ಪುಟ:ಕುರುಕ್ಷೇತ್ರ ಗ್ರಂಥ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗde ಕುರುಕ್ಷೇತ್ರ ! ಮಿತ್ತು. ಹಲವು ಯುದ್ಧಗಳಲ್ಲಿ ಜಯವನ್ನು ಸಂಪಾದಿಸಿ ಆತನು ವೃದನಾಗಿ ಧನು, ಆತನ ರಾವುತರೂ ಒಳೆರಣಶೂರರಾಗಿದ್ದರು. ಉತ್ತರದಕಡೆಯ ಆ ವೀರರ ಭವ್ಯಶರೀರಗಳು ರಿಪುಭಯಂಕರಗಳಾಗಿದ್ದವು. ಅಫಗಾಣರ ಹತ್ತುಸಾವಿರ ರಾವು ತರೂ, 'ದುರಾಣಿಯ ಏಳುಸಾವಿರ ರಾವುತರೂ, ಬಂದೂಕುಹಿಡಿದ ಇರಾಣಿಯ ಐದು ಸಾವಿರ ಜನರೂ, ಒಂದು ಸಾವಿರ ಸಾಂದಣಿಯ ಸವಾರರೂ ಇಷ್ಟು ಸೈನ್ಯವು ಶಹಾವಲ್ಲಿ ಖಾನನಿಗೆ ಅಂಕಿತವಾಗಿ ಮರಾಟರೊಡನೆ ಕಾದುತ್ತಿತ್ತು. ಈ ಪ್ರಚಂಡಸೈನ್ಯದೊಡನೆ ಶಹಾವಲೀಖಾನನು ಮರಾಟರಿಗೆ ಎದುರಾಗಿ ಕಾದುತ, ಅವರ ಪ್ರಚಂಡಪರಾಕ್ರಮಕ್ಕೆ ಅಳುಕಡೆ ಸ್ಥಳಬಿಟ್ಟು ಕದಲದೆ ನಿಂತುಕೊಂಡಿದ್ದನು. ಈ ವರನ ಸೈನ್ಯದ ನಂಬಿ ಗೆಯು ಅಬದಲಿಗೆ ವಿಶೇಷವಾಗಿ ಇತ್ತು; ಆದರೆ ಜೀವದ ಹಂಗುದೊರೆದು ಕಾದು ರುವ ಮರಾಟರ ವರಾಕ್ರಮಕ್ಕೆ ಅಂಥ ವಜೀರನ ಅಭೇದ್ಯಸೈನ್ಯವೂ ಈಡಾಗಲಿಲ್ಲ. ಮರಾಟರ ಹೊಡೆತವನ್ನು ತಾಳಲಾರದೆ ಅದು ಸಮರಭೂಮಿಯಿಂದ ಕಾಲದೆಗೆಯಹ ತಿತು, , ಅದನ್ನು ನೋಡಿ ಶಹಾವಲೀಖಾನನೂ, ಆತನ ವ ಗನಾದ ಅತಾಯಿಖಾನನೂ ತಮ್ಮ ಸೈನಿಕರನ್ನು ತಡೆಯಲು ವಿಶ್ವ ಪ್ರಯತ್ನ ಮಾಡಿದರು; ಆದರೆ ಅದರಿಂದ ಪ್ರಯೋ ಜನವೇನು ಆಗದೆ ಸೈನಿಕರು ದಾರಿಸಿಕ್ಕತ, ಓಡತೊಡಗಿದರು. ಆಗ ಶಹಾವಲ್ಲೇಖಾ ನನ ಸಂತಾಪವು ಮಿತಿಮೀರಿತು. ಆ ವೈದ್ಯ ವೀರನು ಸಿಟ್ಟಿನಭರದಲ್ಲಿ ತನ್ನ ಗಡದ ಕೂದಲುಗಳನ್ನು ಕಿತ್ತುತ್ತ ತನ್ನ ಸೈನಿಕರ ಕುರಿತು-“ವೀರರೇ, ಎತ್ತ ಓಡಿ ಹೋಗುವಿರಿ? ನಿಮ್ಮ ದೇಶವು ಯಾವಕಡೆಗೆ ಉಳಿಯಿತು? ನೀವು ಯುದ್ಧದಲ್ಲಿ ಪರಾಜಿತ ರಾದರೆ ಮರಾಟರು ನಿಮ್ಮನ್ನು ತುಂಡರಿಸಿತಲ್ಲದೆ ಬಿದ, ನಿಮ್ಮಂಥ ವೀರರಿಗೆ ಈಪಲಾ ಯನವು ಭೂಷಣವೆ? ಹಿಂದಿರುಗಿರಿ” ಎಂದು ಒದರುತ, ಓಡಿಹೋಗುವವರನ್ನು ತುಂಡ ರಿಸುತ್ತ, ತನ್ನ ಸೈನಿಕರನ್ನು ಹಿಂದಿರುಗಿಸಲಿಕ್ಕೆ ವಿಶ್ವ ಪ್ರಯತ್ನ ಮಾಡಿದನು; ಆದರೆ ಪ್ರಯೋಜನವೇನು ಆಗಲಿಲ್ಲ.

  • ಹೀಗೆ ಶಹಾವಲ್ಲೀ ಖಾನನು ತನ್ನ ಸೈನಿಕರನ್ನು ಹಿಂದಿರುಗಿಸಲು ಪ್ರಯತ್ನ ಮಾಡು ತಿರುವಾಗ ಆತನ ಕುದುರೆಯ ಬೆದರಿ ಆ ವೃದ್ದ ವಜ್ರನನ್ನು ಸಮರಭೂಮಿಯಿಂದ ಓಡಿಸಿಕೊಂಡು ಹೊಗಳತ್ತಿತು, ಆಗ ಆ ವೃದ್ದ ವೀಗನು ಕುದುರೆಯನ್ನು ನಿಲ್ಲಿಸಲು ಬೇಕಾದಷ್ಟು ಹತ್ತಿಸಿದನು; ಆದರೆ ಅದು ವಶವ ಗಲಿಲ್ಲ. ಕಡೆಗೆ ಆ ಪ್ರಚಂಡಾಶ್ವವು ವಜ್ರವನ್ನು ಹೊತ್ತುಕೊಂಡುಹೋಗಿ ಪುಟಚಂಡಿನಂತೆ ಆತನನ್ನು ಹಾರಿಸಿ ಒತ್ತಟ್ಟಿಗೆ ಒಗೆದುಬಿಟ್ಟಿತು. ಆಗ ಆ ವೃದ್ಧ ವಜ್ರನ ಮೆ ನುಗ್ಗಾಯಿತು. ಅಷ್ಟರಲ್ಲಿ ಆತನ ವಿರ ಪುತ್ರನಾದ ಅತಾಯಿಖಾನನು ಕುದುರೆ ಓಡಿಸುತ್ತ ಒಂದು, ತನ್ನ ತಂದೆಯನ್ನು ಹಿಡಿದೆತ್ತಿ ಮತ್ತೊಂದು ಕುದುರೆಯ ಮೇಲೆ ಕುಳ್ಳಿರಿಸಲು ಯತ್ನಿಸತೊಡಗಿದನು. ಇತ್ತ ಮರಾಟರ ವಿರಾವೇಶವು ವಿ:ತಿಮಿಾರಿ ಅವರು “ ಹರಹರಮಹಾದೇವ, ಜಯಭವಾನೀಎಂದು ಗರ್ಜಿ - ಸುತ್ತ ನಜೀರನ ಸೈನ್ಯವನ್ನು ಹಣಿಯುತ್ತ, ಅದನ್ನು ಭೇದಿಸಿ ತಾವು ಪಾರಾಗಿ ಹೋಗುವ ದಾರಿಯನ್ನು ಮಾಡಿಕೊಂಡರು. ಹೀಗೆ ಶಹಾವಖಾನನ ಸೈನ್ಯವನ್ನು ಭೇದಿಸಿದ್ದು