ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೦ / ಕುಕ್ಕಿಲ ಸಂಪುಟ


ಹೀಗೆ ಸುಬ್ಬನ ರಾಮಾಯಣ ಪ್ರಸಂಗಗಳಲ್ಲಿ ಕೊಟ್ಟಾರಕರ ರಾಜನ ಕಥಕಳಿ ಪದ್ಯಗಳ ಛಾಯಾನುವಾದವನ್ನು ಅಲ್ಲಲ್ಲಿ ಕಾಣಬಹುದು. ಕನ್ನಡಕ್ಕೆ ಸಹಜವಲ್ಲದ ಕೆಲವೊಂದು ವೃತ್ತಬಂಧಗಳನ್ನೂ ಸುಬ್ಬನು ಅದರಲ್ಲಿದ್ದಂತೆಯೇ ಆಯ್ದುಕೊಂಡಿರುತ್ತಾನೆ. ಉದಾಹರಣೆಗಾಗಿ ಸೀತಾಸ್ವಯಂವರದ ಇದೊಂದು ವೃತ್ತವನ್ನು ಪರಿಶೀಲಿಸಿರಿ :

ಕಥಕಳಿ: ದಶರಥನರಪಾಲನ್ ತಾನ್ ಚೊನ್ನದು ಕೇಟ್ಟ ಶೇಷಂ |
ವಿಚಲಿತತರುಶೈಲಾಂತಂ ಶೋಲ ಭೂಮಂಡಲಂ ತಂ |
ಅರುಣವದನರಯುತಂ ಪ್ರೋಜ್ವಲ ರೂಪಂ |
ಕುಶಿಕಸುತ ಮುನೀಶನ್‌ ಕೋಪಮುಂಪೂಂಡು ಚೆನ್ನಾನ್ |

ಸುಬ್ಬನ ಪದ್ಯ : ದಶರಥನರಪಾಲಂ ತಾ ಹೇಳುದಂ ಕೇಳುತಾಗ |
ಎಸೆವರುಣಮುಖಾಕ್ರಾಂತಂ ತತ್ಸಭಾಮಧ್ಯದೊಳಗೆ |
ಉಸಿರಿಡುತಂ ಭುಗಿಭುಗಿಲೆಂದಾಚಾರ್ಯನನ್ನೀಕ್ಷಿಸುತ್ತಾ |
ಕುಶಿಕಜನತಿ ಕೋಪಾರೂಢನಾಗಿಯುಂ ಪೇಳ್ವಂ ||
ವಾಲಿಸಂಹಾರ ಪ್ರಸಂಗದಲ್ಲಿರುವ ಇಂತಹದೇ ವೃತ್ತ
ರಘುವರನ ಸಹಸವನ್ನ ಕಂಡು ಸುಗ್ರೀವ ತನ್ನ |
ಅಗಣಿತದ ಧೈರ್ಯದಿಂದ ಆಗಲೇ ಎದ್ದು ಬಂದ |
ನಗತರುವಾಯುಧಗಳಲಿ ಬಂದು ಕಿಂಧೆಯಲ್ಲಿ |
ಅಗರದ ಬಾರನೆ ಕೇಳಿ ಆಗಳೇ ಬಂದ ಪಾಲಿ ||

ಇವು ಮೂಲತಃ ದ್ರಾವಿಡ ಛಂದಸ್ಸುಗಳು, ತಮಿಳಿನಲ್ಲಿ ಇವಕ್ಕೆ ಆರುಶೀರಡಿ ಆಶಿರಿಯ ವಿರುತ್ತ'ಗಳೆಂದು ಹೆಸರು. ಕೃತಿರಚನೆಯಲ್ಲಿ ಕಂಬರಾಮಾಯಣವನ್ನೂ ಆಧರಿಸಿ ಕೊಂಡಿರುವ ಕೊಟ್ಟಾರಕರದ ರಾಜನು ಅದರಲ್ಲಿರುವ ಈ ವೃತ್ತಗಳ ಗಣನಿಯಮಗಳನ್ನು ಒಂದಿಷ್ಟು ಶಿಥಿಲಗೊಳಿಸಿ ತನ್ನ 'ರಾಮನಾಟ್ಟಂ' ಕೃತಿಗಳಲ್ಲಿ ಪ್ರಯೋಗಿಸಿರುತ್ತಾನೆ. ಮಲೆಯಾಳದಲ್ಲಿ 'ಭಾಷಾವೃತ್ತಗಳನ್ನು ತಾಳಕ್ಕೊಪ್ಪಿಸಿ ಹಾಡುವ ಸಂಪ್ರದಾಯವಿದ್ದುದ ರಿಂದ ಹೀಗೆ ಅವುಗಳನ್ನು ಶಿಥಿಲಗೊಳಿಸುವುದು ಅಲ್ಲಿ ದೋಷವಲ್ಲ. ಮಲೆಯಾಳದ ಛಂದೋನಿಯಮವೇ ಹಾಗಿದೆ :
ಭಾಷಾಗಾನ ವಿಶೇಷಂಗಳೀಷದಿಲ್ಲ ಕ್ಷರಕ್ರಮಂ |
ಘೋಷಿಕ್ಕುಂ ಮಾತ್ರಗಳ್ಳಿಲ್ಲೇ ವಿಶೇಷಂ ತಾಳರೀತಿ ಪೋಲ್ || (ಕೇರಳಕೌಮುದಿ) ಕೊಟ್ಟಾರಕರ ರಾಜನ ಕೃತಿಗಳಲ್ಲಿ ವೃತ್ತಗಳಿಗೂ ರಾಗ ತಾಳ ನಿರ್ದೇಶವಿರುತ್ತದೆ. ಆತನು ಪ್ರಯೋಗಿಸಿದ ಶಾರ್ದೂಲವಿಕ್ರೀಡಿತಾದಿ ಸಂಸ್ಕೃತ ವೃತ್ತಗಳಲ್ಲಿಯೂ ಇಂತಹ ಶೈಥಿಲ್ಯವನ್ನು - ಸರಿಯಾಗಿ ಹೇಳುವುದಾದರೆ ಛಂದೋಭಂಗವನ್ನು ಕಾಣಬಹುದು. ಉದಾ :


ಇತ್ಥಂ ತಲ್ಯಾಂತ ಚೊಲ್ಲು ಮೊಳಿಕಳದರಿಕೆ ಕೇಟ್ಟುಡನ್ ಪಂಕ್ತಿ ಕಂಠನ್ |
ವಕ್ರಂ ತಾಳಿಟ್ಟು ಪೋಯಿ ನಿಜಭವನಮತಿಚಿತ್ರಜಾರ್ತ್ಯಾ ಸಮೇತಃ |
ಭೂಮಿಪಾಲಾಧಿ ಪಂಡೆ ದೇವಿಮಾ‌ ಪೀಡೆಯೆಲ್ಲಾ೦ |
ಮಾಮುಕ್ತವಾಕ್ಕಿನಾಲೆ ಶಾಂತಮಾಕಿ ತದಾನೀಂ | ಇತ್ಯಾದಿ. (ವಿಚ್ಛಿನ್ನಾಭಿಷೇಕಂ)