ನಿಂದ ಘಟಿಸಲಿಲ್ಲಾದ್ದರಿಂದ ಇನ್ನು ಮುಂದೆ ಯುದ್ಧದಲ್ಲಿ ಆತನ ಕೈಯ: ಪಲಾ ಕುವ ಪ್ರಸಂಗವು ಒದಗಿತು. ಒಳ್ಳೆ ಹಾಕ್ಕಿನಲ್ಲಿ ಹೋಳಕರನು ಭಾವುಸಾಹೇಬನಿಗೆ ಕೈ ತೋರಿಸಿದನು. ದಮಾಚೆಗೆ 'ಯಕವಾಡವು ಶತ್ರುಗಳ ಬೆನ್ನಟ್ಟುತ್ತ ನಡೆದ ಬಿಟ್ಟನು. ಅy ಶತ್ರುವಿನ ಬಳಿಯಲ್ಲಿ ಕಾದಿ ದಣಿಯದೆಯಿದ್ದ ಉತ್ಸಾಹ ತಾಲಿಯಾಗಿದ್ದ ಕಾದಿಟ್ಟ ದಾಡ್ಡ ಸೈನ್ಯವು ಯುದ್ಧಕ್ಕೆ ಸಿದ್ಧವಾಗಿತ್ತು. ಸುಜಾಉಲನು ತಟಸ್ರ ವ್ಯಕ್ತಿಯ ನ್ನು ಬಿಟ್ಟು ತನ್ನನ್ನು ಕೂಡಿಕೊಳ್ಳಲೊಲ್ಲನು. ಇದನ್ನೆಲ್ಲ ನೋಡಿ ಭಾವುಸಾಹೇಬನು ಜಯದ ಬಗ್ಗೆ ನಿರಾಶೆಪಡಹತ್ತಿದನು ಆ ವೀರನು ಎಷ್ಕಾ ಯುದ್ಧಗಳಲ್ಲಿ ಜಯವ ನ್ನು ಸಂಪಾದಿಸಿದವನಾಗಿದ್ದನು. ಆತನಿಗೆ ಈ ಸಂಗ್ರಾಮದ ಲಕ್ಷಣವು ನೆಟ್ಟಗೆ ಕಾಣ ಲಿಲ್ಲ, ಎದುರಿಗೆ ಕಾಣುವ ದುರಾಣಿಯ ಕಾದಿಟ್ಟ ಸೈನ್ಯದಿಂದ ತನ್ನ ದಣಿದು ಹೋಗಿದ್ದ ಸೈನ್ಯದ ಸಂಹಾರವು ನಿಶ್ಚಯವಾಗಿ ಆಗುವದೆಂದು ಆತನು ತಿಳಿದನು. ಈಗಾದರೂ ಹೋಳಕರನು ದುರಾಣಿಯ ಕಾದಿಟ್ಟ ಸೈನ್ಯದ ಸಮಾಚಾರ ತಕೊಳ್ಳಲು ಸಿದ್ಧನಾದರೆ, ತನಗೆ ಜಯವಾಗುವ ಸಂಭವವಿರುತ್ತದೆಂದು ತಿಳಿದು, ಆತನು ಒಬ್ಬ ರಾವುತನನ್ನು ಹೋಳ ಕರನ ಕಡೆಗೆ ಅಟ್ಟಿದನು. ಆ ರಾವುತನು ಕುದುರೆಯನ್ನು ಓಡಿಸುತ್ತ ಹೋಳಕರನ ಬಳಿಗೆ ಹೋಗಿ “ನೀವು ನಬಾಬ ಸುಜಾಉದ್ಘಾಲನಮೇಲೆ ಏರಿಹೋಗದೆ, ಮುರಾಣಿಯು ನಮ್ಮಮೇಲೆ ಅಟ್ಟಿರುವ ಆತನ ಕಾದಿಟ್ಟ ಸೈನ್ಯದ ಸಮಾಚಾರವನ್ನು ತಕ್ಕೊಂಡು ನಮ್ಮನ್ನು ರಕ್ಷಿಸಬೇಕು.” ಎಂದು ಸೂಚಿಸಿದನು. ಹೋಳಕನು ಈ ಕಾಲದಲ್ಲಿ ಭಾವು ಸಾಹೇಬನ ಈ ಅಪ್ಪಣೆಯನ್ನು ಪಾಲಿಸಿದ್ದರೆ, ಪಾನಿಪತದ (ಕುರುಕ್ಷೇತ್ರದಲ್ಲಿ ಯುದ್ಧದ ಸ್ವರೂಪವೇ ಬದಲಾಗುತ್ತಿತ್ತೆಂದು ಹೇಳಬಹುದು. ಬರಿಯ ಒಂದು ಯುದ್ಧದ ಸ್ವರೂ ಪವೇ ಏಕೆ, ಇಡಿಯ ಹಿಂದುಸ್ಥಾನದ ಇತಿಹಾಸದ ಸ್ವರೂಪವೇ ಬೇರೆ ವಿಧವಾ ಎರೆ ಯಲ್ಪಡುತ್ತಿತ್ತು! ಆದರೆ ಪ್ರಮವಾಚಕರೇ, ಹೀಗಾಗಿದ್ದರೆ ಹಾಗಾಗುತ್ತಿತ್ತೆಂದು ಹೇಳ ವದರಲ್ಲಿ ಏನು ಪ್ರಯೋಜನವದೆ? ಈಶರೀತಂತ್ರದಿಂದ ಕಾಲಕಾಲಕ್ಕೆ ಒದಗು ತಿದ್ದ ಸಂಗತಿಗಳು ನಮ್ಮ ಹಿತಕ್ಕಾಗಿಯೇ ಒದಗೊತ್ತಿರುತ್ತವೆಂದು ತಿಳಿದು ನಾವು ಸಮಾ ಧಾನಪಡತಕ್ಕದ್ದು. ಹೋಳಕರನು ತನ್ನ ಅಪ್ಪಣೆಯನ್ನು ನಡಿಸುವನೋ ಇಲ್ಲವೋ ಎಂದು ಆತುರದಿಂದ ನೋಡ ತಲಿದ್ದ ಭಾವೂಸಾಹೇಬನು ನಿರಾಶೆಪಡುವಂತೆ ಮಾರ ರಾಯನು ತನ್ನ ಸೈನ್ಯದೊಡನೆ ರಣಾಂಗಣದಿಂದ ಹೊರಟುಹೋಗಿಬಿಟ್ಟನು! ಇನ್ನು ಸುಜಾಉದೌಲನ ಸ್ವರೂಪವೇನಾಗುವದೆಂಬದನ್ನು ನೋಡುವದಕ್ಕಾಗಿ ಭಾವುವು ಅತ್ತ ಕಡೆಗೆ ಹೊರಳಿದನು; ಆದರೆ ಆ ಧೂರ್ತ ಸುಜಾನು ಹೋಳಕರನು ಹೊರಟುಹೋಗುವ ದು, ನೋಡು ಸುಮ್ಮನೆ ನಿಂತುಬಿಟ ದನು. ಅಷ .ರಲಿ ಒಬ, ಕರುಣ ಸರದಾ ರನು ಕುದುರೆಯನ್ನು ಓಡಿಸುತ್ತ ಭಾವುಸಾಹೇಬನ ಆನೆಯಬಳಿಗೆ ಬಂದು ವಿನಯದಿಂದ ಮುಜಲೆಮಾಡಿ “ಸರಕಾರ ಆ ಸ್ವಾರ್ಥಪರಾಯಣನಾದ ಸುಜ ಉದ್ಲ ನ ನಂಬಿಗ ಯು, ತಾವು ಸರ್ವಥಾ ಹಿಡಿಯಬಾರದು. ಆತನು ಗೆದ್ದ ಎತ್ತಿನ ಬಾಲ ಹಿಡಿಯುವ ವನಿರುವನು, ಮಿತ್ರತ್ವದ ಕಡೆಗೆ ಸರ್ವಥಾ ಆತನ ಲಕ್ಷವಿಲ್ಲ. ಜನ ಆಶೆಯನ್ನು
ಪುಟ:ಕುರುಕ್ಷೇತ್ರ ಗ್ರಂಥ.djvu/೧೧೧
ಗೋಚರ