ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೪೯

ಯಕ್ಷಗಾನ : ರಾತ್ರಿಂಚರ | ನಾಥನಾಗಿ | ಮತ್ತೊಬ್ಬ ಖಳ | ನಿರುವಂತೆ |
ಮಸ್ತಕಗ |ಳು ಹತ್ತುಂಟಂ | ತೆ-ಆ | ಮೇಲವಗೆ |
ಹಸ್ತಗ | ಇಪ್ಪತ್ತು ಉಂಟಂ | ತ-ಹ |ಣ್ಣುಗಳೆಂಬ |
ಪಿತ್ತ ತಲೆ | ಗೇರಿಹುದಂ | ತೆ-ಈ | ವಿಪಿನದೊ |
ಳಿರುವುದು | ಕಷ್ಟ ರಾಘ | ವ ||

ವಾಲಿ ಸುಗ್ರೀವರ ಯುದ್ಧ ಸಂದರ್ಭ

ಕಥಕಳಿ: ವಿಶ್ವನಾಯ | ಕ | ನಿಂದೆ ವಾಕ್ಕಿ | ನೆ-|
ವಿಶ್ವ ಸಿಚ್ಚು | ಞಾನ್- 1 ಪೋರಿನ 1 ಯಾಲ್-

ಯಕ್ಷಗಾನ : ವಿಶ್ವನಾಯ | ಕ | ನಿನ್ನ ವಾಕ್ಯ | ವ- |
ವಿಶ್ವಾಸವೆಂ | ದು- | ನಂಬಿದೆನಿಂ | ದು- ||

ಕಥಕಳಿ :ಎನ್ನ ವೈರಿ | ತನ್- | ಮುಲಾಕ್ಕಿ | ನೀ- |
ನಿನ್ನು ಸ್ವರ | ಮಾಯ್- | ಚೆನ್ನು ನನ್ನ | ಹೋ-||

ಯಕ್ಷಗಾನ : ಎನ್ನ ವೈರಿ | ಯ ಮುಂದೆ ಮಾಡಿ | ನೀ-
ನಿಂದ ಸುಮ್ಮ | ನೇ- | ಕಂಡೆ ಚೆನ್ನ | ನೆ- |

ಕಥಕಳಿ : ವಾಲಿತನ್ನೆ | ಯುಂ | ನಿನ್ನೆಯಂ ಕಂ | ಡಾಲ್- |
ಆಳು ಭೇದ | ಮಾಮ್ | ತೋನುನ್ನಿಲ್ಲ | ಹೋ- |

ಯಕ್ಷಗಾನ  : ವಾಲಿಯು ನಿನ್ನ- | ಕಾಣಲಿರ್ವ | ರ-|
ಆಳು ಭೇದ | ವ | ಅರಿಯದಾದ | ನು- ||

ಪಂಚವಟಿಯಲ್ಲಿ ಸೀತೆಯ ವಿರಹದಿಂದ ದುಃಖಿಸುತ್ತಿರುವ ರಾಮನ ಮಾತು

ಕಥಕಳಿ: ಸಹಜ ಸೌಮಿತ್ರೆ | ಮಿಹಿರನಂದ ಸಾ |
ದಹನರಶ್ಮಿಯಾಲ್ | ಗಗನೇ ಕಾಣುನ್ನು |
ಉಡಲಿಲೇರೆಯುಂ | ಚೂಡು ತೋನುನ್ನು |
ವಿಟಪಿ ಮೂಲತ್ತಿಲ್ | ಝಡಿತಿ ಪೋಕನಾಂ |

ಯಕ್ಷಗಾನ : ಕಡು ಕಮಲಸಖ ಕಿರಣ | ಸುಡುತಿದ ಮೈಯಾವರಣ |
ಗಿಡಮರನ ತಂಪಿನೊಳು | ಇದು ಎನ್ನ ಮಮ ಸಹಜ ||

ಕಥಕಳಿ : ರಘುಪತೇ ವಿಭೋ | ರಜನಿಯಿಲಹೋ
ರವಿಯುದಿಕ್ಕು ಮೋ | ರುಚಿರ ಭಾಷಣ |

ಯಕ್ಷಗಾನ : ಇರಳು ಮೂಡುವನೇ | ಸೂರ್ಯ, ಚಂದ್ರನ |
ಕಿರಣವಲ್ಲವೇ | ನೋಡು ಅಣ್ಣ ||

ಉಂಗುರಸಂಧಿಯಲ್ಲಿ ಶೃಂಗಾರರಾವಣನ ಮಾತು

ಕಥಕಳಿ : ಈರೇಳು ಮಾ | ರುಕರಾಲ್ | ಆರಾನ್ನೆ | ಪೂಣ್ಮಾನ್ |
ಪಾರಂ ಕೊದಿ | ಯಿಂ ಖುಂಡ | ನಾರೀರತ್ನ | ಮೇ- |

ಯಕ್ಷಗಾನ  : ಇಪ್ಪತ್ತು ತೋ | ಳಲ್ಲಿ ನಿನ್ನ | ನಪ್ಪಿಕೊಂಬುದಕ್ಕೆ- |
ಅಲ್ಪ ಮನ | ಸಲ್ಲ ಕೇಳಿ | ಕರ್ಪೂರ ಸು | ಗಂಧಿ ||