ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಒಂದು ಮಹಾಭಾರತೀಯ ವ್ಯಕ್ತಿತ್ವ / ೩೮೫

ಯೇನಕೇನಾಪಿ ಸಮರ್ಥಿಸುತ್ತಾ ಅವರು, ತನಾ ತನಾ ಮತ್ತು ತಾನ ತಾನ ಎಂಬಂತೆ ಲಘುಗುರು ಮತ್ತು ಗುರುಲಘ್ನಾತ್ಮಕವಾದ ಲಯಗಳು ಹೊರಡುವುವು. ಪಿಂಗಳನು ಅನುಷ್ಟುಪ್ ಛಂದಸ್ಸಿನಲ್ಲಿ ಈ ಎರಡು ವಿಧದ ಲಯಗಳು ನಿರಂತರವಾಗಿ ಇರುವುದನ್ನು ವಿಶೇಷ ಲಕ್ಷಣವಾಗಿ ಕೊಟ್ಟಿರುತ್ತಾನೆ... ಇತ್ಯಾದಿ ಹೇಳುತ್ತಾರೆ. ಗುರುಲಘ್ನಾತ್ಮಕವಾದು ದನ್ನು ನಮ್ಮ ಶಾಸ್ತ್ರಗಳು 'ಛಂದಸ್' ಎಂದು ಕರೆಯುವರೇ ಹೊರತು ಲಯವೆಂದಲ್ಲ... ಸಾರಾಂಶ- ತಂತ್ರಿಲಯವೆಂಬುದೊಂದು ಛಂದೋವೈಶಿಷ್ಟ್ಯವೆಂದು ಶಂಕಿಸುವುದಕ್ಕೆ ಯಾವ ಆಧಾರವೂ ಇಲ್ಲ.” (ಛಂದೋಗತಿ - ಪುಟ ೨೯, ೩೦).
ಛಂದೋಗತಿಯು ಪ್ರಕಟವಾದ ಅನಂತರ ಕುಕ್ಕಿಲ ಕೃಷ್ಣ ಭಟ್ಟರು 'ಭಾವನ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ. ನಾನು ಅವರೊಂದಿಗೆ ಚರ್ಚಿಸಲಿಕ್ಕಿದೆ' ಎಂದರು. ಆದರೆ ಅಂತಹ ಸಂದರ್ಭ ಕೂಡಿಬರಲಿಲ್ಲ ಎಂದು ಕಾಣುತ್ತದೆ. ಇದನ್ನಿಷ್ಟು ವಿವರವಾಗಿ ನಿರೂಪಿಸಲು ಕಾರಣವೇನೆಂದರೆ ಈ ಇಬ್ಬರು ದಿಗ್ಗಜಗಳ ಅಧ್ಯಯನ, ಚಿಂತನಶೀಲತೆ, ಪ್ರತಿಭೆ ಎಷ್ಟು ಅಗಾಧವಾದದ್ದು ಎಂಬುದನ್ನು ಸ್ಪಷ್ಟಪಡಿಸು ವುದೇ ಆಗಿದೆ.
ಕನ್ನಡ ಕಾವ್ಯಗಳಲ್ಲಿ ರಗಳೆ ಎಂಬ ಒಂದು ಛಂದೋಬಂಧವಿದೆ. ಲಲಿತರಗಳೆ, ಉತ್ಸಾಹರಗಳೆ, ಮಂದಾನಿಲರಗಳ ಇತ್ಯಾದಿಯಾಗಿ ರಗಳೆಯಲ್ಲಿ ಹಲವು ಪ್ರಕಾರಗಳಿವೆ. ರಗಳೆಯೆಂಬುದು ಶುದ್ಧ ಕನ್ನಡ ಛಂದಸ್ಸು, ಸಂಸ್ಕೃತದಲ್ಲಿ ರಗಳೆಯೆಂಬುದಿಲ್ಲ ಎಂದು ಕೆಲಮಂದಿ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ನಾಗವರ್ಮನ ಛಂದೋಂಬುಧಿಯಲ್ಲಿ ಇದು ಸಂಸ್ಕೃತ ಛಂದಸ್ಸುಗಳ ಪ್ರಕರಣದಲ್ಲಿ ದಂಡಕದೊಂದಿಗೆ ಸೇರಿರುವುದು ಪ್ರಮಾದ ಎಂದು ಅವರ ಭಾವನೆ. ಆದರೆ ಕುಕ್ಕಿಲದವರು ಇದು ಸರಿಯಲ್ಲವೆಂದೂ ನಾಗವರ್ಮನು ರಘಟಾಬಂಧಂ ಎಂದು ಹೇಳಿರುವುದು ರಗಳೆಯನ್ನೇ ಎಂದೂ ಸಾಧಾರವಾಗಿ ಸಿದ್ದಾಂತಿಸಿ ದಂಡಕ ಎಂದರೂ ರಗಳೆ ಎಂದರೂ ಒಂದೇ ಎಂದು ಪ್ರತಿಪಾದಿಸಿದ್ದಾರೆ. ಕನ್ನಡ ಭಾಷೆಯಲ್ಲೇ ಹುಟ್ಟಿದವು ಎಂಬ ಕಾರಣದಿಂದ ಕರ್ಣಾಟಕ ಭಾಷಾ ಜಾತಿಗಳು (ಕವಿರಾಜಮಾರ್ಗದಲ್ಲಿ ಇವುಗಳನ್ನು ಕರ್ಣಾಟಕ ವಿಷಯ ಜಾತಿಗಳು ಎಂದು ಕರೆಯ ಲಾಗಿದೆ) ಎಂಬ ವಿಶಿಷ್ಟವಾದ ಅಕ್ಷರಗಣದ ಬಂಧಗಳನ್ನು ವಿವೇಚಿಸುತ್ತ ಗಣಗಳ ಉಗಮವನ್ನು ನಿರ್ಧರಿಸುವ ಸಂದರ್ಭದಲ್ಲಿ ತಮಿಳು ಗಣಗಳನ್ನೂ ತೆಲುಗಿನ ಛಂದೋ ಬಂಧಗಳನ್ನೂ ತೌಲನಿಕವಾಗಿ ಪರಿಶೀಲಿಸುವ ಮೂಲಕ ದ್ರಾವಿಡ ಛಂದಸ್ಸಿನ ಕುರಿತಾದ ತಮ್ಮ ಸಿದ್ಧಾಂತಗಳನ್ನು ಕುಕ್ಕಿಲರು ರೂಪಿಸಿದರು. ಹಾಗೆಯೇ ಸಂಸ್ಕೃತದ ಮುಖ್ಯವಾಗಿ ಲೌಕಿಕ- ಛಂದಸ್ಸನ್ನೂ ಪರಿಗಣಿಸಿಕೊಂಡು ವಿಶಾಲವಾದ ಕ್ಷೇತ್ರದಲ್ಲಿ ಕನ್ನಡದ ಛಂದಸ್ಸನ್ನು ಗುರುತಿಸುವ ಪ್ರಯತ್ನ ಮಾಡಿದ ಯಶಸ್ಸು ಕುಕ್ಕಿಲರದು.
ಭಾರತೀಯ ಸಂಗೀತ ಶಾಸ್ತ್ರ ಎಂಬ ಕೇವಲ ಒಂದು ನೂರು ಪುಟಗಳ ಗ್ರಂಥದಲ್ಲಿ ಕುಕ್ಕಿಲರು ಪ್ರತಿಪಾದಿಸಿರುವ ವಿಷಯಗಳು ಎಂತಹ ವಿದ್ವಾಂಸರೂ ಅಚ್ಚರಿಪಡುವಂಥವು. ಸಂಗೀತ ಶಾಸ್ತ್ರಾಧ್ಯಯನವು ಎಂತಹ ವಿಸ್ತಾರವೂ, ಗಹನವೂ ಆಗಿರುವುದೆಂದು ಈ ಗ್ರಂಥದ ಅವಲೋಕನ ಮಾತ್ರದಿಂದಲೇ ಗ್ರಹಿಸಬಹುದಾಗಿದೆ. ಭಾರತೀಯ ಸಂಗೀತದ ಶ್ರುತಿಸಿದ್ಧಾಂತ ಮತ್ತು ಸ್ವರಸಮೀಕರಣಗಳ ಬಗ್ಗೆ ಬರೆಯಬೇಕಾದರೆ ಕುಕ್ಕಿಲರು ಹಿಂದುಸ್ತಾನಿ ಸಂಗೀತ, ಪಾಶ್ಚಿಮಾತ್ಯ ಸಂಗೀತ, ಅರಬೀ ದೇಶದ ಸಂಗೀತ ಮೊದಲಾದ ಅನೇಕ ಸಂಗೀತ ಪದ್ಧತಿಗಳ ಮೂಲತತ್ವಗಳನ್ನೂ ಸಿದ್ಧಾಂತಗಳನ್ನೂ ಅಧ್ಯಯನ ಮಾಡಿ ದ್ದಾರೆ ಎಂದು ಸ್ಪಷ್ಟವಾಗುತ್ತದೆ. ಈ ಗ್ರಂಥದ ಅನುಬಂಧದಲ್ಲಿ ಅವರು ಕೊಟ್ಟಿರುವ