ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ತಂದೆಯವರು

ಕುಕ್ಕಿಲ ನಾರಾಯಣ ಭಟ್ಟ

ನಮ್ಮ ತಂದೆಯವರು ನಮ್ಮೆಲ್ಲರಲ್ಲಿ ಸ್ವಲ್ಪ ಭಯ ಮತ್ತು ಭಕ್ತಿ ಮೂಡಿಸುವ ವ್ಯಕ್ತಿತ್ವ ಇರುವವರಾದರೂ, ಬಾಲ್ಯದಲ್ಲಿ ನಮ್ಮನ್ನು ಬಹಳ ಪ್ರೀತಿ ಮತ್ತು ಸಲುಗೆ ಯಿಂದ ನೋಡಿಕೊಳ್ಳುತ್ತಿದ್ದರು. ಮಕ್ಕಳು ಮೂರು ವರ್ಷ ಆಗುವವರೆಗೆ ಅವರ ತೊಡೆಯ ಮೇಲೆಯೇ ಬೆಳೆಯುತ್ತಿದ್ದುದು. ಆಗಲೇ ಅವರಿಗೆ ಮಗ್ಗಿ ಮತ್ತು ಪದ್ಯ ಬಾಯಿಪಾಠ ಹೇಳಿಸುತ್ತಿದ್ದರು. ಪ್ರಾಥಮಿಕ ಶಾಲೆಗೆ ಸೇರಿದ ಮೇಲೆ ಮಕ್ಕಳ ವಿಚಾರದಲ್ಲಿ ಸ್ವಲ್ಪ ಬಿಗು ಮತ್ತು ಶಿಸ್ತಿನಿಂದ ಇರಬೇಕೆಂಬ ಕಡ್ಡಾಯ ಮನೆಯ ವಾತಾವರಣದಲ್ಲಿರು ತಿತ್ತು. ಆ ಕಾಲದಲ್ಲಿ ರಾತ್ರಿ ನಮಗೆ ಸಂಗೀತ ಪಾಠ ಮಾಡುತ್ತಿದ್ದರು. ನಮಗೆಲ್ಲರಿಗೂ ಸ್ವಲ್ಪ ಸಂಗೀತ ಜ್ಞಾನವಿದೆ, ತಾಳಜ್ಞಾನವಿದೆ, ಕೆಲವು ಶಾಸ್ತ್ರೀಯ ರಾಗಗಳನ್ನು ಗುರುತಿಸ ಬಲ್ಲೆವು. ಪ್ರಾಥಮಿಕ ಹಂತ ದಾಟಿ ನಾವು ಹೈಸ್ಕೂಲಿನಲ್ಲಿ ಕಲಿಯುತ್ತಿರುವಾಗ ರಜೆಯಲ್ಲಿ ಮನೆಗೆ ಬಂದಿರುವಾಗಲೆಲ್ಲಾ “ಓದು, ಒಳ್ಳೆಯ ಪುಸ್ತಕ ಓದು, ಸುಮ್ಮನೆ ಸಮಯ ಹಾಳು ಮಾಡಬೇಡ, ಆಟಗಳಲ್ಲಿ ಆಸಕ್ತಿ ಬೇಡ” ಎಂದು ಆಗಾಗ್ಗೆ ಹೇಳುತ್ತಿದ್ದುದು, ಗದರಿಸುತ್ತಿದ್ದುದು ಇಂದಿಗೂ ನೆನಪಿದೆ. ನಾವು ಕಾಲೇಜು ವಿದ್ಯಾಭ್ಯಾಸ ಪ್ರಾರಂಭಿಸಿ ಯೌವನಕ್ಕೆ ಕಾಲಿಡುವಾಗ ತಂದೆ ಮಕ್ಕಳ ಸಂಬಂಧದಲ್ಲಿ ತುಂಬಾ ಬದಲಾವಣೆ ಯಾಗುತ್ತಿತ್ತು. ಆಮೇಲೆ ಸ್ನೇಹಿತರಂತೆ ವ್ಯವಹಾರ, ಯಾವ ವಿಷಯವನ್ನೂ ಅವರೊಡನೆ ಚರ್ಚಿಸಬಹುದು. ಚರ್ಚೆಯಲ್ಲಿ ಕಾವು ಏರಿ ಬಿಸಿ ವಾತಾವರಣ ಉಂಟಾದರೂ ಮಕ್ಕಳ ಮೇಲೆ ಸಿಟ್ಟಿಲ್ಲ; ಆದರೆ ಅವರನ್ನು ಖಂಡಿಸಿದರೆ ಅವರ ವಾದ ಸರಿಯೆಂದು ಒಪ್ಪಿಸುವ ವರೆಗೂ ಸುಮ್ಮನಿರುತ್ತಿರಲಿಲ್ಲ. ಆಗಾಗ್ಗೆ ನಮ್ಮೊಡನೆ ಚದುರಂಗ, ಇಸ್ಪೀಟು ಆಡುವುದೂ ಇತ್ತು.
ಅವರು ಸರಿಯಾಗಿ ಕೃಷಿಕರಾದುದು ೧೯೩೨ರ ಅನಂತರವೇ. ಆವರೆಗ ಮಂಗಳೂರಲ್ಲಿ ಕನ್ನಡ ಸಾಹಿತ್ಯ, ಇಂಗ್ಲಿಷ್ ಮತ್ತು ಸಂಗೀತ ಕಲಿಯುತ್ತಿದ್ದರಂತೆ. ಬಿ. ಎ. ಮತ್ತು ಕನ್ನಡ ವಿದ್ವಾನ್ ಪರೀಕ್ಷೆಗಳಿಗೆ ತಯಾರು ಮಾಡುತ್ತಿದ್ದಾಗ ಇಲ್ಲಿ ಮನೆವಾರ್ತೆ ಯಲ್ಲಿ ಮತ್ತು ಭೂಮಿ ವ್ಯವಹಾರದಲ್ಲಿ ಸಂಧಿಗ್ಧ ಪರಿಸ್ಥಿತಿ ಉಂಟಾದ್ದರಿಂದ ಅವೆಲ್ಲ ಆಸಕ್ತಿಗಳನ್ನು ಒಮ್ಮೆಲೇ ತೊರೆದು ಕುಕ್ಕಿಲಕ್ಕೆ ಬಂದರಂತೆ. ಆಮೇಲೆ ೧೯೫೮ರ ವರೆಗೆ ನಮ್ಮ ಭೂಮಿಯನ್ನು ವೃದ್ಧಿ ಮಾಡುವುದರಲ್ಲಿ ಮತ್ತು ಕೃಷಿಯಲ್ಲಿಯೇ ಆಸಕ್ತಿಯಿಟ್ಟು ಕೊಂಡಿದ್ದರು. ಆದರೆ ಯಾವಾಗಲೂ ಸಾಯಂಕಾಲ ಏಳು ಗಂಟೆಯ ಮೇಲೆ ರಾತ್ರಿ ಎರಡು ಗಂಟೆಯವರೆಗೆ ಓದುತ್ತಾ ಬರೆಯುತ್ತಾ ಇರುತ್ತಿದ್ದರು.

ಶ್ರೀ ಸೇಡಿಯಾಪು ಕೃಷ್ಣಭಟ್ಟರು ನಮ್ಮ ತಂದೆಯವರ ಸೋದರ ಭಾವ (ಸೋದರತ್ತೆಯ ಮಗ), ಶ್ರೀ ಸೇಡಿಯಾಪು ಮಾವನವರ ಧರ್ಮಪತ್ನಿಯವರು ಸಂಗೀತ ವಿದ್ವಾಂಸರಾದ ಶ್ರೀ ಚಕ್ರಕೋಡಿ ನಾರಾಯಣ ಶಾಸ್ತ್ರಿಗಳವರ (ಸಿ. ಎನ್. ಶಾಸ್ತ್ರಿ) ತಂಗಿ. ಶ್ರೀ ಚಕ್ರಕೋಡಿಯವರು ವಿವಾಹವಾದುದು ಶ್ರೀ ಸೇಡಿಯಾಪು ಅವರ ಅಣ್ಣನ ಮಗಳನ್ನು. ಶ್ರೀ ಸೇಡಿಯಾಪು ಅವರ ಮನೆ ಕುಕ್ಕಿಲಕ್ಕೆ ಸಮೀಪ ಉಗ್ಗಪ್ಪಕೋಡಿ, ಶ್ರೀ ಸೇಡಿಯಾಪು