ್ಥ್ಯಾ೦ ಸ್ಯಾತ್‌ ಪಂಚಮೋಥ ಚತುಃಶ್ರುತಿ: || ೧೫ ||

ಚತುರ್ದಶೀತಸ್ತುರ್ಯಯಾಂ ಧೈವತಸ್ತ್ರಿಶ್ರುತಿಸ್ತತಃ |
ಅಷ್ಟಾದಶ್ಯಾಸ್ತೃತೀಯಾಯಾಂ ನಿಷಾದೋ ದ್ವಿಶ್ರುತಿಸ್ತತಃ || ೧೬ ||
ಏಕವಿಂಶ್ಯಾದ್ವಿತೀಯಾಯಾಂ ವೀಣೈಕಾತ್ರಧ್ರುವಾ ಭವೇತ್ |

ಹೀಗೆ ಶ್ರುತಿಗೊಳಿಸಿದ ಎರಡೂ ವೀಣೆಗಳ ತಂತಿಗಳಲ್ಲಿ ಸ್ವರಸ್ಥಾಪನೆ ಹೇಗೆಂದರೆ-ಚತುಃಶ್ರುತಿಸ್ವರವಾದ ಷಟ್ಟವನ್ನು ವೀಣೆಯ ನಾಲ್ಕನೆ ತಂತಿಯಲ್ಲಿಯೂ, ತ್ರಿಶ್ರುತಿ ಋಷಭವನ್ನು ಷಡ್ಜದ ಮುಂದಿನ ಮೂರನೇ ತಂತಿಯಲ್ಲಿ ಎಂದರೆ ಆರಂಭದಿಂದ ಏಳನೇ ದ್ವಿಶ್ರುತಿಸ್ವರವಾದ ಗಾಂಧಾರವನ್ನು ಆರಂಭದಿಂದ ಒಂಬತ್ತನೇ ತಂತಿಯಲ್ಲಿಯೂ ಹೀಗೆಯೇ ಚತುಃಶ್ರುತಿ ಸ್ವರವೆನ್ನುವ ಮಧ್ಯಮವನ್ನು ಹದಿಮೂರನ ತಂತಿಯಲ್ಲಿಯೂ, ಚತುಃಶ್ರುತಿ ಪಂಚಮವನ್ನು ಹದಿನೇಳನೇ ತಂತಿಯಲ್ಲಿಯೂ, ತ್ರಿಶ್ರುತಿ ಧೈವತವನ್ನು ಇಪ್ಪತ್ತನೇ ತಂತಿಯಲ್ಲಿಯೂ, ದ್ವಿಶ್ರುತಿ ಸ್ವರವಾದ ನಿಷಾದವನ್ನು ಕೊನೆಯ ಇಪ್ಪತ್ತೆರಡನೇ ತಂತಿಯಲ್ಲಿಯೂ ಸ್ಥಾಪಿಸಬೇಕು, ಎಂದರೆ ಆ ತಂತಿಗಳಲ್ಲಿರುವ ಶ್ರುತಿನಾದಗಳನ್ನೇ ಈಗ ಸ್ವರಗಳೆಂದೆಣಿಸಬೇಕು ಎಂಬರ್ಥ. ಹಾಗೆ ಆ ವೀಣೆಗಳ ೪, ೭, ೯, ೧೩, ೧೭, ೨೦, ೨೨ನೇ ತಂತಿಗಳಲ್ಲಿ ಸಪ್ತಸ್ವರಗಳಿರುತ್ತವೆ. ಆ ಎರಡು ವೀಣೆಗಳಲ್ಲಿ ಒಂದನ್ನು ಧ್ರುವವೀಣೆಯೆಂದೂ ಇನ್ನೊಂದನ್ನು ಚಲವೀಣೆಯೆಂದೂ ಹೆಸರಿಸುತ್ತಾನೆ-

ಚಲವೀಣಾ ದ್ವಿತೀಯಾ ತು ತಸ್ಯಾಂ ತಂತ್ರೀಸ್ತು ಸಾರಯೇತ್ |
ಸ್ಟೋಪಾಂತ್ಯತಂತ್ರೀಮಾನೇಯಾಸ್ತಸ್ಯಾಂ ಸಪ್ತಸ್ವರಾ ಬುಧ್ಯೆ: ||
ಧ್ರುವವೀಣಾಸ್ಟರೇಭ್ಯೋಸ್ಸಾಂಚಲಯಾಂತೇ ಸ್ಪರಾಸ್ತದಾ |
ಏಕಶ್ರುತ್ಯಪಕೃಷ್ಟಾಸ್ಯರೇವನ್ಯಾಪಿಸಾರಣಾ ||

ಇನ್ನೊಂದು ಚಲವೀಣೆ. ಅದರ ಸ್ವರತಂತಿಗಳನ್ನು ಚಲಾಯಿಸಬೇಕು, ಎಂದರೆ ಸಪ್ತಸ್ವರಗಳನ್ನೂ ಅವು ಇರುವ ತಂತಿಗಳಿಂದಲೇ ಹಿಂದಿನ ತಂತಿಗಳಿಗೆ ತರಬೇಕು; ಅರ್ಥಾತ್ ಆ ವೀಣೆಯ ೩, ೬, ೮, ೧೨, ೧೬, ೧೯, ೨೧ನೇ ತಂತಿಗಳಲ್ಲಿ ಕ್ರಮವಾಗಿ ಸಪ್ತಸ್ವರಗಳಿವೆ ಎಂದೆಣಿಸಬೇಕು ಎಂದರ್ಥ. ಆಗ ಚಲವೀಣೆಯ ಸ್ವರಗಳು ಧ್ರುವವೀಣೆಯವುಗಳಿಗಿಂತ ಒಂದು ಶ್ರುತಿಯಷ್ಟು ಕೆಳಗೆ ಬಂದಂತಾಗುತ್ತವೆ. ಇದೇ ಪ್ರಕಾರ ಚಲವೀಣೆಯ ಈ ಸ್ವರಗಳನ್ನು ಇನ್ನೊಮ್ಮೆ ಅವುಗಳ ಕೆಳಗಿನ ತಂತಿಗಳಿಗೆ ಇಳಿಸಬೇಕು.

ಶ್ರುತಿದ್ವಯಲಯಾತ್ತಸ್ಯಾಂ ಚಲವೀಣಾ ಗತಾಗನೀ
ಧೃವೀಣೋಪಗತಯೋರಿಧಯೋವಿಶತಃ ಕ್ರಮಾತ್ |
ತೃತೀಯಸ್ಯಾಂ ಸಾರಣಾಯಾಂ ವಿಶತಃ ನಪಯೋರಿಧೌ